ಯತ್ನಾಳ್ ಗಂಭೀರ ಆರೋಪದ ಬಗ್ಗೆ ವಿಜಯೇಂದ್ರಗೆ ಉತ್ತರಿಸುವ ನೈತಿಕ ಧೈರ್ಯವಿದೆಯೇ: ಪ್ರಿಯಾಂಕ್ ಖರ್ಗೆ

Political News: ಬಿಜೆಪಿಯ ಉಚ್ಛಾಟಿತ ಶಾಸಕ ಬಸನ್ ಗೌಡ ಪಾಟೀಲ್ ಯತ್ನಾಳ್ ಸಿಎಂ ಡಿ.ಕೆ.ಶಿವಕುಮಾರ್ ವಿರುದ್ಧ ಮತ್ತು ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಮತ್ತು ಬಿ.ವೈ.ವಿಜೇಂದ್ರ ವಿರುದ್ಧ ಗಂಭೀರ ಆರೋಪ ಮಾಡಿದ್ದಾರೆ. ಅಲ್ಲದೇ ಮಾಜಿ ಸಿಎಂ ಸಿದ್ದರಾಮಯ್ಯ ಬಗ್ಗೆಯೂ ಯತ್ನಾಳ್ ಅಸಮಾಧಾನ ವ್ಯಕ್ತಪಡಿಸಿದ್ದರು.

ವಿಜಯೇಂದ್ರ ವಿರುದ್ಧ ಭ್ರಷ್ಟಾಚಾರದ ಆರೋಪ ಮಾಡಿರುವ ಯತ್ನಾಳ್ ಹೇಳಿಕೆ ಬಗ್ಗೆ, ಗೃಹಸಚಿವರಾದ ಪ್ರಿಯಾಂಕ್ ಖರ್ಗೆ ಬಿಜೆಪಿ ಮತ್ತು ವಿಜಯೇಂದ್ರ ಈ ಬಗ್ಗೆ ಸ್ಪಷ್ಟನೆ ನೀಡಬೇಕು ಎಂದು ಆಗ್ರಹಿಸಿದ್ದಾರೆ.

ಎಕ್ಸ್ ಖಾತೆಯಲ್ಲಿ ಯತ್ನಾಳ್ ಹೇಳಿಕೆ ವೀಡಿಯೋ ಹಾಕಿರುವ ಪ್ರಿಯಾಂಕ್ ಖರ್ಗೆ, ಜೆಪಿಗರ ಎದೆ ಸೀಳಿದರೆ ಭ್ರಷ್ಟಾಚಾರ ಮಾತ್ರ ಕಾಣುತ್ತದೆ, ಅಂತೆಯೇ ಎಲ್ಲಾ ಹಗರಣಗಳ ಮೂಲ ಕೆದಕಿದರೆ ಬಿಜೆಪಿಯ ಬಾಗಿಲಿಗೆ ಬಂದು ನಿಲ್ಲುತ್ತದೆ! ಸಾಲು ಸಾಲು ನೇಮಕಾತಿ ಹಗರಣಗಳನ್ನು ನಡೆಸಿದ ಕೆಪಿಎಸ್ಸಿಯ ಮಾಜಿ ಅಧ್ಯಕ್ಷ ಯಡಿಯೂರಪ್ಪನವರ ಕುಟುಂಬದ ಸಂಬಂಧಿಯಂತೆ. ಆತನ ಮನೆಯಲ್ಲಿ ಯಡಿಯೂರಪ್ಪನವರ ಹಾಗೂ ವಿಜಯೇಂದ್ರರವರ ಫೋಟೋಗಳನ್ನು ಭಕ್ತಿಪೂರ್ವಕವಾಗಿ ಹಾಕಿದ್ದಾನಂತೆ. ಇದನ್ನು ಹೇಳಿರುವುದು ಯಡಿಯೂರಪ್ಪನವರ ಕುಟುಂಬದ ಆಳ ಅಗಲಗಳನ್ನು ಚೆನ್ನಾಗಿ ಬಲ್ಲಂತಹ ಯತ್ನಾಳ್ ರವರು.

ಬಿಜೆಪಿ ಸರ್ಕಾರವೇ ನೇಮಿಸಿದ್ದ ಕೆಪಿಎಸ್ಸಿ ಅಧ್ಯಕ್ಷನ ಅಕ್ರಮಗಳಲ್ಲಿ ಬಿ.ವೈ.ವಿಜಯೇಂದ್ರ ಅವರೂ ಪಾಲುದಾರರೇ? ವಿಜಯೇಂದ್ರರವರೇ, ಕೆಪಿಎಸ್ಸಿ ವಿಚಾರದಲ್ಲಿ ನಿಮ್ಮ ಒಳಮರ್ಮಗಳು ಬಯಲಾಗುವ ಭಯದಿಂದ ಪ್ರತಿಭಟನೆ ಎಂಬ ನಾಟಕ ಶುರು ಮಾಡಿರುವಿರಾ?

ವಿಜಯೇಂದ್ರರವರೇ, ನಿಮ್ಮಲ್ಲಿ ಎಳ್ಳು ಕಾಳಷ್ಟು ನೈತಿಕತೆ ಇದ್ದರೆ ಯತ್ನಾಳ್ ಅವರು ಎತ್ತಿರುವ ವಿಷಯಗಳಿಗೆ ಉತ್ತರ ಹೇಳಿ, ನಿಮಗೂ ಶಿವಶಂಕರಪ್ಪನಿಗೂ ಏನು ಸಂಬಂಧ? ಅಂತಹ ಭ್ರಷ್ಟನನ್ನು ನಿಮ್ಮ ಸರ್ಕಾರ ಕೆಪಿಎಸ್ಸಿಗೆ ನೇಮಿಸಿದ್ದೇಕೆ? ನಿಮ್ಮ ವ್ಯವಹಾರಗಳಿಗೆ ಆತ ಬೇನಾಮಿಯೇ? ನಿಮ್ಮ ಹಾಗೂ ನಿಮ್ಮ ಪೂಜ್ಯ ತಂದೆಯವರ ಮೇಲೆ ಆತನಿಗೆ ಫೋಟೋ ಇಟ್ಟುಕೊಳ್ಳುವಷ್ಟು ಕೃತಜ್ಞನಾಗಿರುವುದೇಕೆ? ತಾವು ಇದುವರೆಗೂ ಆತನ ವಿರುದ್ಧ ಒಂದೇ ಒಂದು ಪದ ಮಾತನಾಡದಿರುವುದೇಕೆ? ಈ ಪ್ರಶ್ನೆಗಳಿಗೆ ಉತ್ತರ ನೀಡುವ ನೈತಿಕ ಧೈರ್ಯ ನಿಮ್ಮಲ್ಲಿದೆಯೇ? ಎಂದು ಪ್ರಿಯಾಂಕ್ ಖರ್ಗೆ ಪ್ರಶ್ನಿಸಿದ್ದಾರೆ.

About The Author