Political News: ಬಿಜೆಪಿ ಹಿರಿಯ ನಾಯಕ ಸಿ.ಎನ್.ಅಶ್ವತ್ಥ ನಾರಾಯಣ ಅವರು, ಸಂದರ್ಶನದಲ್ಲಿ ಮಾತನಾಡಿದ್ದು, ಹಲವು ಪ್ರಶ್ನೆಗಳಿಗೆ ಉತ್ತರಿಸಿದ್ದಾರೆ.
ಪ್ರಿಯಾಂಕ್ ಖರ್ಗೆ ಅವರು ಬಿಜೆಪಿ ವಿರುದ್ಧ, ಆರ್‌ಎಸ್‌ಎಸ್ ವಿರುದ್ಧ ಮಾತನಾಡುತ್ತಿರುವ ಬಗ್ಗೆ ಪ್ರತಿಕ್ರಿಯಿಸಿದ ಅಶ್ವತ್ಥ ನಾರಾಯಣ, ಅವರನ್ನು ಮಾತನಾಡಲು ಬಿಡಬೇಕು. ಎಷ್ಟು ಬೇಕೋ ಅಷ್ಟು ಮಾತನಾಡಲಿ, ಅದಕ್ಕೆ ನಾವು ಪ್ರತಿಕ್ರಿಯಿಸುವುದಿಲ್ಲ. ಏಕೆಂದರೆ, ಕಾಂಗ್ರೆಸ್ ಮುಗಿಸಲು ಪ್ರಿಯಾಂಕ್ ಖರ್ಗೆ ಮಾತ್ರ ಸಾಕು. ಮತ್ಯಾರು ಬೇಡ. ಅವರು ಆ ರೀತಿಯಾಗಿ ಹೇಳಿಕೆ ನೀಡಿ, ಪ್ರಸಿದ್ಧರಾಗುತ್ತಾರೆ. ಆದರೆ ಪಕ್ಷ ಮಾತ್ರ ನೆಲ ಕಚ್ಚುತ್ತೆ ಎಂದು ಅಶ್ವತ್ಥ ನಾರಾಯಣ್ ಹೇಳಿದ್ದಾರೆ.




