Spiritual: ಆಹಾರ ಅನ್ನೋದು ಕೂಡ ಲಕ್ಷ್ಮೀ ಕೃಪೆಯಿಂದಲೇ ನಮಗೆ ಸಿಗುವುದು. ಹಾಗಾಗಿ ನಾವು ಸಿಗುವ ಆಹಾರವನ್ನು ಗೌರವಿಸಿ, ದಾನ ಮಾಡಬೇಕು. ಹಾಗಾಗಿ ನಾವಿಂದು ಆಹಾರ ಸೇವಿಸುವ ಮುನ್ನ ಮತ್ತು ನಂತರ ಏನು ಮಾಡಬೇಕು ಎಂದು ಹೇಳಲಿದ್ದೇವೆ.
ಆಹಾರ ಸೇವಿಸುವ ಮುನ್ನ ನಾವು ಗೋವಿಗೆ ಆಹಾರ ನೀಡಬೇಕು. ಗೋವಿಗೆ ಎಂದಿಗೂ ನಾವು ತಿಂದು ಉಳಿದ ಆಹಾರ ನೀಡಬಾರದು ಎಂದು ಹೇಳಲಾಗುತ್ತದೆ. ಏಕೆಂದರೆ ಗೋವನ್ನು ಗೋಮಾತೆ ಎಂದು ಕರೆಯಲಾಗುತ್ತದೆ.
ಗೋವಿನ ದೇಹದಲ್ಲಿ ದೇವತೆಗಳ ವಾಸವಿರುತ್ತದೆ ಎಂದು ನಂಬಲಾಗಿದೆ. ಹಾಗಾಗಿ ನಾವು ಗೋವಿಗೆ ತಿಂದು ಉಳಿದ ಆಹಾರ ನೀಡಬಾರದು ಅಂತಾರೆ ಹಿರಿಯರು. ಹಾಗಾಗಿ ನಾವು ಅಡುಗೆ ಮಾಡಿದಾಗ ಪ್ರಥಮ ಭಾಗವನ್ನು ನಾವು ಗೋವಿಗೆ ನೀಡಬೇಕು.ಅಲ್ಲಿಗೆ ನಾವು ಆಹಾರವನ್ನು ದೇವರಿಗೆ ನೈವೇದ್ಯ ಮಾಡಿದ ಹಾಗಾಗುತ್ತದೆ.
ಹೀಗೆ ಮಾಡುವುದರಿಂ ನಮ್ಮ ಮನೆಯಲ್ಲಿ ಎಂದಿಗೂ ಆಹಾರದ ಸಮಸ್ಯೆ ಬರುವುದಿಲ್ಲ ಅನ್ನೋ ನಂಬಿಕೆ ಇದೆ. ಇನ್ನು ಆಹಾರ ಸೇವನೆಯ ಬಳಿಕ ಉಳಿದ ಆಹಾರವನ್ನು ನಾಯಿಗೆ ನೀಡಬೇಕು. ನಾಯಿ ಭೈರವನ ವಾಹನವಾಗಿದ್ದು, ನಾಯಿಗೆ ಆಹಾರ ನೀಡಿದರೆ, ಯಮನ ಕೃಪೆಗೆ ಪಾತ್ರರಾಗುತ್ತೇವೆ. ನಮ್ಮ ಆರೋಗ್ಯ, ಆಯುಷ್ಯ ಉತ್ತಮವಾಗಿರುತ್ತದೆ ಅನ್ನೋ ನಂಬಿಕೆ ಇದೆ. ಹಾಗಾಗಿ ಪ್ರಥಮ ಆಹಾರ ಗೋವಿಗೆ ಮತ್ತು ನಂತರದ ಆಹಾರ ನಾಯಿಗೆ ನೀಡುವುದು ವಾಡಿಕೆ.




