ಯಾವ ದೇವರಿಗೆ ಯಾವ ಹೂವು ಇಷ್ಟ..? ಯಾವ ಹೂವು ಅರ್ಪಿಸಿದರೆ ಲಕ್ಷ್ಮೀ ಒಲಿಯುವಳು..?

ಕೆಲವರು ತಮ್ಮ ಬೇಡಿಕೆ ಈಡೇರುವ ಸಲುವಾಗಿ ದೇವರಿಗೆ ಮಣಗಟ್ಟಲೇ ಹೂವು ಹಾಕುತ್ತಾರೆ. ಹೂವನ್ನು ಅರ್ಪಿಸುವುದರಿಂದ ದೇವರು ಪ್ರಸನ್ನನಾಗಿ ವರ ನೀಡುತ್ತಾನೆಂಬ ನಂಬಿಕೆ ಇದೆ. ಹಾಗಾದ್ರೆ ದೇವರಿಗೆ ಇಷ್ಟವಾಗುವ ಹೂವುಗಳು ಯಾವುದು ಅನ್ನೋ ಬಗ್ಗೆ ನಾವಿವತ್ತು ಮಾಹಿತಿ ನೀಡಲಿದ್ದೇವೆ.

ಶಿವನಿಗೆ ಅತ್ಯಂತ ಪ್ರಿಯವಾದ ಹೂವೆಂದರೆ ದತ್ತೂರ ಹೂವು. ಈ ಹೂವನ್ನು ಶಿವನಿಗೆ ಅರ್ಪಿಸುವುದರಿಂದ ಮನುಷ್ಯನಲ್ಲಿರುವ ಅಹಂಕಾರ ದೂರವಾಗುತ್ತದೆ.

ದಾಸವಾಳದ ಹೂವು ಪೂಜೆಗಳಿಗಷ್ಟೇ ಬಳಸಲಾಗುತ್ತದೆ. ಅದರಲ್ಲೂ ಕಾಳಿ ಮತ್ತು ಗಣಪತಿಗೆ ಈ ಹೂವು ಅರ್ಪಿಸಿದರೆ ಶ್ರೇಷ್ಠವೆಂದು ಹೇಳಲಾಗುತ್ತದೆ.

ಇನ್ನು ವಿಷ್ಣು ಮತ್ತು ಲಕ್ಷ್ಮೀಗೆ ಪ್ರಿಯವಾದ ಹೂವೆಂದರೆ ಪಾರಿಜಾತ ಹೂವು. ಸಮುದ್ರ ಮಂಥನ ವೇಳೆಯಲ್ಲಿ ಹುಟ್ಟಿಕೊಂಡ ಈ ಪರಿಮಳ ಭರಿತ ಹೂವನ್ನು ವಿಷ್ಣು ಮತ್ತು ಲಕ್ಷ್ಮೀಗೆ ಅರ್ಪಿಸಿದರೆ ಉತ್ತಮ.

ಕಮಲದ ಹೂವು ಯಾರಿಗೆ ಪ್ರಿಯವಾದುದ್ದೆಂದು ಎಲ್ಲರಿಗೂ ಗೊತ್ತೇ ಇದೆ. ಲಕ್ಷ್ಮೀ ದೇವಿಗೆ ಪ್ರಿಯವಾದ ಈ ಹೂವು ಸಿಗುವುದು ತುಂಬಾ ಅಪರೂಪ. ಆದ್ರೆ ಬೀಳಿ ಕಮಲದ ಹೂವನ್ನ ಲಕ್ಷ್ಮೀ ದೇವಿಗೆ ಅರ್ಪಿಸಿದ್ದಲ್ಲಿ, ಆಕೆಯ ಆಶೀರ್ವಾದ ಸದಾ ನಿಮ್ಮ ಮೇಲಿರುತ್ತದೆ.

