Bengaluru News: ಇನ್ನು ಕೆಲ ದಿನಗಳಲ್ಲೇ ಬೆಂಗಳೂರಿನಲ್ಲಿ ಪಿಂಕ್ ಲೈನ್ ಮೆಟ್ರೋ ಉದ್ಘಾಟನೆಗೆ ಸಜ್ಜಾಗಿದ್ದು, ಈ ಬಗ್ಗೆ ಸಂಸದ ತೇಜಸ್ವಿ ಸೂರ್ಯ ಸಂತೋಷ ವ್ಯಕ್ತಪಡಿಸಿದ್ದಾರೆ.
ಇಂದು ಬೆಂಗಳೂರಿನಲ್ಲಿ ನಗರಾಭಿವೃದ್ಧಿ ಸಚಿವ ಕೃಷ್ಣಭೈರೇಗೌಡರ ಜತೆ ಮೆಟ್ರೋದಲ್ಲಿ ಪ್ರಯಾಣಿಸಿದ ಸಂಸದ ತೇಜಸ್ವಿ ಸೂರ್ಯ ಈ ಬಗ್ಗೆ ಮಾತನಾಡಿದ್ದು, ಇದೀಗ ಪಿಂಕ್ ಲೈನ್ ಮೆಟ್ರೋ, ಉದ್ಘಾಟನೆಗೆ ಇನ್ನಷ್ಟು ಹತ್ತಿರವಾಗಿದ್ದು, ಇದು ಬೆಂಗಳೂರಿನ ಪ್ರಯಾಣಿಕರಿಗೆ ದೊಡ್ಡ ಮಟ್ಟದ ಅನುಕೂಲವಾಗಲಿದೆ. ಬಿಡಿಎ ಸಚಿವರಾದ ಶ್ರೀ ಕೃಷ್ಣ ಬೈರೇಗೌಡ ಹಾಗೂ ಶಾಸಕರಾದ ಶ್ರೀ ಎಂ. ಕೃಷ್ಣಪ್ಪ ಅವರೊಂದಿಗೆ ಇಂದು ಜಯದೇವ ಜಂಕ್ಷನ್‌ನಿಂದ ಕಾಳೇನ ಅಗ್ರಹಾರವರೆಗೆ ಪಿಂಕ್ ಲೈನ್ ಮಾರ್ಗ ಹಾಗೂ ಎಲ್ಲಾ ನಿಲ್ದಾಣಗಳನ್ನು ಪರಿಶೀಲಿಸಲಾಯಿತು ಎಂದಿದ್ದಾರೆ.
ಉಳಿದಿರುವ ಸುರಕ್ಷತಾ ಅನುಮತಿಗಳನ್ನು 1–2 ವಾರಗಳಲ್ಲಿ ಪೂರ್ಣಗೊಳಿಸುವುದಾಗಿ CMRS ಭರವಸೆ ನೀಡಿದ್ದು, ನಂತರ ರೋಲಿಂಗ್ ಸ್ಟಾಕ್‌ಗೆ ಅನುಮೋದನೆ ದೊರೆಯಲಿದೆ. ಎಲ್ಲಾ ಅಗತ್ಯ ಅನುಮೋದನೆಗಳು ಆದಷ್ಟು ಶೀಘ್ರವಾಗಿ ದೊರೆಯುವಂತೆ ಕೇಂದ್ರ ಸರ್ಕಾರ, ಸಂಬಂಧಪಟ್ಟ ಸಚಿವರು ಹಾಗೂ ರೈಲ್ವೆ ಮಂಡಳಿ ಅಧ್ಯಕ್ಷರೊಂದಿಗೆ ನಾನೇ ವೈಯಕ್ತಿಕವಾಗಿ ನಿರಂತರವಾಗಿ ಫಾಲೋ ಅಪ್ ಮಾಡುತ್ತಿದ್ದು, ಸರ್ಕಾರದ ಉತ್ತಮ ಉಪಕ್ರಮಗಳಿಗೆ ನಮ್ಮ 100% ಬೆಂಬಲ ಇರುತ್ತದೆ.
ಆದರೆ ಟನಲ್ ರೋಡ್‌ನಂತಹ ಅವೈಜ್ಞಾನಿಕ ಮತ್ತು ಅವಿವೇಕದ ಯೋಜನೆಗಳನ್ನು ಮಾತ್ರ ಬಲವಾಗಿ ವಿರೋಧಿಸುತ್ತೇವೆ. ಬೆಂಗಳೂರಿಗೆ ಬೇಕಾಗಿರುವುದು ಪರಿಹಾರಗಳು ಹೊರತು ರಾಜಕೀಯವಲ್ಲ. ಒಗ್ಗಟ್ಟಾಗಿ, ಉತ್ತಮ ಬೆಂಗಳೂರನ್ನು ನಿರ್ಮಿಸುವುದು ನಮ್ಮೆಲ್ಲರ ಜವಾಬ್ದಾರಿ ಎಂದು ತೇಜಸ್ವಿ ಸೂರ್ಯ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.




