Spiritual: ಕೆಲವು ಮನೆಗಳಲ್ಲಿ ಎಷ್ಟೇ ವರ್ಷವಾದರೂ ಕೆಲವರ ಗುಣ, ಪರಿಸ್ಥಿತಿ ಎರಡೂ ಸೇಮ್ ಇರುತ್ತದೆ. ಅವರು ಉದ್ಧಾರವಾಗುವುದೂ ಇಲ್ಲ, ಉದ್ಧಾರವಾಗುವವರ ಬಗ್ಗೆ ಉತ್ತಮ ಮಾತುಗಳನ್ನೂ ಆಡುವುದಿಲ್ಲ. ಅಂಥ ಮನೆಯಲ್ಲಿ ಸದಾ ನಕಾರಾತ್ಮಕ ಶಕ್ತಿಯೇ ಹೆಚ್ಚಾಗಿರುತ್ತದೆ. ಹಾಗಾಗಿ ಯಾವ ಗುಣದಿಂದ ಮನೆಯಲ್ಲಿ ನಕಾರಾತ್ಮಕ ಶಕ್ತಿ ಹೆಚ್ಚಾಗುತ್ತದೆ ಅಂತಾ ತಿಳಿಯೋಣ ಬನ್ನಿ.
ಬೇಡದ ಮಾತುಗಳನ್ನಾಡುವುದು: ನಾವು ಏನು ಮಾತನಾಡುತ್ತೆವೋ ಅದೇ ಆಗುತ್ತೇವೆ ಅಂತಾ ಹಲವರು ಹೇಳಿದ್ದನ್ನು ನೀವು ಕೇಳಿದ್ದೀರಿ. ನಮ್ಮ ಬಾಯಿಗೆ ಮಾತು ಬರುವ ಮುನ್ನ ನಮ್ಮ ಯೋಚನೆಗಳು ಉತ್ತಮವಾಗಿರಬೇಕು. ಯೋಚನೆ ಉತ್ತಮವಾಗಿದ್ದರೆ, ಅದೇ ರೀತಿಯ ಮಾತನ್ನಾಡುತ್ತೇವೆ. ಸಣ್ಣ ಯೋಚನೆ ಇದ್ದರೆ, ಬೇಡದ, ನಕಾರಾತ್ಮಕ ಮಾತುಗಳೇ ಮಾತನಾಡುತ್ತೇವೆ. ಮತ್ತು ಯಾವಾಗ ನಾವು ಬೇಡದ ನಕಾರಾತ್ಮಕ, ಅಸೂಯೆ ಭರಿತವಾದ ಮಾತನಾಡುತ್ತೇವೋ, ನಮ್ಮ ಜೀವನ ಅದೇ ರೀತಿ ಇರುತ್ತದೆ.
ಸೋಮಾರಿತನ: ಮನೆಯನ್ನು ಸ್ವಚ್ಛವಾಗಿರಿಸದೇ, ಬರೀ ಗಲೀಜಾಗಿರಿಸಿ, ಯಾವ ಕೆಲಸ ಮಾಡಲೂ ಸೋಮಾರಿತನ ಮಾಡುವವರಿದ್ದರೆ, ಅಂಥ ಮನೆಯಲ್ಲಿ ನಕಾರಾತ್ಮಕ ಶಕ್ತಿ ಹೆಚ್ಚಾಗಿರುತ್ತದೆ. ಹಣ ಬರುವ ಕೆಲಸ ಮತ್ತು ಹಣ ಬಾರದಿರುವ ಕೆಲಸ ಎರಡರಲ್ಲೂ ಉದಾಸೀನ ತೋರದೇ ನಾವು ಕೆಲಸ ಮಾಡಿದಾಗ ಉದ್ಧಾರವಾಗಲು ಸಾಧ್ಯ.
ಅತಿಯಾದ ಕೋಪ: 1 ಮನೆಯಲ್ಲಿ ಯಾರಾದರೂ ಸದಾ ಕೋಪದಲ್ಲೇ ಇದ್ದರೆ ಆ ಮನೆಯಲ್ಲಿ ನೆಮ್ಮದಿ ಅನ್ನೋದು ಇರೋದೇ ಇಲ್ಲ. ಹಾಗೆ ಕೋಪ ಮಾಡುವವರನ್ನು ಕಂಡರೆ, ಇವರು 1 ಮನೆಯಲ್ಲಿ ಇಲ್ಲದಿದ್ದರೆ, ಮನೆ ಎಷ್ಟು ಶಾಂತವಾಗಿರ್ತಿತ್ತು. ನೆಮ್ಮದಿಯಾಗಿರ್ತಿತ್ತು ಅಂತಾ ಅನ್ನಿಸೋಕ್ಕೆ ಶುರುವಾಗುತ್ತದೆ. ಹಾಗಾಗಿ ಯಾವ ಮನೆಯಲ್ಲಿ ಕೋಪದ ವಾತಾವರಣವಿರುತ್ತದೆಯೋ, ಅಂಥ ಮನೆಯಲ್ಲಿ ನಕಾರಾತ್ಮಕ ಶಕ್ತಿ ಹೆಚ್ಚಾಗಿರುತ್ತದೆ.
ಕೆಟ್ಟ ಚಾಳಿ: ಕೆಟ್ಟ ಚಾಳಿ ಇರುವವರ ಮನೆಯಲ್ಲಿ ಸದಾ ನಕಾರಾತ್ಮಕ ಪರಿಣಾಮವೇ ಇರುತ್ತದೆ. ಅಂದ್ರೆ ಕುಡಿಯುವುದು, ದೂಮ್ರಪಾನ ಮಾಡುವುದು, ಪರಸ್ತ್ರೀ-ಪರಪುರುಷನ ಸಹವಾಸ ಮಾಡುವುದು ಹೀಗೆ ಇತ್ಯಾದಿ ಚಾಳಿಗಳು, ಮನೆಯನ್ನ ನರಕವನ್ನಾಗಿಸುತ್ತದೆ.




