Mumbai: ರಹಸ್ಯವಾಗಿ ಚೇತನ್ ಜತೆ ವಿವಾಹವಾಗಿದ್ದಳು ಕೇತನ್ ಹಂತಕಿ ಸೀಯಾ ಘೋಯಲ್

Mumbai: ಸೀಯಾ ಘೋಯಲ್. ಉದ್ಯಮಿ ಕೇತನ್ ಅಗರ್ವಾಲ್‌ನನ್ನು ಹತ್ಯೆಗೈದ ಹಂತಕಿ. ಚೇತನ್ ಎಂಬಾತನ ಜತೆ ವಿವಾಹವಾಗಬೇಕು, ಸಂಸಾರ ಮಾಡಬೇಕು ಎಂಬ ಕಾರಣಕ್ಕೆ ಸೀಯಾ ಕೇತನ್‌ನನ್ನು ಹತ್ಯೆ ಮಾಡಿದ್ದಳು. ಲೋಹಘಢ್ ಫೋರ್ಟ್‌ನಿಂದ ದೂಡಿದ್ದಳು. ಬಳಿಕ ಆತ ಕಾಲು ಜಾರಿ ಬಿದ್ದ ಎಂದು ನಾಟಕವಾಡಿದ್ದಳು. ಆದರೆ ಪೋಲೀಸ್ ತನಿಖೆಯ ಬಳಿಕ ಇದು ನಾಟಕ, ಸಾಮಾನ್ಯ ಸಾವಲ್ಲ, ಹತ್ಯೆ ಎಂದು ತಿಳಿದಿತ್ತು.

ಇದೀಗ ಆ ಬಗ್ಗೆ ತನಿಖೆ ಮುಂದುವರೆದಿದ್ದು, ಸೀಯಾ ಮತ್ತು ಚೇತನ್ ಈ ಮುನ್ನವೇ ರಿಜಿಸ್ಟರ್ ವಿವಾಹವಾಗಿದ್ದರು. ಮತ್ತು ಅವರ ಕಾಲೇಜ್ ಸ್ನೇಹಿತರು ಅವರ ಮದುವೆಗೆ ಸಾಕ್ಷಿಯಾಗಿ ಸಹಿ ಹಾಕಿದ್ದರೆಂಬ ಸತ್ಯ ಬಯಲಿಗೆ ಬಂದಿದೆ.

ವಿಷಯ ತಿಳಿದ ಪೋಲೀಸರು ಆ ಸ್ನೇಹಿತರನ್ನು ಕರೆಸಿ, ವಿಚಾರಣೆ ನಡೆಸಿದ್ದು, ಆ ಸ್ನೇಹಿತರು ಸತ್ಯ ಬಾಯ್ಬಿಟ್ಟಿದ್ದಾರೆ. ತನಿಖೆ ಮುಂದುವರಿದ್ದು, ಇನ್ನೂ ಹಲವು ಕುತೂಹಲಕಾರಿ ಮಾಹಿತಿ ಬಯಲಾಗಬೇಕಿದೆ.

About The Author