Gold Rate: ದಿಢೀರ್ ಕುಸಿದ ಚಿನ್ನದ ದರ? ಆಭರಣ ಪ್ರಿಯರಿಗೆ ಗುಡ್-ನ್ಯೂಸ್!

Gold rate: ಚಿನ್ನದ ಮಾರುಕಟ್ಟೆಯಲ್ಲಿ ಕಳೆದ ಕೆಲವು ದಿನಗಳಿಂದ ಮುಂದುವರಿದಿರುವ ಏರಿಳಿತದ ನಡುವೆಯೇ, ಇಂದು ಬಂಗಾರದ ದರದಲ್ಲಿ ಮತ್ತೆ ಕೊಂಚ ಇಳಿಕೆ ಕಂಡುಬಂದಿದೆ. ಜಾಗತಿಕ ಮಾರುಕಟ್ಟೆಯ ಬೆಳವಣಿಗೆಗಳ ಪರಿಣಾಮ ಚಿನ್ನದ ಬೆಲೆಯಲ್ಲಿ ನಿರಂತರ ಬದಲಾವಣೆ ಕಾಣಿಸುತ್ತಿದ್ದು, ಹೂಡಿಕೆದಾರರು ಹಾಗೂ ಗ್ರಾಹಕರ ಗಮನ ಇದೀಗ ಇಂದಿನ ದರದತ್ತ ನೆಟ್ಟಿದೆ.

ಜುಲೈ 16ರ ದರದ ಪ್ರಕಾರ, 10 ಗ್ರಾಂ 22 ಕ್ಯಾರಟ್ ಚಿನ್ನದ ಬೆಲೆ 25 ರೂಪಾಯಿ ಇಳಿಕೆಯಾಗಿ 1,31,350 ರೂಪಾಯಿಗೆ ತಲುಪಿದೆ. 10 ಗ್ರಾಂ 24 ಕ್ಯಾರಟ್ ಚಿನ್ನದ ಬೆಲೆ 1,43,290 ರೂಪಾಯಿ ಆಗಿದೆ. ಮೊನ್ನೆ ಚಿನ್ನದ ಬೆಲೆ 140 ರೂಪಾಯಿ ಇಳಿಕೆಯಾಗಿದ್ದರೆ, ನಿನ್ನೆ 70 ರೂಪಾಯಿ ಏರಿಕೆಯಾಗಿತ್ತು. ಇಂದು ಮತ್ತೆ 25 ರೂಪಾಯಿ ಇಳಿಕೆಯಾಗುವ ಮೂಲಕ ಚಿನ್ನದ ಬೆಲೆಯಲ್ಲಿ ಏರಿಳಿತ ಮುಂದುವರಿದಿದೆ.

ದೇಶಾದ್ಯಂತ ಒಂದು ಗ್ರಾಂ 24 ಕ್ಯಾರಟ್ ಚಿನ್ನದ ಬೆಲೆ 14,329 ರೂಪಾಯಿ, 22 ಕ್ಯಾರಟ್ ಚಿನ್ನದ ಬೆಲೆ 13,135 ರೂಪಾಯಿ ಹಾಗೂ 18 ಕ್ಯಾರಟ್ ಚಿನ್ನದ ಬೆಲೆ 10,747 ರೂಪಾಯಿ ಇದೆ. ಇತ್ತ ಬೆಳ್ಳಿ ದರದಲ್ಲಿ ಯಾವುದೇ ಬದಲಾವಣೆ ಆಗಿಲ್ಲ. ಪ್ರತಿ ಗ್ರಾಂ ಬೆಳ್ಳಿ 235 ರೂಪಾಯಿ ಹಾಗೂ 100 ಗ್ರಾಂ ಬೆಳ್ಳಿ 23,500 ರೂಪಾಯಿಗೆ ಮಾರಾಟವಾಗುತ್ತಿದೆ. ಬೆಂಗಳೂರಿನಲ್ಲೂ ಇದೇ ದರ ಮುಂದುವರಿದಿದೆ. ಆದರೆ ತಮಿಳುನಾಡು ಮತ್ತು ಕೇರಳ ಸೇರಿದಂತೆ ಕೆಲವು ರಾಜ್ಯಗಳಲ್ಲಿ 100 ಗ್ರಾಂ ಬೆಳ್ಳಿ 24 ಸಾವಿರ ರೂಪಾಯಿಗೆ ಮಾರಾಟವಾಗುತ್ತಿದೆ.

ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ಬೆಲೆ, ಡಾಲರ್ ಮೌಲ್ಯ, ಜಿಯೋಪಾಲಿಟಿಕಲ್ ಬೆಳವಣಿಗೆಗಳು ಹಾಗೂ ಜಾಗತಿಕ ಆರ್ಥಿಕ ಪರಿಸ್ಥಿತಿಯ ಪರಿಣಾಮ ಚಿನ್ನದ ಬೆಲೆಯಲ್ಲಿ ನಿರಂತರ ಏರಿಳಿತ ಕಂಡುಬರುತ್ತಿದೆ. ಹೀಗಾಗಿ ಮುಂದಿನ ದಿನಗಳಲ್ಲೂ ಬಂಗಾರದ ದರದಲ್ಲಿ ಮತ್ತಷ್ಟು ಬದಲಾವಣೆ ಆಗುವ ಸಾಧ್ಯತೆ ಇದೆ ಎಂದು ಮಾರುಕಟ್ಟೆ ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

About The Author