ಗೃಹಜ್ಯೋತಿಗೆ ವೋಟರ್ ಕಾರ್ಡ್ ಓಕೆ, ಪ್ಯಾನ್ ಕಾರ್ಡ್ ಯಾಕೆ? ಜಾತಿ ಪ್ರಮಾಣ ಪತ್ರ ಯಾಕೆ?: R.Ashok

Political News: ಕಾಂಗ್ರೆಸ್ ಸರ್ಕಾರದ ಅತ್ಯುತ್ತಮ ಗ್ಯಾರಂಟಿ ಯೋಜನೆಗಳಲ್ಲಿ 1 ಆದ ಗೃಹಜ್ಯೋತಿ ಯೋಜನೆಯನ್ನು ಕೆಲವರು ದುರುಪಯೋಗಪಡಿಸಿಕ“ಳ್ಳುತ್ತಿರುವ ಸಲುವಾಗಿ, ಮತ್ತೆ ಗೃಹಜ್ಯೋತಿಗೆ ಅರ್ಜಿ ಸಲ್ಲಿಸಬೇಕು ಎಂದು ರಾಜ್ಯ ಸರ್ಕಾರ ಆದೇಶ ಹ“ರಡಿಸಿದೆ. ಈ ಕಾರಣಕ್ಕೆ ಅರ್ಜಿ ಸಲ್ಲಿಸುವಾಗ, ಪಾಸ್‌ಪೋರ್ಟ್ ಸೈಜ್ ಫೋಟೋ, ಪ್ಯಾನ್ ಕಾರ್ಡ್, ಆಧಾರ್ ಕಾರ್ಡ್, ವೋಟರ್ ಕಾರ್ಡ್, ಜಾತಿ ಪ್ರಮಾಣ ಪತ್ರ ಎಲ್ಲವನ್ನೂ ನೀಡಬೇಕಾಗುತ್ತದೆ ಎಂದು ಹೇಳಲಾಗಿದೆ.

ಈ ಬಗ್ಗೆ ಪ್ರಶ್ನೆ ಎತ್ತಿರುವ ವಿಪಕ್ಷ ನಾಯಕ ಆರ್.ಅಶೋಕ್, ಗೃಹಜ್ಯೋತಿಗೆ ವೋಟರ್ ಕಾರ್ಡ್ ಓಕೆ, ಪ್ಯಾನ್ ಕಾರ್ಡ್ ಯಾಕೆ..? ಜಾತಿ ಪ್ರಮಾಣ ಪತ್ರ ಯಾಕೆ? ಎಂದು ಪ್ರಶ್ನಿಸಿದ್ದಾರೆ. ಚುನಾವಣೆಗೆ ಮುನ್ನ “ಕಾಕಾ ಪಾಟೀಲನಿಗೂ ಫ್ರೀ, ಮಹಾದೇವಪ್ಪನಿಗೂ ಫ್ರೀ, ಎಲ್ಲರಿಗೂ ಫ್ರೀ” ಎಂದು ಗಂಟಲು ಹರಿದುಕೊಳ್ಳುವಂತೆ ಬೊಬ್ಬೆ ಹೊಡೆದು ಅಧಿಕಾರಕ್ಕೆ ಬಂದ ಕಾಂಗ್ರೆಸ್ ಸರ್ಕಾರ, ಇಂದು ಕರ್ನಾಟಕದ ಜನತೆಗೆ ದ್ರೋಹ ಬಗೆಯಲು ಹೊರಟಿದೆ. ಖಜಾನೆ ಸಂಪೂರ್ಣ ದಿವಾಳಿಯಾಗಿರುವುದನ್ನು ಮುಚ್ಚಿಡಲು, ಈಗ ಗೃಹಜ್ಯೋತಿ ಯೋಜನೆಯ ಫಲಾನುಭವಿಗಳ ಸಂಖ್ಯೆಗೆ ಕತ್ತರಿ ಹಾಕಲು ಈ ಸರ್ಕಾರ ಮನೆ-ಮನೆ ಪರಿಶೀಲನೆಯ ಹೊಸ ಹುನ್ನಾರ ನಡೆಸಿದೆ ಎಂದು ಅಶೋಕ್ ಆರೋಪಿಸಿದ್ದಾರೆ.

