Horoscope: ಇಂದು ನಾವು August ತಿಂಗಳಲ್ಲಿ ಯಾವ ರಾಶಿಯವರಿಗೆ ಯಾವ ಯೋಗವಿದೆ ಎಂಬ ಬಗ್ಗೆ ತಿಳಿಯೋಣ. ಖ್ಯಾತ ಜ್ಯೋತಿಷಿಗಳಾದ ಶ್ರೀನಿವಾಸ್ ಗುರೂಜಿ 12 ರಾಶಿಗಳ ಫಲಾಫಲವನ್ನು ವಿವರಿಸಿದ್ದಾರೆ.
ಮೇಷ: ಹಣಕಾಸಿನ ಅನುಕೂಲ, ಆರೋಗ್ಯದಲ್ಲಿ ಅನುಕೂಲವಿರುತ್ತದೆ. ಅತೀಯಾದ ಕೋಪದ ವಾತಾವರಣ, ಸೋಂಬೇರಿತನವಿರುತ್ತದೆ. ಮನೆಯಲ್ಲಿ ಕಿರಿ ಕಿರಿ ಅನುಭವವಿರುತ್ತದೆ.
ವೃಷಭ: ಪಿತೃವಿನಿಂದ ಲಾಭ, ಅಪ್ಪ-ಅಮ್ಮನ ಜತೆ ಉತ್ತಮ ಬಾಂಧವ್ಯ. ಆದರೆ, ಮೂರನೇಯವರಿಂದ ಕೆಲವು ಬಾಂಧವ್ಯದಲ್ಲಿ ಬಿರುಕಾಗುವ ಸಾಧ್ಯತೆ.
ಮಿಥುನ: ಆರೋಗ್ಯದಲ್ಲಿ ವ್ಯತ್ಯಾಸ ಸಾಧ್ಯತೆ. ಮನೆಯಲ್ಲಿ ಕಲಹ. ಕೆಲಸಗಳಲ್ಲಿ ಅಡೆತಡೆ. ಗುರುಬಲವಿದ್ದರೂ ಕುಜದೋಷದಿಂದ ಲಕ್ನಲ್ಲಿ ವ್ಯತ್ಯಾಸ. ಹಣ ಬಂದರೂ ಕೈಯಲ್ಲಿ ನಿಲ್ಲುವುದಿಲ್ಲ.
ಕರ್ಕ: ಆರೋಗ್ಯದಲ್ಲಿ ವ್ಯತ್ಯಾಸ, ಬಂಧುಮಿತ್ರರಲ್ಲಿ ಮನಸ್ತಾಪ, ಅಸೂಯೆ ಪಡುವವರ ಸಂಖ್ಯೆ ಹೆಚ್ಚಾಗುತ್ತದೆ. ಶುಭ ಕಾರ್ಯದಲ್ಲಿ ಹಿನ್ನೆಡೆ.
ಸಿಂಹ: ಕೆಲಸ ಕಾರ್ಯಗಳಲ್ಲಿ ಹಿನ್ನೆಡೆ, ದೇಹದಲ್ಲಿ ಬೇನೆ, ಆರೋಗ್ಯದಲ್ಲಿ ವ್ಯತ್ಯಾಸ, ತಪ್ಪು ಮಾಡದಿದ್ದರೂ ಅಪನಿಂದನೆ, ಮಾತು ಕಡಿಮೆ ಮಾಡುವುದು ಉತ್ತಮ.
ಕನ್ಯಾ: ಹಣದ ವಿಷಯದಲ್ಲಿ ಉತ್ತಮ ಅನುಕೂಲ. ಭೂಮಿ ವಿಚಾರ, ಕೋರ್ಟ್-ಕಚೇರಿ ವಿಚಾರದಲ್ಲಿ ಅನುಕೂಲ, ಆದರೆ ಆಕರ್ಷಣೆಯಾಗಿ ಮನಸ್ಸು ಜಾರುವ ಆಪತ್ತು ಹೆಚ್ಚು.
