Mumbai News: ಪುಣೆ ಉದ್ಯಮಿ ಕೇತನ್ ಅಗರ್ವಾಲ್ ಹತ್ಯೆ ಕೇಸ್‌ಗೆ ಸಂಬಂಧಿಸಿದಂತೆ ಕೇತನ್ ತಾಯಿ ರಾಖಿ ಅಗರ್ವಾಲ್ ಪ್ರಧಾನಿ ಮೋದಿಗೆ ಪತ್ರ ಬರೆದಿದ್ದಾರೆ. ಪತ್ರದಲ್ಲಿ ತನ್ನ ಮಗನಿಗೆ ಆದ ಹಾಗೆ ಬೇರೆ ಯಾರಿಗೂ ಆಗಬಾರದು. ಅವನ ಸಾವಿಗೆ ನ್ಯಾಯ ನೀಡಿ ಎಂದು ಮನವಿ ಮಾಡಿದ್ದಾರೆ.
ನನ್ನ ಮಗನಿಗೆ ನ್ಯಾಯ ನೀಡಿ ಎಂದು ನಿಮ್ಮ ಬಳಿ ಬೇಡುವ ಪರಿಸ್ಥಿತಿ ಬರುತ್ತದೆ ಎಂದು ನಾನು ಭಾವಿಸಿರಲಿಲ್ಲ. ಎಲ್ಲ ತಾಯಂದಿರದಂತೆ ನಾನು ಕೂಡ ನಮ್ಮ ಮಗನಿಗೆ ಉತ್ತಮ ಭವಿಷ್ಯ ಸಿಗಲಿ ಎಂದು ಆಶಿಸಿದ್ದೆ. ಆತ ಮದುವೆಯಾಗಿ, ಸುಖ ಸಂಸಾರ ನಡೆಸಿ ಯಶಸ್ವಿಯಾಗಬೇಕು ಎಂದು ಬಯಸಿದ್ದೆ. ಆದರೆ ನನ್ನ ಮಗನ ಚಿತೆಗೆ ನಾನೇ ಅಗ್ನಿ ಸ್ಪರ್ಶ ಮಾಡಬೇಕಾಯಿತು.ಓರ್ವ ತಾಯಿ ಇಂಥ ನೋವು ಬೇರೆ ಇಲ್ಲ ಎಂದು ರಾಖಿ ಅಗರ್ವಾಲ್ ಪತ್ರದಲ್ಲಿ ಬರೆದಿದ್ದಾರೆ.
ನನ್‌ನ ಮಗುವನ್ನು ಕ್ರೂರವಾಗಿ ಹತ್ಯೆ ಮಾಡಲಾಗಿದೆ. ಅವನ ಜತೆ ಇಡೀ ಪ್ರಪಂಚವೇ ಅಂತ್ಯವಾಗಿದೆ. ಅವನ ಕೋಣೆ, ವಸ್ತ್ರ, ಅವನು ಕೂರುತ್ತಿದ್ದ ಜಾಗ,ಅವನ ನಗು ಎಲ್ಲವನ್ನು ನೆನೆಸಿಕ“ಂಡಾಗ, ಆತ ಮತ್ತೆ ಬರುವುದಿಲ್ಲವೆಂದು ನೆನೆಪಾಗಿ ದುಃಖವಾಗುತ್ತದೆ.
ಕೇತನ್ ತೀರಿಹೋದ 20 ದಿನದಲ್ಲೇ ನನ್ನ ಮಾವ ತೀರಿಹೋದರು. ನನ್ನ ಮಾವ ಕೇತನ್‌ನನ್ನು ತುಂಬಾ ಪ್ರೀತಿಸುತ್ತಿದ್ದರು. ಕೇತನ್ ತೀರಿಹೋದನೆಂಬ ನೋವಲ್ಲೇ ಅವರೂ ತೀರಿ ಹೋದರು. ನಾವು ಕೇವಲ 1 ವಾರದಲ್ಲಿ ನಮ್ಮ ಎರಡು ತಲೆಮಾರುಗಳನ್ನು ಕಳೆದುಕ“ಂಡಿದ್ದೇವೆ. ನಾನೋರ್ವ ತಾಯಿಯಾಗಿ ನಿಮ್ಮಲ್ಲಿ ಈ ಸಾವಿಗೆ ನ್ಯಾಯ ಕೇಳುತ್ತಿದ್ದೇನೆ.
