Chanakya Neeti: ಚಾಣಕ್ಯರ ಪ್ರಕಾರ ನಾವು ಯಾರಿಗೆ ಸಲಹೆ ನೀಡಬಾರದು?

Chanakya Neeti: ಸಲಹೆ ಅನ್ನೋದು ಜೀವನವನ್ನು ಬದಲಾಯಿಸುವ ವಿಷಯ. ಬುದ್ಧಿವಂತರು, ಹಿರಿಯರು, ಅನುಭವಿಗಳು ನೀಡುವ ಸಲಹೆಯನ್ನು ನಾವು ನಮ್ಮ ಜೀವನದಲ್ಲಿ ಅಳವಡಿಸಿಕ“ಂಡರೆ, ನಮ್ಮ ಜೀವನ ಅದ್ಭುತವಾಗಿರುತ್ತದೆ. ಹಾಗಂತ ನಿಮಗೆ ಯಾರಿಗಾದರೂ ಸಲಹೆ ನೀಡುವ ಮನಸ್ಸಾದಲ್ಲಿ, ಕೆಲವರಿಗಂತೂ ಎಂದಿಗೂ ಸಲಹೆ ನೀಡುವ ಯೋಚನೆಯೂ ಮಾಡಬೇಡಿ. ಹಾಗಾದ್ರೆ ನಾವು ಎಂಥವರಿಗೆ ಮತ್ತು ಯಾಕೆ ಸಲಹೆ ನೀಡಬಾರದು ಎಂದು ಚಾಣಕ್ಯರು ಹೇಳಿದ್ದಾರೆಂದು ತಿಳಿಯೋಣ ಬನ್ನಿ.

ಮೋಸಗಾರರಿಗೆ: ನೀವು ಮೋಸ ಮಾಡುವ ಅಥವಾ ಯಾರನ್ನಾದರೂ ಯಾಮಾರಿಸುವ ಜನರಿಗೆ ಎಂದಿಗೂ ಸಲಹೆ ನೀಡಬೇಡಿ. ಏಕೆಂದರೆ ಇಂಥವರು ಉತ್ತಮ ಸಲಹೆಗಳನ್ನು ದುರ್ಬಳಕ್ಕೆ ಮಾಡುತ್ತಾರೆ.

ಮೂರ್ಖರಿಗೆ: ಮೂರ್ಖರಿಗೆ ಸದಾ ಕಾಲ ತಾವು ಬುದ್ಧಿವಂತರಿಗೆ ಸಮ ಎಂಬ ಅಹಂಕಾರವಿರುತ್ತದೆ. ಹಾಗಾಗಿ ನೀವು ಮೂರ್ಖರಿಗೆ ಉತ್ತಮ ಸಲಹೆ ನೀಡಿದರು, ಅವರು ನಿಮ್ಮ ಸಲಹೆಗಳನ್ನು ಅಲ್ಲಗಳೆಯುತ್ತಾರೆ.

ನಕಾರಾತ್ಮಕ ಮನಸ್ಥಿತಿ ಉಳ್ಳವರಿಗೆ: ಇನ್ನು ನಕಾರಾತ್ಮಕ ಮನಸ್ಥಿತಿ ಉಳ್ಳವರು ಅಂದ್ರೆ ಯಾವಾಗಲೂ ಇತರರನ್ನು ದೂಷಿಸುತ್ತ, ತಾನೇ ಶ್ರೇಷ್ಟ ಎನ್ನುವ ಅಹಂಕಾರದಿಂದ ಮೆರೆಯುವವರು. ಇಂಥವರ ಬಳಿ ಹೋಗಿ ನೀವು ಸಲಹೆ ನೀಡಲು ಪ್ರಾರಂಭಿಸಿದರೆ, ಇತರರ ಬಳಿ ನಿಮ್ಮನ್ನು ದೂಷಿಸುತ್ತಾರೆ. ಹಾಗಾಗಿ ಇಂಥವರಿಗೆಲ್ಲ ನೀವು ಎಂದಿಗೂ ಸಲಹೆ ನೀಡಬೇಡಿ.

 

About The Author