Ramayana: ರಾಮನಂತೆ ಧೈರ್ಯವಿರಲಿ: ರಾವಣ ಸೀತೆಯನ್ನು ಅಪಹರಿಸಿದಾಗ, ಲಂಕಾಪತಿ ರಾಜ, ರಾಕ್ಷಸ ರಾವಣನನ್ನು ಕುರಿತು ರಾಮ ಹೆದರಲಿಲ್ಲ. ಬದಲಾಗಿ ಶತಪ್ರಯತ್ನ ಮಾಡಿ, ಸೀತೆಯನ್ನು ರಕ್ಷಿಸಿ ಕರೆತಂದ. ಅದೇ ರೀತಿ ನಾವು ನಮ್ಮ ಜೀವನದಲ್ಲಿ ಯಾವ ಸಮಸ್ಯೆಗಳಿಗೂ ಹೆದರದೆ ಧೈರ್ಯದಿಂದ ಅದನ್ನು ಎದುರಿಸಿ ನಿಲ್ಲಬೇಕು.
ರಾಮನಂತೆ ಎಲ್ಲರನ್ನೂ ಸಮನಾಗಿ ಕಾಣಿ: ರಾಮ ರಾಜ ಮಹಾರಾಜರನ್ನು, ಸಾಮಾನ್ಯ ಭಕ್ತೆಯಾಗಿದ್ದ ಶಬರಿಯನ್ನು ಸಮನಾಗಿ ಕಂಡಿದ್ದ. ಆತ ಯಾರಲ್ಲಿಯೂ ಬೇಧಭಾವ ಮಾಡಿರಲಿಲ್ಲ. ಅದೇ ರೀತಿ ಯಾವ ಮನುಷ್ಯ ಎಲ್ಲರನ್ನೂ ಸಮನಾಗಿ ಕಾಣುತ್ತಾನೋ, ಆತ ಉತ್ತಮ ಜೀವನ ನಡೆಸುತ್ತಾನೆ.
ರಾಮನಂತೆ ಎದುರಾಳಿಗಳ ಮೇಲೆ ಸ್ವಲ್ಪ ಕರುಣೆ ಇರಲಿ: ಎದುರಾಳಿಗಳು ಎಂದರೆ ಅವರು ನಮ್ಮ ಸ್ಪರ್ಧಿಗಳು. ಹಾಗಾಗಿ ಅವರನ್ನು ನಾವು ಶತ್ರುಗಳಂತೆ ನೋಡಬಾರದು. ದುಷ್ಟ ಬುದ್ಧಿ ತೋರಿಸಿದ್ದ ರಾವಣನ ಸಂಹಾರದ ಬಳಿಕ, ರಾಮ ವಿಭೀಷನ ಬಳಿ ರಾವಣನ ಅಂತ್ಯಕ್ರಿಯೆ ಮಾಡಲು ಸೂಚಿಸುತ್ತಾನೆ. ಮತ್ತು ವಿಭಿಷಣನಿಗೆ ಬೆಂಬಲವಾಗಿ ನಿಂತು, ನಮ್ಮ ಶತ್ರುತ್ವ ಇಲ್ಲಿಗೆ ಅಂತ್ಯವಾಗಿದೆ ಎನ್ನುತ್ತಾನೆ. ಅದೇ ರೀತಿ ಸ್ಪರ್ಧಿಗಳನ್ನು ಸ್ಪರ್ಧಿಗಳಂತೆ ನೋಡಿ, ಶತ್ರುಗಳಂತೆ ಅಲ್ಲ.
ರಾಮನಂತೆ ಒಗ್ಗಟ್ಟು ಬೆಳೆಸಿ: ರಾಮ ಹನುಮ ಮತ್ತು ವಾನರ ಗುಂಪಿನ ಜತೆ ಸೀತೆಯನ್ನು ಹುಡುಕಲು ಒಗ್ಗಟ್ಟಾಗಿ ಪ್ರಯತ್ನಿಸಿದ. ಅದೇ ರೀತಿ ನಾವು ನಮ್ಮ ಜೀವನದಲ್ಲಿ ಒಗ್ಗಟ್ಟಿನಿಂದ ಇದ್ದರೆ, ಯಶಸ್ಸು ಸಾಧಿಸಬಹುದು. ಇದಕ್ಕೆ ಉದಾಹರಣೆ ಕಂಪನಿ ಮಾಲೀಕರು. ಅವರು ಇಬ್ಬರು, ಮೂವರು ಎಂದು ಸ್ನಲ್ಪ ಸ್ವಲ್ಪ ಜನಕ್ಕೆ ಕೆಲಸ ನೀಡಿ, ತಮ್ಮ ಕಾರ್ಯವನ್ನು ಯಶಸ್ವಿಯಾಗಿಸಿ, ಕಂಪನಿ ಕಟ್ಟುವಲ್‌ಲಿ ಸಕ್ಸಸ್ ಆಗುತ್ತಾರೆ.




