ವರಮಹಾಲಕ್ಷ್ಮೀ ಹಬ್ಬ 2026 : ನಿಮಗೆ ಹಣ, ಐಶ್ವರ್ಯ ಮತ್ತು ಆಸ್ತಿ ಬರಬೇಕು ಅಂದ್ರೆ ಈ ರೀತಿ ಮಾಡಿ

Spiritual: ಇನ್ನೇನು ಕೆಲ ದಿನಗಳಲ್ಲೇ ಶ್ರಾವಣ ಮಾಸ ಆರಂಭವಾಗುತ್ತದೆ. ಅಂದಮೇಲೆ ಹಬ್ಬಗಳ ತಿಂಗಳು ಶುರುವಂತಲೇ ಅರ್ಥ. ಶ್ರಾವಣದಲ್ಲಿ ಬರುವ ಎಲ್ಲ ಹಬ್ಬಗಳೂ ಕೂಡ ಮುಖ್ಯವಾಗಿರುವ ಹಬ್ಬಗಳು. ಅದರಲ್ಲೂ ವರಮಹಾಲಕ್ಷ್ಮೀ ಹಬ್ಬಕ್ಕೆ ಹೆಚ್ಚಿನ ಮಹತ್‌ವವಿದೆ. ಹಾಗಾಗಿ ಇಂದು ಖ್ಯಾತ ಜ್ಯೋತಿಷಿಗಳಾಗಿರುವ ಶ್ರೀನಿವಾಸ ಗುರೂಜಿ ವರಮಹಾಲಕ್ಷ್ಮೀ ವೃತಾಚರಣೆ ಬಗ್ಗೆ ಸಂಪೂರ್ಣ ಮಾಹಿತಿ ನೀಡಲಿದ್ದಾರೆ.

ವರಮಹಾಲಕ್ಷ್ಮೀ ಹಬ್ಬ ಅಂದ್ರೆ, ಹೆಣ್ಣು ಮಕ್ಕಳಿಗೆ ವಿಶೇಷವಾದ ಹಬ್ಬ. ಲಕ್ಷ್ಮೀ ದೇವಿಯನ್ನು ಅಲಂಕರಿಸಿ, ಪೂಜೆ ಮಾಡಲಾಗುತ್ತದೆ. ಮುಂಚೆ ಎಲ್ಲ ಹೆಣ್ಣು ಮಕ್ಕಳು ಭಕ್ತಿ ಭಾವದಿಂದ ವರಮಹಾಲಕ್ಷ್ಮೀ ಹಬ್ಬವನ್ನು ಆಚರಿಸುತ್ತಿದ್ದರು. ಆದರೆ ಈಗ ಸ್ಪರ್ಧೆ ಶುರುವಾಗಿದೆ. ಸೋಶಿಯಲ್ ಮೀಡಿಯಾ ದೆಸೆಯಿಂದ ಜನ ಪೂಜೆ, ದೇವರ ಅಲಂಕಾರಗಳಿಗಾಗಿ ಸ್ಪರ್ಧೆಗಳಿದಿದ್ದಾರೆ.

ಆದರೆ ವರಲಕ್ಷ್ಮೀ ಹಬ್ಬ ಮಾಡುವಾಗ ಸ್ಪರ್ಧೆಗಿಂತ ಹೆಚ್ಚು ಭಕ್ತಿ ಇರಬೇಕು. ತೋರಿಕೆಗಿಂತ ಹೆಚ್ಚು ಭಕ್ತಿ ಇರಬೇಕು ಅಂತಾರೆ ಗುರೂಜಿ. ಶುಕ್ರವಾರದ ದಿನ ಬರುವ ವರಮಹಾಲಕ್ಷ್ಮೀ ಹಬ್ಬವನ್ನು ಬ್ರಾಹ್ಮಿ ಮುಹೂರ್ತದಲ್ಲಿ ಮಾಡುವುದು ಉತ್ತಮ. ಅಂದ್ರೆ ಬೆಳಿಗ್ಗೆ 4 ಗಂಟೆಯಿಂದ 7 ಗಂಟೆಯವರೆಗೆ ಪೂಜೆ ಮಾಡಬಹುದು. ಇಲ್ಲವಾದಲ್ಲಿ ಬೆಳಿಗ್ಗೆ 7 ಗಂಟೆಯಿಂದ 10 ಗಂಟೆ ತನಕ ಪೂಜೆ ಮಾಡಬಹುದು.

12 ಗಂಟೆಯಿಂದ 2 ಗಂಟೆಯವರೆಗೆ ಅಭಿಜಿನ್ ಲಗ್ನದಲ್ಲೂ ಪೂಜೆ ಮಾಡಬಹುದು. ಶುಕ್ರವಾರದ ದಿನ ಸಂಜೆ 5 ಗಂಟೆಯಿಂದ 7 ಗಂಟೆಯಿಂದ ಪೂಜೆ ಮಾಡಬೇಕಾಗುತ್ತದೆ. ಅಲ್ಲದೇ, ಸ್ನಾನಾದಿಗಳನ್ನು ಮಾಡಿ, ಇಡೀ ಮನೆ ಶುದ್ಧ ಮಾಡಿ, ಮಡಿಯಿಂದ ಪೂಜೆ ಮಾಡಬೇಕಾಗುತ್ತದೆ. ಆದರೆ ಯಾವುದೇ ಕಾರಣಕ್ಕೂ ಸ್ನಾನಕ್ಕೂ ಮುನ್ನ ನೀವು ನೈವೇದ್ಯಗಳನ್ನು ಮಾಡಕೂಡದು. ಸಂಪೂರ್ಣ ಮಾಹಿತಿಗಾಗಿ ವೀಡಿಯೋ ನೋಡಿ.

About The Author