National News: ಸೀಯಾ ಅಗರ್ವಾಲ್ ಎಂಬಾಕೆ ತನ್ನ ಪ್ರಿಯತಮ ಚೇತನ್ ಜತೆ ಸೇರಿ, ಮದುವೆ ಫಿಕ್ಸ್ ಆಗಿದ್ದ ವರ ಕೇತನ್ನನ್ನು ಲೋಹ್ಘಡ್ ಫೋರ್ಟ್ನಿಂದ ತಳ್ಳಿ ಹತ್ಯೆ ಮಾಡಿದ್ದ ಪ್ರಕರಣದ ಬಗ್ಗೆ ದಂತ ವೈದ್ಯೆ ಅಪಹಾಸ್ಯ ಮಾಡಿದ್ದಳು. ಇದೀಗ ಆಕೆಯನ್ನು 5 ವರ್ಷ ಅಮಾನತು ಮಾಡಲಾಗಿದೆ.
ಡಾ.ಮುಸ್ಕಾನ್ ಸೋನಿ ಎಂಬಾಕೆ ಅಮಾನತಾದ ವೈದ್ಯೆಯಾಗಿದ್ದಾಳೆ. ಅಖಿಲ ಭಾರತ ದಂತ ವೈದ್ಯ ವಿದ್ಯಾರ್ಥಿಗಳ ಮತ್ತು ಶಸ್ತ್ರ ಚಿಕಿತ್ಸಕರ ಸಂಘ ಈ ನಿರ್ಧಾರ ಮಾಡಿದ್ದು, ಡಾ.ಮುಸ್ಕಾನ್ನನ್ನು 5 ವರ್ಷ ಅಮಾನತು ಮಾಡಿದೆ.
ಮಧ್ಯಪ್ರದೇಶದ ಎಐಡಿಎಸ್ಎ ಸಂಘಟನೆಯ ಖಜಾಂಚಿಯಾಗಿದ್ದ ಮುಸ್ಕಾನ್ ಇನ್ಸ್ಟಾಗ್ರಾಮ್ ಸ್ಟೋರಿಯಲ್ಲಿ ವೀಡಿಯೋ ಶೇರ್ ಮಾಡಿದ್ದರು. ಅದರಲ್ಲಿ ಕೇತನ್ ಸಾವಿನ ಕುರಿತು ವ್ಯಂಗ್ಯವಾಗಿ ಮಾತನಾಡಿದ್ದರು. ಹೀಗಾಗಿ ಮುಸ್ಕಾನ್ನನ್ನು 5 ವರ್ಷಗಳ ಕಾಲ ಅಮಾನತು ಮಾಡಲಾಗಿದೆ. ಆಕೆ ಮಾಡಿದ ಈ ಕೆಲಸಕ್ಕೆ 5 ವರ್ಷಗಳ ಕಾಲ ಆಕೆ ಎಲ್ಲಿಯೂ ಕೆಲಸ ಮಾಡುವಂತಿಲ್ಲ. ಯಾವುದೇ ಕ್ಲಿನಿಕ್ ಓಪನ್ ಮಾಡುವಂತಿಲ್ಲ.
ಇನ್ನು ಹಂತಕಿ ಸೀಯಾ ಮತ್ತು ಆಕೆಯ ಪ್ರಿಯಕರ ಚೇತನ್ನನ್ನು ಪೋಲೀಸರು ಬಂಧಿಸಿ, ಜೈಲಿಗೆ ತಳ್ಳಿದ್ದಾರೆ. ಸದ್ಯ ಕೋರ್ಟ್ನಲ್ಲಿ ವಿಚಾರಣೆ ನಡೆಯುತ್ತಿದ್ದು, ಪೋಲೀಸರು ತನಿಖೆ ಮುಂದುವರಿಸಿದ್ದಾರೆ.




