ಓರ್ವ ಯುವತಿಗೆ ಮುಂಬೈನಲ್ಲಿ ಬಾಡಿಗೆ ಮನೆ ಸಿಕ್ಕಿಲ್ಲಾ. ಯಾಕೆ ಗೊತ್ತಾ..? ಗೊತ್ತಾದ್ರೆ ಶಾಕ್ ಆಗ್ತೀರಾ..

Viral News: ನೀವು ಬೆಂಗಳೂರು, ಮುಂಬೈ, ಪುಣೆ, ಹುಬ್ಬಳ್ಳಿ ಹೀಗೆ ಬೃಹತ್ ನಗರಗಳಲ್ಲಿ ಮನೆ ಬಾಡಿಗೆ ನೀಡುವಾಗ, ಕೆಲವರು ನೀವು ನಾನ್‌ವೆಜ್ ತಿಂತೀರಾ..? ನೀವು ಮದುವೆಯಾಗಿದ್ದೀರಾ ಅಂತಾ ಪ್ರಶ್ನೆ ಕೇಳ್ತಾರೆ. ಏಕೆಂದರೆ ಅವರು ನಾನ್‌ವೆಜ್ ತಿನ್ನುವವರಿಗೆ ಮನೆ ಬಾಡಿಗೆಗೆ ನೀಡುವುದಿಲ್ಲ. ಏಕೆಂದರೆ, ಅವರು ವೆಜಿಟೇರಿಯನ್ ಆಗಿರ್ತಾರೆ. ಹಾಗಾಗಿ ನಾನ್‌ವೆಜ್ ತಿನ್ನುವವರಿಗೆ ಅವರು ಬಾಡಿಗೆ ನೀಡುವುದಿಲ್ಲ. ಇದನ್ನು ಓಕೆ ಎನ್ನಬಹುದು.

ಇನ್ನು ಕೆಲವರು ಅವಿವಾಹಿತರಿಗೆ ಮನೆ ಬಾಡಿಗೆ ನೀಡುವುದಿಲ್ಲ. ನಿಮಗೆ ಮದುವೆ ಆಗಿದೆಯಾ ಅಂತಾ ಕೇಳಿ, ಪತ್ನಿಯನ್ನು ನೋಡಿ ಬಳಿಕ ಬಾಡಿಗೆ ನೀಡುವವರಿದ್ದಾರೆ. ಆದ್ರೆ ಇಲ್ಲೋರ್ವ ಯುವತಿ ತನ್ನ ಫ್ರೆಂಡ್‌ ಜತೆ ಮುಂಬೈ ನಲ್ಲಿ ನಡೆದ ಘಟನೆಯನ್ನು ಇನ್‌ಸ್ಟಾಗ್ರಾಮ್‌ನಲ್ಲಿ ಶೇರ್ ಮಾಡಿದ್ದಾರೆ.

ಈಕೆಯ ಫ್ರೆಂಡ್ ಮುಂಬೈನಲ್ಲ 1 ಬಾಡಿಗೆ ಮನೆ ಸೆಲೆಕ್ಟ್ ಮಾಡಿ, ಅದನ್ನು ನೋಡಲು ಹೋಗಿದ್ದಳು. ಮನೆಗೆ ಭೇಟಿ ನೀಡಿ, ಮನೆ ಎಲ್ಲ ನೋಡಿ, ಬಾಡಿಗೆ ಅಡ್ವಾನ್ಸ್ ಎಲ್ಲದರ ಬಗ್ಗೆ ಮಾತನಾಡಿ, ಓಕೆ ಆದ ಬಳಿಕ ಈಕೆಯ ಫ್ರೆಂಡ್ ಹೊರಡಲು ಸಿದ್ಧವಾಗಿದ್ದಾಳೆ. ಆದರೆ ಆ ಬಾಡಿಗೆ ಮನೆಯ ಮಾಲಕಿ, ನಿನ್ನ ನಂಬರ್ ಏನಮ್ಮಾ ಎಂದು ಕೇಳಿದ್ದಾಳೆ. ಅದಕ್ಕೆ ಯುವತಿ ತನ್ನ ಫೋನ್ ನಂಬರ್ ಹೇಳಿದ್ದಾಳೆ.

ಆದರೆ ಮಾಲಕಿ, ನನಗೆ ಫೋನ್ ನಂಬರ್ ಬೇಡಮ್ಮಾ.. ನ್ಯೂಮರಾಲಜಿ ನಂಬರ್ ಹೇಳು ಎಂದಿದ್ದಾಳೆ. ಯುವತಿ ತನ್ನ ಜನ್ಮ ದಿನಾಂಕ, ತಿಂಗಳು, ಇಸವಿ ಎಲ್ಲ ಸೇರಿಸಿ, ನ್ಯೂಮರಾಲಜಿ ನಂಬರ್ ಹೇಳಿದ್ದಾಳೆ. ಅದಕ್ಕೆ ಮಾಲಕಿ, ಅಯ್ಯೋ ಸಾರಿ ಕಣಮ್ಮಾ.. ನಮ್ಮಮ ಮನೆ ನಂಬರ್ 4 ಮತ್ತೆ ನಿನ್ನ ನಂಬರ್ 7. ಎರಡೂ ಮ್ಯಾಚ್ ಆಗಲ್ಲಮ್ಮಾ.. ಹಾಗಾಗಿ ನಾನು ನಿನಗೆ ಮನೆ ಬಾಡಿಗೆ ನೀಡೋಲ್ಲಾ ಎಂದು ಹೇಳಿ ವಾಪಸ್ ಕಳುಹಿಸಿದ್ದಾಳೆ. ಹಾಗಾಗಿ ಯುವತಿ ಇದನ್ನು ಮೂರ್ಖತನವೆಂದು ಸಂಬೋಧಿಸಿದ್ದಾಳೆ.

About The Author