ಮಳೆಯ ಕೊರತೆ, ರೈತರಿಗೆ ಶಾಕ್ – 25 ಜಿಲ್ಲೆಗಳಲ್ಲಿ ‘ಬರದ’ ಆತಂಕ!

ಕರ್ನಾಟಕದ ರೈತರಿಗೆ ಮತ್ತೊಂದು ಆತಂಕಕಾರಿ ಸುದ್ದಿ ಎದುರಾಗಿದೆ. ನೈಋತ್ಯ ಮುಂಗಾರು ಮಳೆಯ ಅಸಮರ್ಪಕ ಹಂಚಿಕೆ ಮತ್ತು ದೀರ್ಘಕಾಲದ ಒಣ ಹವಾಮಾನದಿಂದಾಗಿ ರಾಜ್ಯದಲ್ಲಿ ಕೃಷಿ ಚಟುವಟಿಕೆಗಳು ಸಂಪೂರ್ಣ ಸಂಕಷ್ಟಕ್ಕೆ ಸಿಲುಕಿವೆ ಅಂತ ಹೇಳಲಾಗ್ತಿದೆ! ಹೌದು ‘ರಾಜ್ಯದ 25 ಜಿಲ್ಲೆಗಳ 102 ತಾಲೂಕುಗಳು ಈಗ ಬರಗಾಲದ ತೀವ್ರತೆಯನ್ನು ನಿರ್ಣಯಿಸುವ ‘ಭೂ-ಸತ್ಯಾಪನೆ’ ಪ್ರಕ್ರಿಯೆಗೆ ಅಧಿಕೃತವಾಗಿ ಅರ್ಹತೆ ಪಡೆದಿವೆ!

ಎಸ್ ‘ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಮೇಲ್ವಿಚಾರಣಾ ಕೇಂದ್ರದ ವರದಿ ಪ್ರಕಾರ, ಮುಂಗಾರು ಹಂಗಾಮಿನಲ್ಲಿ ಮಳೆಯ ಕೊರತೆ ಗಂಭೀರ ಸ್ವರೂಪ ಪಡೆದುಕೊಂಡಿದೆ. ಆಗಸ್ಟ್ 13ರ ಮಾಹಿತಿಯಂತೆ, ರಾಜ್ಯದಲ್ಲಿ ವಾಡಿಕೆಯ 579 ಮಿ.ಮೀ. ಮಳೆಯ ಬದಲಿಗೆ ಕೇವಲ 411 ಮಿ.ಮೀ. ಮಳೆಯಾಗಿದ್ದು, ಬರೋಬ್ಬರಿ ಶೇ. 29ರಷ್ಟು ವ್ಯಾಪಕ ಕೊರತೆ ದಾಖಲಾಗಿದೆ.

ಈ ಪೈಕಿ ಒಟ್ಟು 102 ತಾಲೂಕುಗಳಲ್ಲಿ, 57 ತಾಲೂಕುಗಳು ತೀವ್ರ ಬರಗಾಲದ ಭೀತಿಯನ್ನು ಎದುರಿಸುತ್ತಿದ್ದರೆ, ಉಳಿದ 45 ತಾಲೂಕುಗಳಲ್ಲಿ ಮಧ್ಯಮ ಮಟ್ಟದ ಭೀತಿ ಇದೆ ಎಂದು ವರ್ಗೀಕರಿಸಲಾಗಿದೆ.

ಸರ್ಕಾರದ ಸೂಚನೆಯಂತೆ ಆಗಸ್ಟ್ 18ರಿಂದ 20ರವರೆಗೆ ಮೂರು ದಿನಗಳ ಕಾಲ ತಾಲೂಕುಗಳಲ್ಲಿ ಸ್ಥಳ ಪರಿಶೀಲನೆ ನಡೆಯಲಿದ್ದು, ಡಿಪಿಎಆರ್ ಅಭಿವೃದ್ಧಿಪಡಿಸಿರುವ ವಿಶೇಷ ಆಪ್ ಮೂಲಕ ಜಿಯೋ-ಟ್ಯಾಗ್ ಮಾಡಿದ ಫೋಟೋಗಳು ಮತ್ತು ಜಿಪಿಎಸ್ ನಿರ್ದೇಶಾಂಕಗಳೊಂದಿಗೆ ಸಮೀಕ್ಷೆ ನಡೆಸಲಾಗುತ್ತದೆ. ಯಾವುದೇ ತಾಲೂಕಿನಲ್ಲಿ ಶೇ. 33ಕ್ಕಿಂತ ಹೆಚ್ಚು ಬೆಳೆ ನಷ್ಟವಿದ್ದರೆ ಅದನ್ನು ಬರಪೀಡಿತ ಎಂದು ಪರಿಗಣಿಸಲಾಗುತ್ತದೆ.

ಇದರ ಜೊತೆಗೆ ಇನ್ನೊಂದ್ ಕಡೆ ‘ಸರಿಯಾದ ಸಮಯಕ್ಕೆ ಮಳೆಯಾಗದ ಕಾರಣ ಬೀಜಗಳು ಮೊಳಕೆಯೊಡೆಯದೆ ಇರುವುದು, ಬೆಳೆಗಳು ಬಾಡುವುದು ಹಾಗೂ ಬೆಳವಣಿಗೆ ಕುಂಠಿತವಾಗಿರುವ ಕುರಿತು ಕೃಷಿಕರು ತೀವ್ರ ಆತಂಕ ವ್ಯಕ್ತಪಡಿಸಿದ್ದಾರೆ.

ರೈತರ ಕಷ್ಟಕ್ಕೆ ಸರ್ಕಾರ ಸ್ಪಂದಿಸಿ ಸಮರೋಪಾದಿಯಲ್ಲಿ ಸಮೀಕ್ಷೆ ನಡೆಸುತ್ತಿದ್ದು, ಮುಂದಿನ ದಿನಗಳಲ್ಲಿ ಸಾಪ್ತಾಹಿಕ ವರದಿಗಳ ಆಧಾರದ ಮೇಲೆ ಹೆಚ್ಚಿನ ತಾಲೂಕುಗಳು ಈ ಪ್ರಕ್ರಿಯೆಗೆ ಸೇರ್ಪಡೆಗೊಳ್ಳುವ ಸಾಧ್ಯತೆ ಸಹ ಹೆಚ್ಚಿದೆ..

About The Author