Facebook Instagram Twitter Youtube
  • Home
  • ರಾಜಕೀಯ
  • ಜಿಲ್ಲಾ ಸುದ್ದಿಗಳು
  • ರಾಜ್ಯ
  • ರಾಷ್ಟ್ರೀಯ
  • ಅಂತಾರಾಷ್ಟ್ರೀಯ
  • ಸಿನಿಮಾ
    • ಬ್ಯೂಟಿ ಟಿಪ್ಸ್
  • ಕ್ರೀಡೆ
  • ಆಧ್ಯಾತ್ಮ
  • ತಂತ್ರಜ್ಞಾನ
  • ವೆಬ್ ಸ್ಟೋರಿ
Search
Sign in
Welcome! Log into your account
Forgot your password? Get help
Privacy Policy
Password recovery
Recover your password
A password will be e-mailed to you.
Karnataka TVKarnataka Tv
Sign in / Join
Tuesday, August 18, 2026
Sign in / Join
Facebook
Instagram
Twitter
Youtube
Karnataka TVKarnataka Tv
  • Home
  • ರಾಜಕೀಯ
  • ಜಿಲ್ಲಾ ಸುದ್ದಿಗಳು
  • ರಾಜ್ಯ
  • ರಾಷ್ಟ್ರೀಯ
  • ಅಂತಾರಾಷ್ಟ್ರೀಯ
  • ಸಿನಿಮಾ
    • ಬ್ಯೂಟಿ ಟಿಪ್ಸ್
  • ಕ್ರೀಡೆ
  • ಆಧ್ಯಾತ್ಮ
  • ತಂತ್ರಜ್ಞಾನ
  • ವೆಬ್ ಸ್ಟೋರಿ
type here...
  • Best MLA
    • old ಮೈಸೂರು
Home ಹಣಕಾಸು ಉದ್ಯೋಗಿಗಳಿಗೆ EPFO ಸಿಹಿಸುದ್ದಿ – 5 ಹೊಸ ಸೌಲಭ್ಯಗಳು ಜಾರಿ!
  • ಹಣಕಾಸು

ಉದ್ಯೋಗಿಗಳಿಗೆ EPFO ಸಿಹಿಸುದ್ದಿ – 5 ಹೊಸ ಸೌಲಭ್ಯಗಳು ಜಾರಿ!

August 18, 2026
WhatsApp
Twitter
Facebook
Linkedin
Telegram

    ಉದ್ಯೋಗಿಗಳಿಗೆ ಮತ್ತು ಪಿಎಫ್ (PF) ಖಾತೆದಾರರಿಗೆ ಇಲ್ಲಿದೆ ಒಂದು ಅತ್ಯುತ್ತಮ ಸುದ್ದಿ. EPFO ಸಂಸ್ಥೆಯು ತನ್ನ ಆನ್‌ಲೈನ್ ಸೇವೆಗಳನ್ನು ಮತ್ತಷ್ಟು ವೇಗಗೊಳಿಸಲು ಮತ್ತು ಸರಳಗೊಳಿಸಲು ಬರೋಬ್ಬರಿ 5 ಪ್ರಮುಖ ಹೊಸ ನಿಯಮಗಳನ್ನು ಜಾರಿಗೆ ತಂದಿದೆ. ಇನ್ಮುಂದೆ ಕ್ಲೇಮ್‌ಗಳ ಸೆಟಲ್‌ಮೆಂಟ್, UAN ಆಕ್ಟಿವೇಶನ್ ಹಾಗೂ ಪಿಎಫ್ ವರ್ಗಾವಣೆ ಹಿಂದೆಂದಿಗಿಂತಲೂ ತುಂಬಾ ಸುಲಭವಾಗಲಿದೆ ಅಂತ ಕೇಳಿ ಬರ್ತಾ ಇದೆ. ಆ ಐದು ಪ್ರಮುಖ ಬದಲಾವಣೆಗಳು ಯಾವುವು ಎಂಬುದನ್ನು ನೋಡೋಣ ಬನ್ನಿ.

    ಮೊದಲನೆಯದಾಗಿ, ಪಿಎಫ್ ಕ್ಲೇಮ್‌ಗಳಿಗಾಗಿ EPFO ಈಗ ‘ಆಟೋ ಸೆಟಲ್‌ಮೆಂಟ್’ ವ್ಯವಸ್ಥೆಯನ್ನು ತಂದಿದೆ. ಇದರಡಿ ಬರೋಬ್ಬರಿ 5 ಲಕ್ಷ ರೂಪಾಯಿಯವರೆಗಿನ ಮುಂಗಡ ಹಾಗೂ ಅಂತಿಮ ಸೆಟಲ್‌ಮೆಂಟ್ ಹಣ ಕೇವಲ ಮೂರೇ ದಿನಗಳಲ್ಲಿ ನೇರವಾಗಿ ನಿಮ್ಮ ಖಾತೆಗೆ ಜಮೆಯಾಗಲಿದೆ! ಇನ್ನು ಎರಡನೆಯದಾಗಿ, UAN ಆಕ್ಟಿವೇಶನ್ ಪ್ರಕ್ರಿಯೆಯನ್ನು ಮತ್ತಷ್ಟು ಸುರಕ್ಷಿತಗೊಳಿಸಲಾಗಿದೆ. ಇನ್ನು ಮುಂದೆ UMANG ಆಪ್‌ನಲ್ಲಿ ಆಧಾರ್ ಆಧಾರಿತ ಫೇಸ್ ಆಥೆಂಟಿಕೇಶನ್ ಮೂಲಕ ಮಾತ್ರ UAN ಅನ್ನು ಆಕ್ಟಿವೇಟ್ ಮಾಡಿಕೊಳ್ಳಬಹುದು.