ಇನ್ನು ಚೆಂಡು ಹೂವು ಎಂದರೂ ಕೂಡ ಮಹಾಗಣಪತಿಗೆ ಇಷ್ಟವಾದ ಹೂವಾಗಿದೆ. ಗಣೇಶ ಚತುರ್ಥಿಗೆ ಈ ಹೂವನ್ನ ಹೆಚ್ಚು ಬಳಸಲಾಗುತ್ತದೆ.

ಪವಿತ್ರವಾದ ತುಳಸಿ ಕೃಷ್ಣನಿಗೆ ಬಹು ಇಷ್ಟವಾಗಿದೆ. ಕೃಷ್ಣ ಜನ್ಮಾಷ್ಠಮಿಗೆ ತುಳಸಿ ದಳದ ಮಾವಲೆಯನ್ನ ಮಾಡಿ ಕೃಷ್ಣನಿಗೆ ಅರ್ಪಿಸಲಾಗುತ್ತದೆ. ನೈವೇದ್ಯ ಮಾಡುವಾಗ ತುಳಸಿಯನ್ನು ನೈವೇದ್ಯಕ್ಕೆ ಹಾಕಿ ಕೃಷ್ಣಾರ್ಪಣ ಮಸ್ತು ಎನ್ನಲಾಗುತ್ತದೆ.

ಮಲ್ಲಿಗೆ ಮತ್ತು ಗುಲಾಬಿ ಹೂವು. ಈ ಹೂವುಗಳು ಎಲ್ಲ ದೇವತೆಗಳ ಪೂಜೆಗೂ ಬಳಸಲಾಗುತ್ತದೆ. ಪ್ರತಿ ದಿನ ದೇವರಿಗೆ ಹೂವು ಹಾಕುವುದಿದ್ದರೆ, ಗುಲಾಬಿ ಹೂವನ್ನ ಅರ್ಪಿಸಬಹುದು.

ಓಂ ಶ್ರೀ ಸಿಗಂದೂರು ಚೌಡೇಶ್ವರಿ ಜ್ಯೋತಿಷ್ಯ ಕೇಂದ್ರ ತಾಯಿ ಜಗನ್ ಮಾತೆಯ ಆರಾಧಕರಾದ ಪಂಡಿತ್ ವೇದಬ್ರಹ್ಮಶ್ರೀ ಸಂತೋಷ್ ನಾರಾಯಣ ಗುರೂಜಿ.9886333327 ಸಮಸ್ಯೆ ನಿಮ್ಮದು ಪರಿಹಾರ ನಮ್ಮದು ಅಸಾಧ್ಯವಾದದ್ದು ನಮ್ಮಲ್ಲಿ ಸಾಧ್ಯ ನಿಮ್ಮ ಸಮಸ್ಯೆಗಳಾದ ಪ್ರೀತಿಯಲ್ಲಿ ನಂಬಿ ಮೋಸ ಮನೆಯಲ್ಲಿ ಅಶಾಂತಿ ಮಾನಸಿಕ ಚಿಂತೆ ಆರೋಗ್ಯ ಸಮಸ್ಯೆ ಸ್ತ್ರೀ-ಪುರುಷ ವಶೀಕರಣ ಲೈಂಗಿಕ ವಶೀಕರಣ ಗಂಡ ಹೆಂಡತಿ ಕಲಹ ಇನ್ನೂ ಅನೇಕ ಗುಪ್ತ ಯಾವುದೇ ಕಠಿಣ ಸಮಸ್ಯೆಗಳಿದ್ದರೂ 2 ದಿನಗಳಲ್ಲಿ ಶಾಶ್ವತ ಪರಿಹಾರ ಮಾಡಿಕೊಳ್ಳುತ್ತಾರೆ ಫೋನಿನ ಮೂಲಕ ಪ್ರಶ್ನೆ ಫೋನಿನ ಮೂಲಕ ಉತ್ತರ ಫೋನಿನ ಮೂಲಕ ಭವಿಷ್ಯ 9886777784.

About The Author