ಗೃಹಜ್ಯೋತಿ ಫಲಾನುಭವಿಗಳ ಮರುಪರಿಶೀಲನೆ ಹೆಸರಿನಲ್ಲಿ ಮನೆಗೆ ಬರುವ ಎಸ್ಕಾಂ ಸಿಬ್ಬಂದಿಗೆ ಪ್ಯಾನ್ ಕಾರ್ಡ್ (PAN Card) ಮತ್ತು ಜಾತಿ ಪ್ರಮಾಣ ಪತ್ರವನ್ನು ತೋರಿಸಬೇಕಂತೆ! ಸಿಎಂ ಡಿ.ಕೆ.ಶಿವಕುಮಾರ್ ಅವರೇ, ಚುನಾವಣೆಗೆ ಮುನ್ನ ಅಧಿಕಾರಕ್ಕೆ ಬರುವ ಹಪಾಹಪಿಯಲ್ಲಿ ಯಾವುದೇ ಷರತ್ತಿಲ್ಲದೆ ಎಲ್ಲರಿಗೂ 200 ಯೂನಿಟ್ ಉಚಿತ ವಿದ್ಯುತ್ ಎಂದು ಹೇಳಿ, ಈಗ ಆದಾಯ ಮತ್ತು ಜಾತಿಯ ಆಧಾರದ ಮೇಲೆ ಅರ್ಹತೆ ನಿರ್ಧಾರ ಮಾಡಲು ಹೊರಟಿರುವುದು ಯಾವ ಸೀಮೆ ಗ್ಯಾರೆಂಟಿ ಸ್ವಾಮಿ?

ಇಷ್ಟಕ್ಕೂ ಉಚಿತ ವಿದ್ಯುತ್ ನೀಡಲು ಜಾತಿ ಪ್ರಮಾಣ ಪತ್ರ ಯಾಕೆ?: ಗೃಹಜ್ಯೋತಿ ಯೋಜನೆಯ ಫಲಾನುಭವಿಗಳು ನಮ್ಮ ರಾಜ್ಯದ ನಿವಾಸಿಗಳೋ, ಮತದಾರರೋ ಅಲ್ಲವೋ ಅಂತ ನಿರ್ಧಾರ ಮಾಡೋಕೆ ವೋಟರ್ ಕಾರ್ಡ್ ಅಥವಾ ಆಧಾರ್ ಕಾರ್ಡ್ ಸಾಕು. ಆದರೆ ಅವರ ಜಾತಿ ಯಾವುದು, ಆದಾಯ ಎಷ್ಟು ಎನ್ನುವ ಮಾಹಿತಿ ಯಾಕೆ ಬೇಕು? ಎಂದು ಸಾಲು ಸಾಲು ಪ್ರಶ್ನೆ ಕೇಳಿರುವ ಆರ್.ಅಶೋಕ್, ಕಾಂಗ್ರೆಸ್ ಸರ್ಕಾರದ ನಿರ್ಧಾರಕ್ಕೆ ವಿರೋಧ ವ್ಯಕ್ತಪಡಿಸಿದ್ದಾರೆ.

ಪ್ಯಾನ್ ಕಾರ್ಡ್ ಮತ್ತು ಜಾತಿ ಪ್ರಮಾಣ ಪತ್ರ ಕೇಳುವ ಮೂಲಕ ನೀವು ಯಾರನ್ನು ಯೋಜನೆಯಿಂದ ಹೊರದಬ್ಬಲು ಸ್ಕೆಚ್ ಹಾಕುತ್ತಿದ್ದೀರಿ? ಗ್ಯಾರಂಟಿಗಳನ್ನು ನಿಭಾಯಿಸಲು ಹಣವಿಲ್ಲದೆ ಒದ್ದಾಡುತ್ತಿರುವ ಈ ಲೂಟಿ ಸರ್ಕಾರ, ಹೇಗಾದರೂ ಮಾಡಿ ಲಕ್ಷಾಂತರ ಬಡ ಹಾಗೂ ಮಧ್ಯಮ ವರ್ಗದ ಜನರನ್ನು ಗೃಹಜ್ಯೋತಿಯಿಂದ ವಂಚಿಸಲು ಈ U-Turn ನೀತಿಯನ್ನು ತಂದಿದೆ. ಬಡವರ ಹೊಟ್ಟೆಗೆ ಹೊಡೆಯುವ, ಸುಳ್ಳು ಭರವಸೆಗಳ ಮೂಲಕ ಅಧಿಕಾರ ಹಿಡಿದು ಈಗ ಜನರನ್ನು ದಾಖಲೆಗಳ ಹೆಸರಿನಲ್ಲಿ ಸತಾಯಿಸುತ್ತಿರುವ ಈ ಜನವಿರೋಧಿ ಸರ್ಕಾರ ಜನರ ಹಕ್ಕನ್ನು ಕಸಿದುಕೊಳ್ಳಲು ನಾವು ಬಿಡುವುದಿಲ್ಲ! ಎಂದು ಆರ್.ಅಶೋಕ್ ಹೇಳಿದ್ದಾರೆ.

About The Author