Sandalwood: ನನಗೆ ಹೃದಯಾಘಾತವಾಗಿರಲಿಲ್ಲ: ನಟ ವಿನೋದ್ ಪ್ರಭಾಕರ್ ಸ್ಪಷ್ಟನೆ

Sandalwood: ನಟ ವಿನೋದ್ ಪ್ರಭಾಕರ ಕೆಲ ದಿನಗಳ ಹಿಂದೆ ಅನಾರೋಗ್ಯದಿಂದ ಆಸ್ಪತ್ರೆ ಸೇರಿದ್ದರು. ಇದೀಗ ಚಿಕಿತ್ಸೆ ಪಡೆದು, ಆರೋಗ್ಯವಾಗಿರುವ ವಿನೋದ್ ಮಾಧ್ಯಮಕ್ಕೆ ಸ್ಪಷ್ಟನೆ ನೀಡಿದ್ದಾರೆ.

ನನಗೆ ಹೃದಯಾಘಾತವಾಗಿರಲಿಲ್ಲ. ನಾನು ಆರೋಗ್ಯವಾಗಿದ್ದೇನೆ ಎಂದು ವಿನೋದ್ ಹೇಳಿದ್ದಾರೆ. ಬಲರಾಮನ ದಿನಗಳು ಫಸ್ಟ್ ಶೋ ವೇಳೆ ವಿನೋದ್ ಪ್ರಭಾಕರ್ ಥಿಯೇಟರ್‌ಗೆ ಭೇಟಿ ನೀಡಿದ್ದರು, ಈ ವೇಳೆ ಮಾತನಾಡಿದ ವಿನೋದ್, ನನಗೆ ಲೋ ಬಿಪಿಯಾಗಿತ್ತು. ಆಸ್ಪತ್ರೆಯಲ್ಲಿ ನಾರ್ಮಲ್ ಬೆಡ್ ಖಾಲಿ ಇರದ ಕಾರಣ, ಐಸಿಯುನಲ್ಲಿರಿಸಿ ಚಿಕಿತ್ಸೆ ನೀಡಿದ್ದಾರೆ. ಈಗ ಬರುವುದಕ್ಕೂ ಮುನ್ನ ಇಂಜೆಕ್ಷನ್ ಪಡೆದು ಬಂದಿದ್ದೇನೆ. ಈಗ ಸುಧಾರಿಸಿದ್ದೇನೆ ಎಂದು ವಿನೋದ್ ಪ್ರಭಾಕರ್ ಹೇಳಿದ್ದಾರೆ.

ಇನ್ನು ವಿನೋದ್ ಪ್ರಭಾಕರ್ ಅಭಿನಯದ ಬಲರಾಮನ ದಿನಗಳು ಮೂವಿ ಇಂದು ರಿಲೀಸ್ ಆಗಿದೆ. ಸಿನಿಮಾ ರಿಲೀಸ್‌ಗಾಗಿ ವಿನೋದ್ ಗಿಮಿಕ್ ಮಾಡಿದ್ದಾರೆಂದು ಕೆಲವರು ಹೇಳಿದ್ದರು. ಇದಕ್ಕೆ ಪ್ರತಿಕ್ರಿಯಿಸಿದ ವಿನೋದ್, ನಾನು 25ಕ್ಕೂ ಹೆಚ್ಚು ಸಿನಿಮಾ ಮಾಡಿದ್ದೇನೆ. ಈ ಸಿನಿಮಾಗಾಗಿ ಇಂಥ ಚೀಪ್ ಗಿಮಿಕ್ ಮಾಡುವ ಅಗತ್ಯವಿಲ್ಲ ಎಂದು ಗರಂ ಆಗಿದ್ದಾರೆ.

About The Author