ನ್ಯಾಯ ಸಿಗದ ದಿನಗಳೆಯಲು ಹಿಂಸೆಯಾಗುತ್ತದೆ. ನಾನು ಪ್ರತಿದಿನ ನನ್ನ ಮಗನ ಫೋಟೋ ಹಿಡಿದು, ನಿನ್ನ ಅಮ್ಮ ನಿನಗಾಗಿ ಹೋರಾಡುತ್ತಿದ್ದಾಳೆ. ನಿನಗೆ ನ್ಯಾಯ ಸಿಗುವಂತೆ ಮಾಡುತ್ತಾಳೆಂದು ಹೇಳುತ್ತಿರುತ್ತೇನೆ. ಆದರೆ 1 ದಿನ ನಾನು ಅವನ ಫೋಟೋ ನೋಡಿ, ನಿನಗೆ ನ್ಯಾಯ ಸಿಕ್ಕಿತು ಎಂದು ಹೇಳುವಂತಾಗಬೇಕು.
ನನ್ನ ಮಗ ಮರಳಿ ಬರುವುದಿಲ್ಲ. ಆದರೆ ಅವನನ್ನು ಹತ್ಯೆ ಮಾಡಿದವರಿಗೆ ಶಿಕ್ಷೆಯಾಗಲೇಬೇಕು. ನ್ನ ಮಗನ ಸಾವಿನ ಕೇಸ್ 1 ಕಡತವಾಗಿ ಉಳಿಯುವಂತೆ ಮಾಡಬೇಡಿ. ಸಾವಿಗೆ ನ್ಯಾಯ ನೀಡಿ ಎಂದು ಕೇತನ್ ತಾಯಿ ಪ್ರಧಾನಿ ಮೋದಿ ಬಳಿ ಮನವಿ ಮಾಡಿದ್ದಾರೆ. ಕೇತನ್ ತಂದೆ ವಿಶಾಲ್ ಕೂಡ ರಾಷ್ಟ್ರಪತಿ ದ್ರೌಪದಿ ಮುರ್ಮುಗೆ ಕೇತನ್ ಸಾವಿಗೆ ನ್ಯಾಯ ಸಿಗುವಂತೆ ಮನವಿ ಮಾಡಿ ಪತ್ರ ಬರೆದಿದ್ದರು.
ಏನಿದು ಕೇಸ್..?
ನವೆಂಬರ್‌ನಲ್ಲಿ ಸಿಯಾ ಮತ್ತು ಕೇತನ್ ಮದುವೆ ನಿಗದಿಯಾಗಿತ್ತು. ರಾಜಸ್ತಾನದ ಅರಮನೆಯಲ್ಲಿ ಮದುವೆಗೆ ಸಿದ್ಧತೆ ನಡೆದಿದ್ದು, 17 ಕೋಟಿ ರೂಪಾಯಿ ಬಾಡಿಗೆಯೂ ನೀಡಲಾಗಿತ್ತು. ಆದರೆ ತನಗೆ ಈ ಮದುವೆ ಭಾರೀ ಇಷ್ಟವಾಗಿದೆ ಎಂಬಂತೆ ನಟಿಸಿದ್ದ ಸಿಯಾ ತನ್ನ ಪ್ರೀತಿ ಬಗ್ಗೆ ಮನೆಯಲ್ಲೂ ಹೇಳದೇ, ಕೇತನ್ ಬಳಿಯೂ ಹೇಳದೇ ನಾಟವಾಡಿದ್ದಳು. ಹತ್ಯೆಗೆ ಸಂಚು ರೂಪಿಸಿದ್ದಳು.
