Uttara Kannada News: ಶಿರಸಿ : ಜಿಲ್ಲಾ ಪಂಚಾಯತ್ ಉತ್ತರ ಕನ್ನಡ, ತಾಲೂಕು ಪಂಚಾಯತ್ ಶಿರಸಿ, ನಗರ ಸಭೆ ಶಿರಸಿ ಇವರ ಸಹಯೋಗದಲ್ಲಿ ಇಂದು ತಾಲೂಕಿನಲ್ಲಿ ವಿಶೇಷ ಮತದಾರರ ಪಟ್ಟಿ ಪರಿಷ್ಕರಣೆ (SIR) ಕುರಿತು ಜಾಗೃತಿ ಕಾರ್ಯಕ್ರಮದ ಬೈಕ್ ಜಾಥಾವನ್ನು ಯಶಸ್ವಿಯಾಗಿ ನೆರವೇರಿಸಲಾಯಿತು.
ತಾಲೂಕಿನ ರಾಘವೇಂದ್ರ ಸರ್ಕಲ್ ನಿಂದ ಆರಂಭಗೊಂಡ ಜಾಥಾಗೆ ಸಹಾಯಕ ಆಯುಕ್ತರು ಹಾಗೂ ಮತದಾನ ನೋಂದಣಿ ಅಧಿಕಾರಿಗಳಾದ ಚಂದ್ರಶೇಖರ ಜಿ. ಅವರು ಹಸಿರು ನಿಶಾನೆ ಮೂಲಕ ಚಾಲನೆ ನೀಡಿದರು.
ಮತದಾರರ ಪಟ್ಟಿ ಶುದ್ಧೀಕರಣದ ಉದ್ದೇಶದಿಂದ ನಡೆಯುತ್ತಿರುವ SIR ಪ್ರಕ್ರಿಯೆಗೆ ಸಾರ್ವಜನಿಕರು ಸಂಪೂರ್ಣ ಸಹಕಾರದೊಂದಿಗೆ, ನಿಗದಿತ ದಾಖಲೆಗಳು, ಅವಶ್ಯಕ ಮಾಹಿತಿಗಳನ್ನು ನೀಡುವಂತೆ ಜಾಗೃತಿ ಮೂಡಿಸಲಾಯಿತು.
ಈ ಸಂದರ್ಭದಲ್ಲಿ ತಾಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿಗಳು ಹಾಗೂ ಮತದಾನ ನೋಂದಣಿ ನೋಡಲ್ ಅಧಿಕಾರಿಗಳಾದ ಚನ್ನಬಸಪ್ಪ ಹಾವಣಗಿ, ನಗರ ಸಭೆಯ ಕಮಿಷನರ್ ಪ್ರಕಾಶ್ ಚನ್ನಪ್ಪನವರ, ತಾಲೂಕು ಪಂಚಾಯತ್ ಮತ್ತು ನಗರ ಸಭೆಯ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಹಾಜರಿದ್ದರು.




