Political News: ಗೃಹಲಕ್ಷ್ಮಿ ಅನುಷ್ಠಾನದಲ್ಲಿ ಹೈದರಾಲಿ ನೀತಿ ಅನುಸರಿಸುತ್ತಿದೆ ಕಾಂಗ್ರೆಸ್: ಸಿ.ಟಿ.ರವಿ

Political News: ಗೃಹಲಕ್ಷ್ಮಿ ಅನುಷ್ಠಾನದಲ್ಲಿ ಕಾಂಗ್ರೆಸ್ ಹೈದರಾಲಿ ನೀತಿ ಅನುಸರಿಸುತ್ತಿದೆ ಎಂದು ಬಿಜೆಪಿ ನಾಯಕ ಸಿ.ಟಿ.ರವಿ ವಾಗ್ದಾಳಿ ನಡೆಸಿದ್ದಾರೆ.

ಹೈದರಾಲಿ ತನ್ನ ಬಳಿ ಕೆಲಸ ಮಾಡುವವರಿಗೆ ಹೇಗೆ ಸಂಬಂಳ ನೀಡುತ್ತಿದ್ದನೆಂದರೆ, ಜನವರಿ ತಿಂಗಳ ದುಡ್ಡು 4ನೇ ತಾರೀಖಿಗೆ ಹಾಕುವ ಬದಲು 15ನೇ ತಾರೀಖಿಗೆ ಹಾಕುತ್ತಿದ್ದ. ಫಬ್ರವರಿ ಸಂಬಳ 25ನೇ ತಾರೀಖಿಗೆ ಹಾಕುತ್ತಿದ್ದ. ಮಾರ್ಚ್ ತಿಂಗಳ ಸಂಬಳ ಏಪ್ರಿಲ್‌ 4ನೇ ತಾರೀಖಿಗೆ ಹಾಕುತ್ತಿದ್ದ. ಹೀಗೆ ಮಾಡುತ್ತ ವರ್ಷದಲ್ಲಿ ಮೂರ್ನಾಲ್ಕು ತಿಂಗಳ ಸಂಬಳವನ್ನು ತಾನೇ ನುಂಗುತ್ತಿದ್ದ.

ಅದೇ ರೀತಿ ಕಾಂಗ್ರೆಸ್‌ನವರು ಗೃಹಲಕ್ಷ್ಮೀ ಯೋಜನೆಯಲ್ಲಿ ಹಣವನ್ನು ಹಾಕುತ್ತಿದ್ದಾರೆ. ಎಲೆಕ್ಷನ್ ಬಂದಾಗ ಹಣ ಹಾಕುತ್ತಾರೆ. ನಾಲ್ಕು ತಿಂಗಳ ಹಣವನ್ನು ಎರಡು ತಿಂಗಳ ಕಂತಿನಂತೆ ನೀಡುತ್ತಾರೆ. ಅಲ್ಲದೇ 19 ಸಾವಿರ ಜನರ ದುಡ್ಡು 1 ಖಾತೆಗೆ ಹೋಗಿದೆ. ಅದು 1 ಕೋ ಆಪರೇಟಿವ್ ಬ್ಯಾಂಕ್ ಖಾತೆ. ಇದು ಹೇಗೆ ಸಾಧ್ಯ ಎಂದು ರವಿ ಪ್ರಶ್ನಿಸಿದ್ದಾರೆ..

ಇದೇ ರೀತಿಯ 240 ಕೋಟಿ ಹಣವನ್ನು ಸಿಐಜಿ ಪತ್ತೆ ಹಚ್ಚಿದೆ. ಅದರಲ್ಲೂ ಸತ್ತವರ ಖಾತೆಗೂ ಹಣ ಹೋಗಿರುವುದು ತಿಳಿದುಬಂದಿದೆ. ಇದೇ ರೀತಿಯಾಗಿ ಕಾಂಗ್ರೆಸ್ ಗೃಹಲಕ್ಷ್ಮೀ ಯೋಜನೆಯಲ್ಲಿ ಸ್ಕ್ಯಾಮ್ ಮಾಡಿದೆ ಎಂದು ಸಿ.ಟಿ.ರವಿ ಹೇಳಿದ್ದಾರೆ.

About The Author