Sandalwood: ನಟಿ ಧನ್ಯಾ ದೀಪಿಕಾ ಚಾನೆಲ್ 1ಕ್ಕೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ್ದು ಅವರು ರಾಯರನ್ನು ಎಷ್ಟು ನಂಬುತ್ತಾರೋ ಅನ್ನೋ ಬಗ್ಗೆ ಹೇಳಿದ್ದಾರೆ.
ರಾಯರು ಅವರ ಕನಸಲ್ಲಿ ಬಂದಿದ್ದು, ರಾಯರ ಮೇಲಿದ್ದ ಸೇವಂತಿಗೆ ಹೂವು ಅವರ ಎದುರು ಬಿದ್ದ ಹಾಗೆ, ಪ್ರಸಾದ ಸಿಕ್ಕಹಾಗೆ ಕನಸು ಬಿದ್ದಿತ್ತಂತೆ. ಅಂದು ಧನ್ಯಾ ಎದ್ದು ಕುಳಿತು ಅಳಲು ಶುರು ಮಾಡಿದರಂತೆ. ಬಳಿಕ ಅವರಿಗೆ ರಾಯರ ಮೇಲಿನ ಭಕ್ತಿ ಹೆಚ್ಚಿದ್ದು ಎಂದು ಧನ್ಯಾ ಅವರೇ ಹೇಳಿದ್ದಾರೆ.
ಅಲ್ಲದೇ, ಕರ್ಮಾ ರಿಟರ್ನ್ಸ್ ಬಗ್ಗೆ ನಂಬಿಕೆ ಇದ್ದು, ಈ ಬಗ್ಗೆ ತಮ್ಮದೇ ಜೀವನದ ಉದಾಹರಣೆ ಧನ್ಯಾ ವಿವರಿಸಿದ್ದಾರೆ. ಧನ್ಯಾ ಶೂಟಿಂಗ್ ಸ್ಪಾಟ್ನಲ್ಲಿದ್ದಾಗ, ಯಾವುದೋ ಸೀನ್ ಸರಿಯಾಗಿ ಬಾರದ ಕಾರಣ, ಅವರು ಪದೇ ಪದೇ ಅಳಬೇಕಿತ್ತಂತೆ. ಹಾಗಾಗಿ ನಿರ್ದೇಶಕಿ ಬೇರೆ ಕಲಾವಿದರ ಬಳಿ ಅವಳನ್ನು ಮತ್ತೂ ಅಳಿಸು ಮತ್ತೂ ಅಳಿಸು ಎಂದು ಹೇಳಿದ್ದರಂತೆ.
ಇದನ್ನು ಧನ್ಯ ಕೇಳಿಸಿಕ“ಂಡಿದ್ದರು. ಬಳಿಕ ದೇವರ ಬಳಿ, ನೋಡು ನೀವು ಎಲ್ಲವನ್ನೂ ಕೇಳಿಸಿಕ“ಂಡಿದ್ದಿ. ನೀನೇ ನೋಡಿಕೋ ಎಂದು ಹೇಳಿದ್ದರಂತೆ. ಮರುದಿನ ಯಾರೂ ಧನ್ಯಾರನ್ನು ಅಳಿಸಬೇಕು ಎಂದಿದ್ದರೋ, ಅವರ ಎಡಗಣ್ಣು ಊದಿಕ“ಂಡಿತ್ತು. ಏಕೆಂದರೆ, ಅವರಿಗೆ ಮಡ್ರಾಸ್ ಐ ಬಂದು, ಅವರ ಕಣ್ಣಿನಿಂದ ಸತತ 5 ದಿನಗಳ ಕಾಲ ಕಣ್ಣೀರು ಬಂದಿತ್ತಂತೆ. ಯಾವ ವ್ಯಕ್ತಿ ಧನ್ಯಾ ಅವರಿಗೆ ನೋವು ನೀಡಲು ಸಿದ್ಧರಾಗಿದ್ರೋ, ಅವರಿಗೆ ಅವರ ಕರ್ಮ ತಿರುಗಿತು ಎಂದು ಧನ್ಯ ಹೇಳಿದ್ದಾರೆ.




