ರೈತರ ಭೂಮಿ ಕಸಿಯುವಲ್ಲಿ ರಣೋತ್ಸಾಹ ತೋರುವ ಸರ್ಕಾರಕ್ಕೆ, ಬೆಳೆ ಉಳಿಸಲು ಏಕೆ ನಿರುತ್ಸಾಹ?: ಕುಮಾರಸ್ವಾಮಿ

Political News: ಬಿಡದಿ ಟೌನ್‌ಶಿಪ್ ನಿರ್ಮಾಣಕ್ಕಾಗಿ ರಾಜ್ಯ ಸರ್ಕಾರ, ರೈತರ ವಿರುದ್ಧ ಹೋಗಿ, ಅವರ ಭೂಮಿಯನ್ನು ಕಸಿಯುತ್ತಿದೆ ಎಂದು ವಿರೋಧ ಪಕ್ಷಗಳು ಆರೋಪಿಸುತ್ತಿರುವ ಬೆನ್ನಲ್ಲೇ, ನಿನ್ನೆ ರೈತರ ಪ್ರತಿಭಟನೆ ನಡುವೆ ಡಿ,ಕೆ.ಸುರೇಶ್ ಕಾರ್ ನುಗ್ಗಿಸಿ ಹೋಗುವ ವೀಡಿಯೋ ವೈರಲ್ ಆಗಿತ್ತು.

ಈ ಬಗ್ಗೆ ಕೇಂದ್ರ ಸಚಿವ ಕುಮಾರಸ್ವಾಮಿ, ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ, ವಿರೋಧ ಪಕ್ಷದ ನಾಯಕ ಆರ್.ಅಶೋಕ್ ಸೇರಿ ಹಲವರು ಅಸಮಾಧಾನ ವ್ಯಕ್ತಪಡಿಸಿದ್ದರು. ಇದೀಗ ಮಂಡ್ಯ ರೈತರಿಗೆ ಬೆಳೆಗಾಗಿ ನೀರು ಸಿಗುತ್ತಿಲ್ಲವೆಂದು ಆರೋಪ ಕೇಳಿ ಬಂದಿದ್ದು, ಕೇಂದ್ರ ಸಚಿವ ಕುಮಾರಸ್ವಾಮಿ ಈ ಬಗ್ಗೆ ಬೇಸರ ವ್ಯಕ್ತಪಡಿಸಿದ್ದಾರೆ.

ಒಂದು ತಿಂಗಳಿನಿಂದ ಬೆಳೆಗಳಿಗೆ ನೀರು ಕೊಡಿ ಎಂದು ಮಂಡ್ಯ ರೈತರು ಅಂಗಲಾಚುತಿದ್ದರೂ ಈ ಸರ್ಕಾರದ ಕಿವಿಗೆ ಜಾಣಕಿವುಡು ಬಂದಿದೆ. ರೈತರ ಭೂಮಿ ಕಸಿಯುವುದರಲ್ಲಿ ರಣೋತ್ಸಾಹ ತೋರುವ ಸರ್ಕಾರಕ್ಕೆ ಅವರ ಬೆಳೆ ಉಳಿಸಲು ಏಕೆ ನಿರುತ್ಸಾಹವೋ ಅರ್ಥವಾಗುತ್ತಿಲ್ಲ.

ಮಂಡ್ಯ ರೈತರ ಬೇಡಿಕೆಗೆ ನನ್ನ ಸಂಪೂರ್ಣ ಬೆಂಬಲವಿದೆ ಹಾಗೂ ತಕ್ಷಣವೇ ನಾಲೆಗಳಿಗೆ ಕೆಆರ್’ಎಸ್ ಜಲಾಶಯದಿಂದ ನೀರು ಹರಿಸಬೇಕು. ರೈತರ ಆಕ್ರೋಶ ಕಟ್ಟೆಯೊಡೆಯುವ ಮೊದಲು ನೀರು ಹರಿಸಿ ಎಂದು ರಾಜ್ಯ ಸರ್ಕಾರವನ್ನು ಆಗ್ರಹಿಸಿದ್ದಾರೆ.

About The Author