Haveri: ವಿದ್ಯುತ್ ಕಂಬದಿಂದ ತಂತಿ ಹರಿದು ನೆಲಕ್ಕೆ ಬಿದ್ದ ಪರಿಣಾಮ ಹುಲ್ಲು ಮೇಯಲು ತೆರಳಿದ್ದ ಹಸು ಸಾ*ವು

Haveri News: ವಿದ್ಯುತ್ ಕಂಬದಿಂದ ತಂತಿ ಹರಿದು ನೆಲಕ್ಕೆ ಬಿದ್ದ ಪರಿಣಾಮ ಹುಲ್ಲು ಮೇಯಲು ತೆರಳಿದ್ದ ಹಸುವೊಂದು ವಿದ್ಯುತ್ ಪ್ರವಹಿಸಿ ಸ್ಥಳದಲ್ಲೇ ಮೃತಪಟ್ಟ ಘಟನೆ ರಾಣೇಬೆನ್ನೂರ ತಾಲೂಕಿನ ಚೌಡಯ್ಯದಾನಪುರ ಗ್ರಾಮದಲ್ಲಿ ಮಂಗಳವಾರದಂದು ನಡೆದಿದೆ.

ಗ್ರಾಮದ ಬಸಪ್ಪ ಹರಿಜನ ಅವರಿಗೆ ಸೇರಿದ ಹಸು ಹುಲ್ಲು ಮೇಯಲು ತೆರಳಿದ್ದ ವೇಳೆ ನೆಲಕ್ಕೆ ಬಿದ್ದಿದ್ದ ವಿದ್ಯುತ್ ತಂತಿಯನ್ನು ಆಕಸ್ಮಿಕವಾಗಿ ಸ್ಪರ್ಶಿಸಿದೆ. ತಂತಿಯಲ್ಲಿ ವಿದ್ಯುತ್ ಪ್ರವಹಿಸುತ್ತಿದ್ದ ಹಿನ್ನೆಲೆಯಲ್ಲಿ ಹಸುವಿಗೆ ವಿದ್ಯುತ್‌ ಶಾಕ್ ತಗುಲಿ ಸ್ಥಳದಲ್ಲಿಯೇ ಮೃತಪಟ್ಟಿದೆ.

ಘಟನೆಯಿಂದ ಹಸುವಿನ ಮಾಲೀಕರಿಗೆ ಆರ್ಥಿಕ ನಷ್ಟ ಉಂಟಾಗಿದ್ದು, ಸಂಬಂಧಪಟ್ಟ ವಿದ್ಯುತ್ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ, ನೆಲಕ್ಕೆ ಬಿದ್ದಿದ್ದ ವಿದ್ಯುತ್ ತಂತಿಯನ್ನು ತೆರವುಗೊಳಿಸುವ ಮೂಲಕ ಮುಂದಿನ ದಿನಗಳಲ್ಲಿ ಇಂತಹ ಅವಘಡಗಳು ಸಂಭವಿಸದಂತೆ ಮುನ್ನೆಚ್ಚರಿಕೆ ವಹಿಸಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.

About The Author