Health Tips: ಸಣ್ಣವರಿದ್ದಾಗ ಹಿರಿಯರು ಮಕ್ಕಳು ಮಾಡುವ ತಪ್ಪುಗಳನ್ನು ಕಂಡು, ಹಾಗೆ ಮಾಡಬಾರದು ಎಂದು ಹೇಳುತ್ತಿದ್ದರು. ಅಲ್ಲದೇ ಈ ಅಭ್ಯಾಸ ಬಿಡಿ, ಇಲ್ಲದಿದ್ದರೆ, ಅವಮಾನ ಅನುಭವಿಸಬೇಕಾಗುತ್ತದೆ ಎಂದು ಹೇಳುತ್ತಿದ್ದರು. ಸತ್ಯಕ್ಕೂ ಅಂಥ ಅಭ್ಯಾಸಗಳು ನಮಗೆ ಅವಮಾನ ಮಾಡುವಂಥ ಅಭ್ಯಾಸಗಳೇ ಆಗಿತ್ತು. ಹಾಗಾದ್ರೆ ಆ ಕೆಟ್ಟ ಅಭ್ಯಾಸಗಳು ಯಾವುದು ಅಂತಾ ತಿಳಿಯೋಣ ಬನ್ನಿ.
ತಲೆ ಮೇಲೆ ಕೈ ಇರಿಸಿ ಕೂರುವುದು: ಸುಮ್ಮನೆ ಕುಳಿತಾಗ ಅಥವಾ ನಾವು ಫೋನ್ ಬಳಸುವಾಗ ತಲೆ ಮೇಲೆ ಕೈ ಇರಿಸಿ ಕುಳಿತರೆ, ಮನೆಯಲ್ಲಿರುವ ಹಿರಿಯರು ತಲೆ ಮೇಲಿಂದ ಕೈ ತೆಗೆಯಿರಿ ಎಂದು ಹೇಳುತ್ತಾರೆ. ಅವರ್ಯಾಕೆ ಹೀಗೆ ಹೇಳುತ್ತಾರೆ ಎಂದರೆ, ಅವರ ಪ್ರಕಾರ ಇದು ಮುಂದೆ ಬರುವ ಸಮಸ್ಯೆಯ ಸಂಕೇತ. ಹಾಗಾಗಿ ನಮಗೆ ಯಾವ ಸಮಸ್ಯೆ ಬರಬಾರದು ಎಂದು ಹಿರಿಯರು ತಲೆ ಮೇಲಿಂದ ಕೈ ತೆಗಿ ಎನ್ನುತ್ತಿದ್ದರು.
ಎರಡೂ ಕೈಯಿಂದ ತಲೆ ಕೆರೆಯುವುದು: ಪದೇ ಪದೇ ಎರಡೂ ಕೈಯಿಂದ ನೀವು ತಲೆ ಕೆರೆಯುತ್ತಿದ್ದೀರಿ ಎಂದರೆ, ನೀವು ಸ್ವಚ್ಛವಾಗಿ ಇಲ್ಲವೆಂದರ್ಥ. ಹಾಗಾಗಿಯೇ ಹಿರಿಯರು ಈ ಕೆಲಸ ಮಾಡಿದ್ದಲ್ಲಿ, ಲಕ್ಷ್ಮೀ ದೇವಿ ಕೋಪಗ“ಳ್ಳುತ್ತಾಳೆ ಎಂದು ಹೇಳುತ್ತಿದ್ದರು. ಏಕೆಂದರೆ ಸ್ವಚ್ಛತೆ ಇಲ್ಲದ ಕಡೆ ಲಕ್ಷ್ಮೀ ದೇವಿ ನೆಲೆಸುವುದಿಲ್ಲ.
ಲಟ್ಟಿಗೆ ತೆಗೆಯುವುದು: ಲಟ್ಟಿಗೆ ತೆಗೆಯುವುದೆಂದರೆ ದರಿದ್ರ ಆಹ್ವಾನಿಸಿದಂತೆ ಎಂದು ಹೇಳಲಾಗುತ್ತದೆ. ಏಕೆಂದರೆ, ಲಟ್ಟಿಗೆ ತೆಗೆಯುವುದರಿಂದ ನಮ್ಮ ಬೆರಳುಗಳು ಬಲಹೀನವಾಗುತ್ತದೆ. ಬೆರಳು ಬಲಹೀನವಾದರೆ, ನಾವು ಮಾಡುವ ಕೆಲಸಗಳಿಗೆ ಅಡೆತಡೆಯಾಗುತ್ತದೆ. ಸರಿಯಾಗಿ ಕೆಲಸ ಮಾಡಲು ಸಾಧ್ಯವಾಗುವುದಿಲ್ಲ. ಹಾಗಾಗಿ ಲಟ್ಟಿಗೆ ತೆಗೆಯಬಾರದು ಎಂದು ಹಿರಿಯರು ಹೇಳುತ್ತಿದ್ದರು.
ಉಗುರು ಕಚ್ಚುವುದು: ಉಗುರು ಕಚ್ಚುವುದರಿಂದ ಮಾನಸಿಕ ನೆಮ್ಮದಿ ಇರುವುದಿಲ್ಲ ಅಂತಾ ಹಿರಿಯರು ಹೇಳುತ್ತಾರೆ. ಏಕೆಂದರೆ, ಉಗುರು ಕಚ್ಚುವುದರಿಂದ ಕೀಟಗಳು ನಮ್ಮ ಬಾಯಿಗೆ ಸೇರಿ, ರೋಗ ರುಜಿನಗಳನ್ನು ತರುತ್ತದೆ. ನಮ್ಮ ಆರೋಗ್ಯ ಸರಿ ಇಲ್ಲದಿದ್ದಾಗ, ನಾವು ಮಾನಸಿಕವಾಗಿ ನೆಮ್ಮದಿಯಾಗಿರಲು ಹೇಗೆ ಸಾಧ್ಯ..? ಈ ಕಾರಣಕ್ಕೆ ಉಗುರು ಕಚ್ಚಬಾರದು ಅಂತಾರೆ ಹಿರಿಯರು.