ತುಲಾ: ಯೋಗ ಫಲಗಳು ಅತ್ಯದ್ಭುತ. ಮುಟ್ಟಿದ್ದೆಲ್ಲವೂ ಪಡೆದ ರಾಶಿ ಅಂದ್ರೆ ಅದು ತುಲಾ ರಾಶಿ. ಮೇಲಧಿಕಾರಿಗಳಿಂದ ಪ್ರಶಂಸೆ, ಮನೆಯಲ್ಲಿ ಉತ್ತಮ ವಾತಾವರಣ, ಎಲ್ಲ ಕೆಲಸಗಳೂ ಉತ್ತಮ. ಆದರೆ ಹಣದ ವಿಷಯದಲ್ಲಿ ಎಚ್ಚರಿಕೆ.
ವೃಶ್ಚಿಕ: ಉತ್ತಮ ಲಾಭ, ಶುಭಕಾರ್ಯಾರಂಭ, ನಿಂತ ಕಾರ್ಯಗಳು ಆರಂಭ. ಅಪವಾದ, ಅಪನಿಂದನೆಗಳಿಂದ ದೂರ. ಕಷ್ಟದಿಂದ ದೂರವಾಗಿ ಸುಖದ ದಾರಿಗೆ ಬರುವ ರಾಶಿ ವೃಶ್ಚಿಕ ರಾಶಿ.
ಧನು: ಶುಭ ಕಾರ್ಯಗಳಿಗೆ ಹಿನ್ನೆಡೆ, ಕೀರ್ತಿ ಭಂಗ, ಸಾಲದ ಭಾದೆ ಹೆಚ್ಚು, ಭಯದ ವಾತಾವರಣ, ಮನಸ್ಸು ಕೆಡಿಸುವ ವಾತಾವರಣ, ಮನೆಯಲ್ಲಿ ಕಲಹ, ಕಿರಿಕಿರಿ.
ಮಕರ : ಉತ್ತಮ ಯೋಗ ಫಲ. ವ್ಯಾಪಾರ ವ್ಯವಹಾರದಲ್ಲಿ ಉತ್ತಮ. ರಾಜಯೋಗ ಆರಂಭ, ಭೂಮಿ ಖರೀದಿಸ, ನೂತನ ಕಾರ್ಯಾರಂಭ, ವಾಹನ, ಮನೆ ಖರೀದಿ ಯೋಗ.
ಕುಂಭ : ಸದ್ಯ ಸಾಡೇಸಾತಿ ನಡೆಯುತ್ತಿದ್ದು, ಅಪವಾದ, ಅಪನಿಂದನೆ, ಕಷ್ಟ, ಕಾರ್ಪಣ್ಯ ಹೆಚ್ಚು. ಇನ್ನೂ 1 ವರ್ಷಗಳ ಕಾಲ ಸಮಸ್ಯೆ. ಹೂಡಿಗೆ ಬಗ್ಗೆ ಎಚ್ಚರಿಕೆ, ಹಣದ ವ್ಯವಹಾರದಲ್ಲಿ ಎಚ್ಚರಿಕೆ, ಶನಿ, ಹನುಮ,ರಾಮ ದೇವದ ಆರಾಧನೆ ಮಾಡಿ.
ಮೀನ: ಸಾಡೇಸಾತಿ ಇದ್ದರೂ ಉತ್ತಮ ವಾತಾವರಣ, ಆದರೆ ಕೋಪದ ಮೇಲೆ ಹಿಡಿತವಿರಲಿ. ದಾಯಾದಿ ಕಲಹ, ಮನೆಯಲ್ಲಿ ಕಲಹ, ಅಪವಾದಗಳು ಹೆಚ್ಚು, ಆಲಸ್ಯ ಹೆಚ್ಚು.




