Recipe: ಶಾಲೆಗೆ ಹೋಗುವಾಗ ಮಕ್ಕಳಿಗೆ ಈ ತಿಂಡಿ ಮಾಡಿಕೊಟ್ರೆ ಟಿಫಿನ್ ಖಾಲಿಯಾಗೋದು ಗ್ಯಾರಂಟಿ

Recipe: ಬೇಕಾಗುವ ಸಾಮಗ್ರಿ: 1 ಕಪ್ ಜೋಳದ ಹುಡಿ, ಕಾಲು ಕಪ್ ಕಡಲೆ ಹುಡಿ, ಬೇಕಾದ್ರೆ ಸ್ವಲ್ಪ ರಾಗಿ ಹುಡಿ, 1 ತುರಿದ ಕ್ಯಾರೆಟ್, ಅರ್ಧ ತುರಿದ ಬೀಟ್‌ರೂಟ್‌, ತುರಿದ ಪನೀರ್, ಕೊತ್ತೊಂಬರಿ ಸೊಪ್ಪು, ಶುಂಠಿ ಪೇಸ್ಟ್, ಅರಿಶಿನ, ಜೀರಿಗೆ, ಖಾರದ ಪುಡಿ, ಉಪ್ಪು, ಎಳ್ಳು, ಸಣ್ಣಗೆ ಹೆಚ್ಚಿನ ಕರಿಬೇವು, ಎಣ್ಣೆ.

ಮಾಡುವ ವಿಧಾನ: ಮಿಕ್ಸಿಂಗ್‌ ಬೌಲ್‌ಗೆ ಜೋಳದ ಹುಡಿ, ಕಡಲೆ ಹುಡಿ, ರಾಗಿ ಹುಡಿ, ತುರಿದ ಕ್ಯಾರೆಟ್, ಬೀಟ್ರೂಟ್ ತುರಿ, ತುರಿದ ಪನೀರ್, ಕೊತ್ತೊಂಬರಿ ಸೊಪ್ಪು, ಶುಂಠಿ ಪೇಸ್ಟ್, ಅರಿಶಿನ, ಜೀರಿಗೆ, ಖಾರದ ಪುಡಿ, ಉಪ್ಪು, ಎಳ್ಳು, ಸಣ್ಣಗೆ ಹೆಚ್ಚಿನ ಕರಿಬೇವು, ಎಣ್ಣೆ ಅಗತ್ಯವಿದ್ದರೆ, ಸ್ವಲ್ಪ ಸ್ವಲ್ಪ ನೀರು ಸೇರಿಸಿ, ಹಿಟ್ಟು ರೆಡಿ ಮಾಡಿ.

ಈಗ ಬಾಳೆ ಎಲೆ ಅಥವಾ ಬಟರ್ ಪೇಪರ್‌ ಮೇಲೆ ಈ ಮಿಶ್ರಣವನ್ನು ತಟ್ಟಿ ಎಣ್ಣೆ ಹಾಕಿ ಕಾಯಿಸಿದರೆ, ಆರೋಗ್ಯ ಭರಿತವಾದ ಮತ್ತು ರುಚಿಯಾದ ಜೋಳ-ಬೀಟ್‌ರೂಟ್ ಥಾಲಿಪಿಟ್ ರೆಡಿ. ಇದನ್ನು ನೀವು ಚಟ್ನಿ ಪುಡಿ, ಕಾಯಿ ಚಟ್ನಿ, ಬೆಣ್ಣೆ, ತುಪ್ಪ, ಎಣ್ಣೆ ಜತೆ ಸವಿಯಬಹುದು.

About The Author