Pakistan: ಪಾಕಿಸ್ತಾನದ ಮಾಜಿ ಕ್ರಿಕೇಟಿಗ ಶೋಯೇಬ್ ಅಖ್ತರ್ ಸಹೋದರನ ಅಂತ್ಯಕ್ರಿಯೆಯಲ್ಲಿ ಎಲ್ಇಟಿ ಉಗ್ರರು ಭಾಗಿಯಾಗಿರುವ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಈ ಮೂಲಕ ಪಾಕಿಸ್ತಾನ ಉಗ್ರರ ತವರು ಅನ್ನೋದು ಜಾಗತಿಕ ಮಟ್ಟದಲ್ಲಿ ಸಾಬೀತಾಗಿದೆ.
ಶೋಯೇಬ್ ಅಕ್ತರ್ ಸಹೋದರ ಶಾಹೀದ್ ಅಕ್ತರ್ ಜೂನ್ 24ರಂದು ನಿಧನವಾಗಿದ್ದು, ಅವರ ಅಂತ್ಯಕ್ರಿಯೆಯಲ್ಲಿ ಪಹಲ್ಗಾಂ ದಾಳಿಯ ಭಯೋತ್ಪಾದಕರು, ಮುಂಬೈ ದಾಳಿಯ ಭಯೋತ್ಪಾದಕರಾದ ಉಗ್ರ ಹಫೀಜ್ ಸಯೀದ್, ಜಮಾತ್ ಉದ್ ದಾವಾ, ಇನಾಮ್ ರೆಹಮಾನ್ ಸೇರಿ ಹಲವು ಉಗ್ರರು ಅಂತ್ಯಕ್ರಿಯೆಯಲ್ಲಿ ಭಾಗಿಯಾಗಿದ್ದರು.
ಈ ಅಂತ್ಯಕ್ರಿಯೆಯಲ್ಲಿ ಭಾಗಿಯಾಗಿದ್ದವರು ವಿಶ್ವಸಂಸ್ಥೆಯಿಂದ ಉಗ್ರರು ಎಂದು ಘೋಷಿಸಲ್ಪಟ್ಟವರು. ಅವರನ್ನೆಲ್ಲ ನಾವು ಜೈಲಿಗೆ ಕಳುಹಿಸಿದ್ದೇವೆ ಎಂದು ಪಾಕಿಸ್ತಾನ ಪದೇ ಪದೇ ಹೇಳುತ್ತಲಿತ್ತು. ಆದರೆ ಇದೀಗ ಸತ್ಯ ಆಚೆ ಬಂದಿದೆ.




