ಆಗಸ್ಟ್ 29 ಹಾಗೂ 30ರಂದು ಪ್ಯಾಂಗಾಂಗ್ ಸರೋವರ ಪ್ರದೇಶದಲ್ಲಿ ಆಕ್ರಮಣಕ್ಕೆ ಯತ್ನಿಸಿದ್ದ ಚೀನಾಗೆ ಭಾರತೀಯ ಸೇನೆ ತಕ್ಕ ಪಾಠ ಕಲಿಸಿತ್ತು. ಚೀನಾ ವಶದಲ್ಲಿದ್ದ ರೆಚಿನ್ ಲಾ ಹಾಗೂ ರೆಜಾಂಗ್ ಲಾ ಪ್ರದೇಶಗಳಲ್ಲಿ ಭಾರತೀಯ ಸೇನೆ ಅಧಿಪತ್ಯ ಸಾಧಿಸಿದೆ. ಭಾರತೀಯ ಸೇನೆಯಿಂದ ಈ ಪ್ರತ್ಯುತ್ತರ ನೀರಿಕ್ಷಿಸದ ಚೀನಾಗೆ ಇದು ದೊಡ್ಡ ಆಘಾತವನ್ನೇ ತಂದಿತ್ತು.

ಚೀನಾದ ಮೊಲ್ಡೊ ಕಂಟೋನ್ಮೆಂಟ್ ಮೇಲೂ ಭಾರತೀಯ ಸೇನೆ ಆಕ್ರಮಣ ಮಾಡಬಹುದು ಎಂದು ಆತಂಕದಲ್ಲಿರೋ ಚೀನಾ ಇದೀಗ ಹೊಸ ತಂತ್ರ ರೂಪಿಸಿದೆ.
ಲಡಾಖ್ ಪ್ರದೇಶದಲ್ಲಿ ಚೀನಾ ಎರಡು ಯಾಂತ್ರೀಕೃತ ವಿಭಾಗ ನಿಯೋಜಿಸಿದೆ. ಚುಶುಲ್ನಲ್ಲಿ ನಾಲ್ಕನೇ ಮತ್ತು ಪ್ಯಾಂಗಾಂಗ್ ಪಶ್ಚಿಮ ಭಾಗದಲ್ಲಿ 6ನೇ ಯಾಂತ್ರೀಕೃತ ವಿಭಾಘ ನಿಯೋಜನೆಗೊಳಿಸಿದೆ. ಇನ್ನು ಸ್ಪಂಗೂರ್ನಲ್ಲಿ ಟ್ಯಾಂಕ್ಗಳನ್ನ ಹೊಂದಿರೋ ನಾಲ್ಕು ಯಾಂತ್ರೀಕೃತ ವಿಭಾಗ ನಿಯೋಜನೆಗೊಂಡಿದೆ.
ಇತ್ತ ಭಾರತೀಯ ಸೇನೆ ಕೂಡ ಎಲ್ಎಸಿ ಸುತ್ತ ಟ್ಯಾಂಕ್ ಹಾಗೂ ಶಸ್ತ್ರಸಜ್ಜಿತ ಯುದ್ಧ ವಿಮಾನಗಳನ್ನ ಇರಿಸಿದೆ. ಚೀನಾ ಬಾರ್ಡರ್ನಲ್ಲಿ ಫುಲ್ ಅಲರ್ಟ್ ಆಗಿರೋ ಭಾರತೀಯ ಸೇನೆ ಎಲ್ಲ ರೀತಿಯ ಆಕ್ರಮಣಗಳನ್ನ ಎದುರಿಸೋಕೆ ಸಜ್ಜಾಗಿದೆ.

ಮೊಬೈಲ್ ನಂಬರ್:-9663502278