Sandalwood: ದಿವಂಗತ ನಟ ಪುನೀತ್ ರಾಜ್ಕುಮಾರ್ ಪುತ್ರಿ ವಂದಿತಾ ಇದೀಗ ನೂತನ ಬ್ಯುಸಿನೆಸ್ ಶುರು ಮಾಡಿದ್ದಾರೆ. ಮುಂಚೆಯಿಂದಲೂ ಬೇಕಿಂಗ್ನಲ್ಲಿ ಆಸಕ್ತಿ ಇದ್ದು, ಇದೀಗ ಹೋಮ್ ಬೇಕರಿ ಉದ್ಯಮ ಶುರು ಮಾಡಿದ್ದಾರೆ. ಇದಕ್ಕೆ ನುಕಾಸ್ ಕೆಫೆ ಎಂದು ಹೆಸರಿರಿಸಿದ್ದಾರೆ.
ಉದ್ಯಮ ಚೆನ್ನಾಗಿ ನಡೆಯಲಿ ಮತ್ತು ವಂದಿತಾ ಈ ಉದ್ಯಮದಲ್ಲಿ ಯಶಸ್ವಿಯಾಗಲಿ ಎಂದು ಮನೆಯಲ್ಲಿ ಸತ್ಯನಾರಾಯಣ ಪೂಜೆ ಮಾಡಲಾಗಿದೆ. ಇದರಲ್ಲಿ ವಂದಿತಾಳ ಅಕ್ಕ ಧ್ರುತಿ ಮತ್ತು ತಾಯಿ ಅಶ್ವಿನಿ ಸೇರಿ ಮನೆ ಮಂದಿ ಉಪಸ್ಥಿತರಿದ್ದರು.
ಇನ್ನು ನುಕಾಸ್ ಕೆಫೆಯಲ್ಲಿ ತರಹೇವಾರಿ ಕುಕೀಸ್, ಕೇಕ್, ಪೇಸ್ಟ್ರೀಸ್ ಲಭ್ಯವಿದ್ದು, ಆರ್ಡರ್ ಪಡೆದು, ವಂದಿತಾ ಮನೆಯಿಂದಲೇ ಡಿಲೆವರಿ ನೀಡಲಿದ್ದಾರೆ.
ಇನ್ನು ಇವರು ನುಕಾಸ್ ಕೆಫೆ ಎಂದು ಹೆಸರಿಡಲು ಕಾರಣವೇನು ಅಂದ್ರೆ, ಅಪ್ಪು ಸೇರಿ ಮನೆಯಲ್ಲಿ ಎಲ್ಲರೂ ವಂದಿತಾರನ್ನು ನುಕ್ಕಿ ಎಂದು ಕರೆಯುತ್ತಿದ್ದರಂತೆ. ಅದು ಅವರ ನಿಕ್ ನೇಮ್ ಆಗಿತ್ತು. ಇದೀ ತಮ್ಮ ನಿಕ್ ನೇಮನ್ನೇ ನುಕಾಸ್ ಕೆಫೆ ಎಂದು ನಾಮಕರಣ ಮಾಡಿದ್ದಾರೆ ವಂದಿತಾ.




