ಬಂಟ್ವಾಳದ ಹಿಂದೂ ಯುವತಿ ಮೇಲೆ ಮುಸ್ಲಿಂ ಯುವಕನಿಂದ ಹಲ್ಲೆ ಖಂಡಿಸಿದ ಬಸನಗೌಡ ಪಾಟೀಲ್ ಯತ್ನಾಳ್

Political News: ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಬಸ್‌ ನಿಲ್ದಾಣದಲ್ಲಿ ಬಸ್‌ಗಾಗಿ ಕಾಾಯುತ್ತಿದ್ದ ಹಿಂದೂ ಯುವತಿಯ ಮೇಲೆ ಮುಸ್ಲಿಂ ಯುವಕ ಮಚ್ಚಿನಿಂದ ಹಲ್ಲೆ ಮಾಡಿ, ಹತ್ಯೆಗೆ ಯತ್ನಿಸಿದ್ದಾನೆ.ಸದ್ಯ ಯುವತಿಯನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

ಈ ಬಗ್ಗೆ ಹಿರಿಯ ನಾಯಕ ಬಸನಗೌಡ ಪಾಟೀಲ್ ಯತ್ನಾಳ್ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕಾಂಗ್ರೆಸ್ ಸರ್ಕಾರದ ವೋಟ್ ಬ್ಯಾಂಕ್ ರಾಜಕಾರಣದಿಂದಾಗಿ ಹಿಂದೂಗಳ ಮೇಲೆ ಮುಸಲ್ಮಾನರು ಮಾಡುತ್ತಿರುವ ದೌರ್ಜನ್ಯ, ಕೊಲೆ, ಮಾರಣಾಂತಿಕ ಹಲ್ಲೆ, ಲವ್ ಜಿಹಾದ್ ಮಿತಿಮೀರಿದೆ. ಕಾರ ಹುಣ್ಣಿಮೆಯಂದು ರೈತರ ಕೈ ಕತ್ತರಿಸಿದ ಮುಸಲ್ಮಾನರು ಇಂದು ಬಂಟ್ವಾಳದಲ್ಲಿ ಬಸ್ ಗಾಗಿ ಕಾಯುತ್ತಿದ್ದ ಹಿಂದೂ ಹೆಣ್ಣು ಮಗಳ ಮೇಲೆ ಮುಸ್ಲಿಂ ಯುವಕ ಮೊಹಮ್ಮದ್ ಜವ್ವಾರ್ ಎಂಬಾತ ಮಾರಣಾಂತಿಕ ಹಲ್ಲೆ ಮಾಡಿದ್ದಾನೆ.

ಹಿಂದೂ ಸಂಘಟನೆಗಳನ್ನು, ಹೆಣ್ಣು ಮಕ್ಕಳನ್ನು, ಕಾರ್ಯಕರ್ತರನ್ನು, ಸಕ್ರಿಯ ಹಿಂದೂ ಸಂಘಟನೆಯ ಯುವಕರನ್ನೇ ಗುರಿಯಾಗಿಸಿಕೊಂಡು ರಾಜ್ಯದಲ್ಲಿ ಹಲ್ಲೆಗಳು ನಡೆಯುತ್ತಿವೆ. ಸರ್ಕಾರ ನಮ್ಮ ರಕ್ಷಣೆಗೆ ಬರುತ್ತದೆ ಎಂಬ ಧೈರ್ಯದಿಂದಲೇ ಉದ್ದೇಶಪೂರ್ವಕವಾಗಿ ಹಲ್ಲೆಗಳು ನಡೆಯುತ್ತಿವೆ. ಸರ್ಕಾರ ತನ್ನ ವೋಟ್ ಬ್ಯಾಂಕ್ ಓಲೈಕೆ ನಿಲ್ಲಿಸಿ, ಈ ರೀತಿಯಾದ ಹಲ್ಲೆ ಮಾಡುವವರ ಮೇಲೆ ಸ್ಥಳದಲ್ಲೇ ಗುಂಡಿಕ್ಕಿ ಪಾಠ ಕಲಿಸಬೇಕು. ಇಲ್ಲದಿದ್ದರೆ, ಪರಿಸ್ಥಿತಿ ಕೈ ಮೀರುತ್ತದೆ ಎಂದು ಬಸನಗೌಡ ಪಾಟೀಲ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.

About The Author