Bollywood: ಹಲವು ಹಿಂದಿ ಸಿನಿಮಾದಲ್ಲಿ ತರಹೇವಾರಿ ಪಾತ್ರಗಳಿಗೆ ಬಣ್ಣ ಹಚ್ಚಿದ ರಾಜೇಶ್ ಶರ್ಮಾ ಅವರು, ಪ್ರಭಾಸ್ ಅವರ ಮುಂಬರುವ ಸಿನಿಮಾ ಶೂಟಿಂಗ್ನಲ್ಲಿ ಭಾಗವಹಿಸಿ, ಅನಾರೋಗ್ಯದಿಂದ ಆಸ್ಪತ್ರೆಟ ಸೇರಿದ್ದಾರೆ.
ಅವರು ಆಸ್ಪತ್ರೆ ಸೇರಿದ ಕಾರಣ ತಿಳಿದರೆ ನಿಮಗೂ ಶಾಕ್ ಆಗಬಹುದು. ಏಕೆಂದರೆ ರಾಜೇಶ್ ಶರ್ಮಾ ಅವರಿಗೆ ಯಾವುದೇ ಖಾಯಿಲೆ ಇರಲಿಲ್ಲ. ಶೂಟಿಂಗ್ ಬರುವ ಅವರು ಆರಾಮವಾಗಿಯೇ ಇದ್ದರು. ಆದರೆ ಶೂಟಿಂಗ್ ಸ್ಪಾಟ್ನಲ್ಲಿ ಅವರಿಗೆ ಹುಳ ಕಚ್ಚಿದೆ. ಇದರ ಪ್ರಭಾವವಾಗಿ ರಾಜೇಶ್ ಶರ್ಮಾ ಅವರು ಆಸ್ಪತ್ರೆ ಸೇರುವ ಪರಿಸ್ಥಿತಿ ಬಂದಿದೆ.
ಅವರಿಗೆ ವಿಷಪೂರಿತ ಜೇಡ ಕಚ್ಚಿದೆ ಎಂದು ಹೇಳಲಾಗಿದೆ. ಅವರು ಜೇಡ ಕಚ್ಚಿದ ತಕ್ಷಣ ನಿರ್ಲಕ್ಷ್ಯದಿಂದ ಇದ್ದು, ಯಾವುದೇ ಚಿಕಿತ್ಸೆ ಪಡೆದಿರಲಿಲ್ಲ. ಆದರೆ ಕೆಲ ಸಮಯದ ಬಳಿಕ ಅವರ ಆರೋಗ್ಯ ಹಾಳಾಗಿದೆ. ಬಳಿಕ ಅವರನ್ನು ಆಸ್ಪತ್ರೆಗೆ ಸೇರಿಸಲಾಗಿದೆ. ಸದ್ಯ ಅವರಿಗೆ ಚಿಕಿತ್ಸೆ ನೀಡಲಾಗುತ್ತಿದ್ದು, ಸೋಂಕು ಕಾಲಿಗೆಲ್ಲ ಹರಡಿದೆ. ಅದು ಶ್ವಾಸಕೋಶಕ್ಕೆ ಹರಡದಂತೆ ನೋಡಬೇಕು. ಇಲ್ಲದಿದ್ದಲ್ಲಿ ಜೀವಕ್ಕೆ ಅಪಾಯ ಎನ್ನಲಾಗಿದೆ. ರಾಜೇಶ್ ಶರ್ಮಾ ಇತ್ತೀಚೆಗೆ ರಿಲೀಸ್ ಆಗಿರುವ ಹಿಂದಿ ವೆಬ್ ಸಿರೀಸ್ ಪ್ರೀತಮ್ ಆ್ಯಂಡ್ ಪೆಡ್ರೋದಲ್ಲಿ ಸಣ್ಣ ಪಾತ್ರ ನಿರ್ವಹಿಸಿದ್ದರು.




