Bollywood: ಬಾಲಿವುಡ್ ನಟ ಗೋವಿಂದ ವೈವಾಹಿಕ ಜೀವನದಲ್ಲಿ ಬಿರುಕು: ಕೋರ್ಟ್ ಮೆಟ್ಟಿಲೇರಿದ ಪತ್ನಿ ಸುನೀತಾ

Bollywood News: ಬಾಲಿವುಡ್ ನಟ ಗೋವಿಂದ ಅವರ ಬಗ್ಗೆ ಅವರ ಪತ್ನಿ ಪದೇ ಪದೇ ಆರೋಪ ಮಾಡುತ್ತಲೇ ಬರುತ್ತಿದ್ದರು. ಆದರೆ ಗೋವಿಂದ ಆ ಆರೋಪವನ್ನು ಸ್ವೀಕರಿಸಿರಲಿಲ್ಲ. ಆದರೆ ಗೋವಿಂದ ಅವರ ಸಿನಿಮಾದಲ್ಲಿ ನಟಿಸುತ್ತಿದ್ದ ಸಹ ನಟಿಯ ಜತೆಗೆ ಅವರು ಏರ್ಪೋರ್ಟ್‌ನಲ್ಲಿ ಕಾಣಿಸಿಕ“ಂಡಿರುವ ಹಿನ್ನೆಲೆ ಅವರ ಪತ್ನಿ ಸುನೀತಾ ಕೆಲ ದಿನಗಳ ಹಿಂದೆ ಆಕ್ರೋಶ ವ್ಯಕ್ತಪಡಿಸಿದ್ದರು.

ನಟ-ನಟಿಯರು ಸಿನಿಮಾ ಶೂಟಿಂಗ್ ಮುಗಿದ ಬಳಿಕ ಪ್ರಚಾರಕ್ಕಾಗಿ ಓಡಾಡುತ್ತಾರೆ. ಆದರೆ ಗೋವಿಂದ ಮತ್ತು ನಟಿ ಈಗಲೇ ಓಡಾಡುತ್ತಿದ್ದಾರೆಂದರೆ ಏನರ್ಥ..? ಆಕೆ ಅವನ ಮಗಳ ವಯಸ್ಸಿನವಳು. ಅವಳ ಜತೆ ಓಡಾಡತ್ತಿದ್ದಾನೆ, ಕರ್ಮ ಅವನನ್ನು ಸುಮ್ಮನೆ ಬಿಡುವುದಿಲ್ಲ ಎಂದು ಸುನೀತಾ ಆಕ್ರೋಶ ವ್ಯಕ್ತಪಡಿಸಿದ್ದಳು.

ಇದೀಗ ಪುತ್ರನ ಜತೆ ಪ್ಯಾಮಿಲಿ ಕೋರ್ಟ್ ಗೆ ಸುನೀತಾ ಭೇಟಿ ನೀಡಿದ್ದರು. ಪುತ್ರ ಯಶ್ವರ್ಧನ್ ಮತ್ತು ವಕೀಲರ ಜತೆ ಇಂದು ಮಧ್ಯಾಹ್ನ ಬಾಂದ್ರಾದ ಫ್ಯಾಮಿಲಿ ಕೋರ್ಟ್ ಗೆ ಸುನೀತಾ ಭೇಟಿ ನೀಡಿದ್ದರು. ಈ ವೇಳೆ ಪಾಪರಾಜಿಗಳು ಕೋರ್ಟ್‌ಗೆ ಏಕೆ ಬಂದಿದ್ದೀರಿ ಎಂದು ಕೇಳಿದಾಗ ಸುನೀತಾ ವ್ಯಂಗ್ಯವಾಡಿ ಬರ್ತ್‌ಡೇ ಆಚರಿಸಲು ಬಂದಿದ್ದೆ ಎಂದು ಹೇಳಿ ಕಾರ್ ಹತ್ತಿ ಹೋಗಿದ್ದಾರೆ. ಆದರೆ ಅವರು ಕೋರ್ಟ್‌ಗೆ ಯಾಕೆ ಬಂದಿದ್ದರು ಎಂಬ ಬಗ್ಗೆ ಸ್ಪಷ್ಟನೆ ನೀಡಿಲ್ಲ.

About The Author