Mangaluru: ಯುವತಿಯ ಜೀವ ತೆಗೆದ 1 ಸೈಡ್ ಲವ್: ಬಸ್‌ ನಿಲ್ದಾಣದಲ್ಲೇ ಕತ್ತು ಕತ್ತರಿಸಿದ ಯುವಕ

Mangaluru News:  ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳದ ಬಿ.ಸಿ.ರೋಡ್‌ನಲ್ಲಿ ಲಾವಣ್ಯ ಎಂಬ ಯುವತಿಯ ಮೇಲೆ ಆಕೆಯದ್ದೇ ದೂರದ ಸಂಬಂಧಿಯಾಗಿದ್ದ ಚೇತನ್ ಎಂಬಾತ ಮಚ್ಚಿನಿಂದ ಹಲ್ಲೆ ಮಾಡಿ, ಹತ್ಯೆ ಮಾಡಿದ ಭೀಕರ ಘಟನೆ ನಡೆದಿದೆ.

ಲಾವಣ್ಯಾ ಬಂಟ್ವಾಳದ ಕಕ್ಯಪದವು ನಿವಾಸಿಯಾಗಿದ್ದು, ಈಕೆ ಕಲ್ಲಡ್ಕ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿದ್ದಳು. ಈಕೆಯ ದೂರದ ಸಂಬಂಧಿಯಾಗಿದ್ದ ಚೇತನ್ ಬೆಳ್ತಂಗಡಿಯಲ್ಲಿ ವಾಸ ಮಾಡುತ್ತಿದ್ದ. ಚೇತನ್ ಲಾವಣ್ಯಳನ್ನು ಪ್ರೀತಿಸುತ್ತಿದ್ದ. ಆದರೆ ಲಾವಣ್ಯ ಚೇತನ್ ಪ್ರೀತಿಯನ್ನು ನಿರಾಕರಿಸಿದ್ದಳು. ಎಷ್ಟೇ ಹೇಳಿದರೂ, ತಾನು ಚೇತನ್‌ನನ್ನು ಪ್ರೀತಿಸುವುದಿಲ್ಲ ಎಂದು ಹೇಳಿದ್ದಳಂತೆ. ಹೀಗಾಗಿ ಇದು 1 ಸೈಡ್ ಲವ್ ಆಗಿತ್ತು.

ಇದೇ ದ್ವೇಷಕ್ಕೇ ಚೇತನ್ ನಿನ್ನೆ ಬಿ.ಸಿ.ರೋಡ್‌ನಲ್ಲಿರುವ ಬಸ್ ನಿಲ್ದಾಣದಲ್ಲಿ ಮನೆಗೆ ಹೋಗಲು ಬಸ್‌ಗಾಗಿ ಕಾಯುತ್ತಿದ್ದ ಲಾವಣ್ಯ ಮೇಲೆ ಹಲ್ಲೆ ಮಾಡಿ, ಹತ್ಯೆ ಮಾಡಿದ್ದಾನೆ. ಲಾವಣ್ಯ ಬಸ್‌ನಲ್ಲಿ ಹೋಗಿ ಕುಳಿತಿದ್ದು, ಆಕೆಯ ಪಕ್ಕವೇ ಹೋಗಿ ಚೇತನ್ ಕುಳಿತಿದ್ದಾನೆ. ಹೀಗಾಗಿ ಆಕೆ ತನ್ನ ಸಂಬಂಧಿಕರಿಗೆ ಕಾಲ್ ಮಾಡಿ, ಚೇತನ್ ಪಕ್ಕದಲ್ಲೇ ಬಂದು ಕುಳಿತಿದ್ದಾನೆ. ನನಗೆ ಹೆದರಿಕೆಯಾಗುತ್‌ತಿದೆ ಎಂದಿದ್ದಾಳೆ.

ಬಳಿಕ ಕಾಲ್ ಕಟ್ ಮಾಡಿದ್ದು, ಪುನಃ ಸಂಬಂಧಿಕರು ಕಾಲ್ ಮಾಡಿದರೂ, ಆಕೆ ರಿಸೀವ್ ಮಾಡಲಿಲ್ಲ. ಆಗ ಸಂಬಂಧಿಕರು ಲಾವಣ್ಯಾಳ ಪೋಷಕರಿಗೆ ಕಾಲ್ ಮಾಡಿ, ವಿಷಯ ತಿಳಿಸಿದ್ದಾರೆ. ಆದರೆ ಅದಾಗಲೇ, ಲಾವಣ್ಯ ಬಸ್‌ನಿಂದ ಇಳಿದು ಓಡಲು ಪ್ರಯತ್ನಿಸಿದ್ದು, ಆಕೆಯನ್ನು ಅಟ್ಟಿಸಿದ ಚೇತನ್, ಮಚ್ಚಿನಿಂದ ಆಕೆಯನ್ನು ಹತ್ಯೆ ಮಾಡಿದ್ದಾನೆ.

ಅಲ್ಲೇ ಇದ್ದ ಸ್ಥಳೀಯರು ಲಾವಣ್ಯಳನ್ನು ಕಾಪಾಡಲು ಬಂದಾಗ, ಅವರೆಡೆಯೂ ಚೇತನ್ ಮಚ್ಚು ಬೀಸಲು ಯತ್ನಿಸಿದ್ದಾನೆ. ತಕ್ಷಣ ಸ್ಥಳೀಯರು ಪೋಲೀಸರು ಮತ್ತು ಆ್ಯಂಬುಲೆನ್ಸ್‌ಗೆ ಕರೆ ಮಾಡಿದ್ದಾರೆ. ಅಷ್ಟರಲ್ಲಾಗಲೇ ಚೇತನ್ ಓಡಿ ಹೋಗಿದ್ದಾನೆ. ಲಾವಣ್ಯಳನ್ನು ಆಸ್ಪತ್ರೆಗೆ ಕರೆದ“ಯ್ಯುವ ಪ್ರಯತ್ನ ನಡೆಯಿತಾದರೂ, ಅದಾಗಲೇ ಆಕೆಯ ಪ್ರಾಣಪಕ್ಷಿ ಹಾರಿಹೋಗಿತ್ತು. ಘಟನಾ ಸ್ಥಳಕ್ಕೆ ಆಗಮಿಸಿದ ಪೋಲೀಸರು ಪರಿಶೀಲನೆ ನಡೆಸಿದ್ದಾರೆ. ಸದ್ಯ ಪ್ರಕರಣ ದಾಖಲಿಸಿರುವ ಸ್ಥಳೀಯ ಪೋಲೀಸರು ಆರೋಪಿ ಚೇತನ್‌ ನನ್ನು ಬಂಧಿಸಿದ್ದಾರೆ.

About The Author