ಪ್ರಿ ವೆಡ್ಡಿಂಗ್ ಫೋಟೋ ಶೂಟ್ ನೆಪದಲ್ಲಿ ಕೇತನ್‌ನನ್ನೂ ಚೇತನ್‌ನನ್ನೂ 1 ಸ್ಥಳಕ್ಕೆ ಕರೆಸಿ, ಚೇತನ್ ಸಹಾಯದಿಂದ ಕೇತನ್‌ನ್ನು ಬೆಟ್ಟದಿಂದ ನೂಕಿ, ಹತ್ಯೆಯೂ ಮಾಡಿದ್ದಳು. ಬಳಿಕ ಇದು ಹತ್ಯೆಯಲ್ಲ, ಕಾಲು ಜಾರಿ ಬಿದ್ದು ಸಾವನ್ನಪ್ಪಿದ್ದು ಅನ್ನೋ ರೀತಿ ಕಥೆ ಕಟ್ಟಿದ್ದಳು. ಆದರೆ ಪೋಲೀಸರು ಈ ಕೇಸ್ ಬೇಧಿಸಿ, ಇದು ಹತ್ಯೆ ಅನ್ನುವುದನ್ನು ಸಾಬೀತು ಪಡಿಸಿದ್ದಾರೆ. ಅಲ್ಲದೇ ಸೀಯಾ ಮತ್ತು ಚೇತನ್ ತಾವು ಹತ್ಯೆ ಮಾಡಿರುವುದು ಸತ್ಯ ಎಂದು ಒಪ್ಪಿಕ“ಂಡಿದ್ದಾರೆ.
ಇದೀಗ ಆಕೆಯ ಬರ್ತ್‌ಡೇಯನ್ನು ಗ್ರ್ಯಾಂಡ್ ಆಗಿ ಸೆಲೆಬ್ರೇಟ್ ಮಾಡಬೇಕು ಎಂಬ ಕಾರಣಕ್ಕೆ, ಕೇತನ್ ತಂದೆ ಮಹಾಬಲೇಶ್ವರ್‌ದಲ್ಲಿ 70 ರೂಮ್ ಬುಕ್ ಮಾಡಿದ್ದರು. ಜೂನ್ 20ಕ್ಕೆ ಸೀಯಾ ಬರ್ತ್‌ಡೇ ಇತ್ತು. ಹೀಗಾಗಿ ಸಂಬಂಧಿಕರ ಜತೆ ಈ ಬರ್ತಡೇ ಮಾಡಿ, ಆಕೆಯ ಬರ್ತ್‌ಡೆ ಸ್ಪೆಶಲ್ ಮಾಡಬೇಕು ಎಂದು ಕೇತನ್ ತಂದೆ, ವಿಶಾಲ್ ಅಗರ್ವಾಲ್ ನಿರ್ಧರಿಸಿದ್ದರಂತೆ.
ಆದರೆ ಪಾರ್ಟಿ ಎಲ್ಲಾ ಬೇಡಾ, ನಾವಿಬ್ಬರೇ ಪ್ರಿ ವೆಡ್ಡಿಂಗ್ ಫೋಟೋ ಶೂಟ್‌ಗೆ ಟ್ರೆಕಿಂಗ್ ಹೋಗೋಣವೆಂದು ಸೀಯಾ ಕೇತನ್‌ಗೆ ಹೇಳಿ, ಹೇಗೋ ಪ್ಲಾನ್ ಸಕ್ಸಸ್ ಆಗುವಂತೆ ಮಾಡಿದ್ದಳು. ಬಳಿಕ ಅಲ್ಲಿ ಕೇತನ್ ಹತ್ಯೆ ನಡೆದಿತ್ತು.




