Haveri News: ಹಾವೇರಿ: ಕಾರಹುಣ್ಣಿಮೆ ಸಂಭ್ರಮದ ಮಧ್ಯೆ ಹಾವೇರಿಯ ನರೇಗಲ್ ಗ್ರಾಮದಲ್ಲಿ ಹಿಂದೂ-ಮುಸ್ಲಿಂ ಗಲಭೆ ನಡೆದಿದ್ದ ಬಗ್ಗೆ ಮಾಜಿ ಸಿಎಂ ಬಸವರಾಜ್ ಬೊಮ್ಮಾಯಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಹಾವೇರಿಯ ನರೇಗಲ್ ಗ್ರಾಮಕ್ಕೆ ಭೇಟಿ ನೀಡಿದ ಮಾಜಿ ಸಿಎಂ, ಮಾಧ್ಯಮದ ಜತೆ ಮಾತನಾಡಿದ್ದು, ಜಿಲ್ಲೆಯಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣ ಸತ್ತು ಹೋಗಿದೆ. ನರೇಗಲ್ ಘಟನೆಗೆ ಪೊಲೀಸ್ ಇಲಾಖೆಯ ನಿರ್ಲಕ್ಷ್ಯವೇ ನೇರ ಕಾರಣ. ಈ ಘಟನೆ ಸಂಬಂಧಿಸಿದಂತೆ CPI, SI ಅಮಾನತು ಮಾಡಬೇಕು. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ವಿರುದ್ದವೂ ಕ್ರಮ ಜರುಗಿಸಲಿ ಎಂದು ಆಗ್ರಹಿಸಿದ್ದಾರೆ.
ಕೋಮು ಸೂಕ್ಷ್ಮ ಪ್ರದೇಶದಲ್ಲಿ 112 ವ್ಯವಸ್ಥೆಯಿಂದ ಕೆಲಸ ಆಗಲ್ಲ. ಘಟನೆಗೂ ಮುನ್ನ ಯಾವುದೇ ಮುನ್ನೆಚ್ಚರಿಕೆ ಕ್ರಮ ಕೈಗೊಂಡಿಲ್ಲ. ಕಾನೂನು ಸುವ್ಯವಸ್ಥೆ ಕಾಪಾಡಬೇಕಾದವರೇ ಹದೆಗೆಡಿಸಿದ್ದಾರೆ. ಈ ಗಲಭೆ ಬಗ್ಗೆ ಸೂಕ್ತವಾಗಿ SIT ರಚಿಸಿ ಸಮಗ್ರ ತನಿಖೆ ನಡೆಸಲಿ ಗ್ಯಾಂಗ್‌ರೇಪ್ ಆರೋಪಿಗಳ ಮೆರವಣಿಗೆ ನಡೆದಾಗಲೂ ಮೌನವಾಗಿದ್ದರು. ರಾಜಕೀಯ ತುಷ್ಟೀಕರಣಕ್ಕಾಗಿ ಕಾನೂನು ದುರುಪಯೋಗ ಆಗುತ್ತಿದೆ ಎಂದು ಮಾಜಿ ಸಿಎಂ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಗಲಭೆಯಲ್ಲಿ ಹಲ್ಲೆಗೆ ಒಳಗಾದವರನ್ನೇ ಆರೋಪಿಗಳನ್ನಾಗಿ ಮಾಡಿದ್ದಾರೆ. ಎರಡೂ ಕಡೆ ದೂರು ದಾಖಲಿಸಿ ಪ್ರಕರಣ ಮುಚ್ಚಿಹಾಕುವ ಯತ್ನವಾಗಿದೆ. ಈ SP ಬಂದ ಬಳಿಕ ಕೇಸ್‌ಗೆ ಕೌಂಟರ್ ಕೇಸ್‌ಗಳೇ ಹೆಚ್ಚಾಗಿವೆ. ಮುಖ್ಯಮಂತ್ರಿ ಹಾಗೂ ಗೃಹ ಸಚಿವರ ಗಮನಕ್ಕೆ ವಿಷಯ ತರುತ್ತೇನೆ. ಗಾಯಾಳುಗಳಿಗೆ ಎಲ್ಲಾ ರೀತಿಯಲ್ಲಿ ಕಾನೂನು ರಕ್ಷಣೆ ನೀಡುತ್ತೇನೆ ಎಂದು ಬಸವರಾಜ್ ಬ`ಮ್ಮಾಯಿ ಹೇಳಿದ್ದಾರೆ.




