Sirsi News: ಅತ್ತಿಗೆಯೊಂದಿಗೆ ಅಕ್ರಮ ಸಂಬಂಧ ಅಡ್ಡಿಯಾದ ಅಣ್ಣನನ್ನೇ ತಮ್ಮ ಕೊಚ್ಚಿ ಕೊಲೆ ಮಾಡಿದ ಘಟನೆ ಉತ್ತರ ಕನ್ನಡ ಜಿಲ್ಲೆಯ ಶಿರಸಿ ತಾಲೂಕಿನ ಇಟಗುಳಿ ಇಡ್ತಳ್ಳಿಯಲ್ಲಿ ನಡೆದಿದೆ.
ಕೊಲೆಯಾದ ವ್ಯಕ್ತಿ ಪರಮೇಶ್ವರ ಬಾಬು ನಾಯ್ಕ್(35) ಮತ್ತು ಕೊಲೆ ಮಾಡಿದ ವ್ಯಕ್ತಿ ಪರಮೇಶ್ವರ ತಿಮ್ಮಾ ನಾಯ್ಕ್(27) ಆಗಿದ್ದಾರೆ. ಇವರಿಬ್ಬರೂ ಸಂಬಂಧದಲ್ಲಿ ಚಿಕ್ಕಮ್ಮ ದೊಡ್ಡಮ್ಮನ ಮಕ್ಕಳಾಗಿದ್ದು, ಅಣ್ಣ-ತಮ್ಮನಾಗಿದ್ದಾರೆ.
ಆದರೆ ಪರಮೇಶ್ವರ್ ತಿಮ್ಮಾ ನಾಯ್ಕ್ ಎಂಬಾತ, ಸಹೋದರ ಪರಮೇಶ್ವರ್ ಬಾಬು ಪತ್ನಿ ಜತೆ ಕಳೆದ ಎರಡು ವರ್ಷಗಳಿಂದ ಅಕ್ರಮ ಸಂಬಂಧವಿರಿಸಿದ್ದ. ಆದರೆ ಈ ವಿಷಯ ತಿಳಿದಿದ್ದ ಬಾಬು ಪತ್ನಿಗೆ ಬುದ್ಧಿ ಹೇಳಿದ್ದ. ಆದರೆ ತಮ್ಮಿಬ್ಬರ ಅಕ್ರಮ ಸಂಬಂಧಕ್ಕೆ ಬಾಬು ಅಡ್ಡ ಬರುತ್ತಿದ್ದಾನೆಂದು ಪರಮೇಶ್ವರ್ ತಿಮ್ಮ, ನಿನ್ನೆ ನಿನ್ನ ಬಳಿ ಮಾತನಾಡುವುದಿದೆ ಎಂದು ಕರೆದು, ಪರಮೇಶ್ವರ್ ಬಾಬುವಿನ ಹತ್ಯೆ ಮಾಡಿದ್ದಾನೆ.
ಹತ್ತಿರದ ಕಾಡಿನಲ್ಲಿ ಹತ್ಯೆ ಮಾಡಿ, ಪರಮೇಶ್ವರ್ ತಿಮ್ಮಾ ನಾಯ್ಕ್ ಸ್ಥಳದಿಂದ ಪರಾರಿಯಾಗಿದ್ದಾನೆ. ಸದ್ಯ ಸ್ಥಳಕ್ಕೆ ಧಾವಿಸಿ, ಪರಿಶೀಲನೆ ನಡೆಸಿರುವ ಸ್ಥಳೀಯ ಪೋಲೀಸರು ಪ್ರಕರಣ ದಾಖಲಿಸಿ, ತನಿಖೆ ಮುಂದುವರಿಸಿದ್ದಾರೆ.