    ಮೂರನೆಯದಾಗಿ, ನೀವು ಒಂದು ಕಂಪನಿಯಿಂದ ಮತ್ತೊಂದು ಕಂಪನಿಗೆ ಕೆಲಸ ಬದಲಾಯಿಸಿದಾಗ ಪಿಎಫ್ ಹಣವನ್ನು ವರ್ಗಾಯಿಸಲು ಇನ್ನು ಮುಂದೆ ಕಚೇರಿ ಅಲೆಯುವ ಅಥವಾ ಮ್ಯಾನುಯಲ್ ಆಗಿ ಅರ್ಜಿ ಸಲ್ಲಿಸುವ ಅಗತ್ಯವಿಲ್ಲ! ನಿಮ್ಮ ಆಧಾರ್‌ಗೆ UAN ಲಿಂಕ್ ಆಗಿದ್ದರೆ, ಹಳೆಯ ಖಾತೆಯಲ್ಲಿರುವ ಹಣ ಹೊಸ ಕಂಪನಿಯ ಖಾತೆಗೆ ಸ್ವಯಂಚಾಲಿತವಾಗಿ ವರ್ಗಾವಣೆಯಾಗುತ್ತದೆ. ಇನ್ನು ನಾಲ್ಕನೆಯದಾಗಿ, ಪಿಎಫ್ ಹಣವನ್ನು ಕೆಲವೇ ನಿಮಿಷಗಳಲ್ಲಿ ಪಡೆಯಲು ಶೀಘ್ರದಲ್ಲೇ UPI ಆಧಾರಿತ ವಿತ್‌ಡ್ರಾ ಸೌಲಭ್ಯವನ್ನೂ ತರಲಾಗುತ್ತಿದೆ.

    ಇನ್ನು ಇದರ ಜೊತೆಗೆ ‘ಐದನೆಯದಾಗಿ, EPF ಕನಿಷ್ಠ ವೇತನ ಮಿತಿಯನ್ನು ಹೆಚ್ಚಿಸುವ ಕುರಿತೂ ಗಂಭೀರ ಪ್ರಯತ್ನಗಳು ನಡೆಯುತ್ತಿದ್ದು, ಇದು ಜಾರಿಗೆ ಬಂದರೆ ಹೆಚ್ಚಿನ ಸಂಖ್ಯೆಯ ಉದ್ಯೋಗಿಗಳು ಪಿಎಫ್ ವ್ಯಾಪ್ತಿಗೆ ಬರಲು ಅನುಕೂಲವಾಗಲಿದೆ. ಖಾಸಗಿ ಸಂಸ್ಥೆಗಳಲ್ಲಿ ಕೆಲಸ ಮಾಡುವ ಪ್ರತಿಯೊಬ್ಬ ಉದ್ಯೋಗಿಯೂ ಈ ಹೊಸ ಬದಲಾವಣೆಗಳ ಬಗ್ಗೆ ತಿಳಿದುಕೊಳ್ಳುವುದು ತುಂಬಾ ಮುಖ್ಯವಾಗಿದೆ.

    ಸದ್ಯಕ್ಕೆ ‘EPFO ತಂದಿರುವ ಈ ಹೊಸ ಸುಧಾರಣೆಗಳು ಕೋಟ್ಯಂತರ ಉದ್ಯೋಗಿಗಳಿಗೆ ದೊಡ್ಡ ರಿಲೀಫ್ ಅಂತೂ ನೀಡಿವೆ!

    About The Author

    Karnataka Tv

    See author's posts

    • TAGS
    • Aadhaar face authentication
    • EPF rules
    • EPFO auto settlement
    • EPFO latest update
    • EPFO new rules
    • PF account
    • PF claim settlement
    • Provident Fund
    • UAN activation
    • UMANG app
    Share
    WhatsApp
    Twitter
    Facebook
    Linkedin
    Telegram
      Previous articleಬೆಂಗಳೂರಿನ ಶಾಲೆಯಲ್ಲಿ ಜ್ವರದ ಲಕ್ಷಣಗಳಿಗೆ ಆತಂಕ – H1N1 ಬಗ್ಗೆ ಆರೋಗ್ಯ ಇಲಾಖೆ ಸ್ಪಷ್ಟನೆ
      Next articleದೇಶದ ಮಕ್ಕಳಿಗೆ ಸುಳ್ಳು ಹೇಳ್ಬೇಡಿ – ರಿಜಿಜುಗೆ ರಾಹುಲ್ ಕೌಂಟರ್!
      Karnataka Tv

      RELATED ARTICLESMORE FROM AUTHOR

      ಹೂಡಿಕೆದಾರರೇ ಗಮನಿಸಿ – ‘ಸೆಬಿ’ಯಿಂದ ಹೊಸ ನಿಯಮ ಜಾರಿ!

      ಬಂಗಾರ ಪ್ರಿಯರಿಗೆ ಬಿಗ್ ರಿಲೀಫ್ – ಒಂದೇ ಸಮನೆ ಕುಸಿದ ಚಿನ್ನ ಹಾಗೂ ಬೆಳ್ಳಿ ಬೆಲೆ!

      ಕಾರ್ಮಿಕರ ಮಕ್ಕಳಿಗೆ ಕೇಂದ್ರ ಸರ್ಕಾರದ ಬಂಪರ್ ಕೊಡುಗೆ – ₹25,000ವರೆಗೆ ವಿದ್ಯಾರ್ಥಿವೇತನ!

      Stay connected

      Facebook
      Instagram
      Twitter
      Youtube

      © 2026 Karnataka TV - All Rights Reserved | Powered by Kalahamsa Infotech Pvt. ltd.