Hubli News: ಹುಬ್ಬಳ್ಳಿಯ ಪ್ರಿಯದರ್ಶಿನಿ ಕಾಲೋನಿಯಲ್ಲಿ ಸಾರ್ವಜನಿಕ ರಸ್ತೆ ಅತಿಕ್ರಮಣ ಮಾಡಿ ಕಚೇರಿ ನಿರ್ಮಾಣಕ್ಕೆ ಮುಂದಾಗಿದ್ದಾರೆ ಎಂಬ ಆರೋಪಕ್ಕೆ ಇದೀಗ ಕಾರ್ಪೊರೇಟರ್ ಸಂದಿಲ್ ಕುಮಾರ್ ಸ್ಪಷ್ಟನೆ ನೀಡಿದ್ದಾರೆ. ಜಾಗ ಮೂಲ ಮಾಲೀಕರಿಗೆ ಸೇರಿದ್ದು, ಒಂದು ಗುಂಟೆ ಜಾಗವನ್ನು ದೇವಸ್ಥಾನಕ್ಕೆ ನೀಡಲಾಗಿದೆ. ಸ್ಥಳೀಯ ನಿವಾಸಿಗಳ ಮನವಿ ಮೇರೆಗೆ ತಾನು ಮಧ್ಯಸ್ಥಿಕೆ ವಹಿಸಿದ್ದೇನೆ ಹೊರತು, ವೈಯಕ್ತಿಕವಾಗಿ ಯಾವುದೇ ಕಚೇರಿ ನಿರ್ಮಾಣದ ಉದ್ದೇಶ ಇಲ್ಲ ಎಂದು ಸಂದಿಲ್ ಕುಮಾರ್ ಹೇಳಿದ್ದಾರೆ.
ಪ್ರಿಯದರ್ಶಿನಿ ಕಾಲೋನಿಯ ಜಾಗದ ವಿಚಾರ ಇದೀಗ ವಿವಾದಕ್ಕೆ ಕಾರಣವಾಗಿದೆ. ಸಾರ್ವಜನಿಕ ರಸ್ತೆ ಅತಿಕ್ರಮಣ ಮಾಡಿ ಕಚೇರಿ ನಿರ್ಮಾಣಕ್ಕೆ ಮುಂದಾಗಿದ್ದಾರೆ ಎಂಬ ಆರೋಪ ಕೇಳಿಬಂದಿತ್ತು. ಆದರೆ ಈ ಆರೋಪವನ್ನು ಕಾರ್ಪೊರೇಟರ್ ಸಂದಿಲ್ ಕುಮಾರ್ ತಳ್ಳಿಹಾಕಿದ್ದಾರೆ. ಜಾಗ ಮೂಲ ಮಾಲೀಕರಿಗೆ ಸೇರಿದ್ದು, ಅದರಲ್ಲಿ ಒಂದು ಗುಂಟೆ ಜಾಗವನ್ನು ದೇವಸ್ಥಾನಕ್ಕೆ ನೀಡಲಾಗಿದೆ ಎಂದು ಅವರು ಸ್ಪಷ್ಟಪಡಿಸಿದ್ದಾರೆ.
ಚಳಗೇರಿ ಕುಟುಂಬ ಹಾಗೂ ಸ್ಥಳೀಯ ನಿವಾಸಿಗಳ ನಡುವೆ ಜಾಗದ ವಿಚಾರವಾಗಿ ಗೊಂದಲ ಉಂಟಾದ ಹಿನ್ನೆಲೆಯಲ್ಲಿ, ಸ್ಥಳೀಯ ನಿವಾಸಿಗಳ ಮನವಿ ಮೇರೆಗೆ ತಾನು ಮಧ್ಯಸ್ಥಿಕೆ ವಹಿಸಿದ್ದೇನೆ ಎಂದು ಸಂದಿಲ್ ಕುಮಾರ್ ಹೇಳಿದ್ದಾರೆ. ಯಾವುದೇ ರೀತಿಯ ದುರುಪಯೋಗ ಮಾಡಿಕೊಂಡಿಲ್ಲ. ವೈಯಕ್ತಿಕವಾಗಿ ನನಗೆ ಇಲ್ಲಿ ಯಾವುದೇ ಕಚೇರಿ ನಿರ್ಮಾಣದ ಅವಶ್ಯಕತೆಯೂ ಇಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಇನ್ನು ಪ್ರಿಯದರ್ಶಿನಿ ಕಾಲೋನಿಯ ನಿವಾಸಿಗಳು ಕೂಡ ಕಾರ್ಪೊರೇಟರ್ ಸಂದಿಲ್ ಕುಮಾರ್ ಮೇಲಿನ ಆರೋಪಗಳನ್ನು ತಳ್ಳಿಹಾಕಿದ್ದಾರೆ. ಕಾಲೋನಿಯ ನಿವಾಸಿಗಳ ಮನವಿಯ ಮೇರೆಗೆ ಸಮಸ್ಯೆ ಬಗೆಹರಿಸಲು ಸಂದಿಲ್ ಕುಮಾರ್ ಮಧ್ಯಸ್ಥಿಕೆ ವಹಿಸಿದ್ದಾರೆ. ಯಾವುದೇ ವೈಯಕ್ತಿಕ ಉದ್ದೇಶದಿಂದ ಅವರು ಈ ವಿಚಾರದಲ್ಲಿ ಮಧ್ಯಪ್ರವೇಶಿಸಿಲ್ಲ ಎಂದು ಸ್ಥಳೀಯರು ಹೇಳಿದ್ದಾರೆ.
ಇದೇ ವೇಳೆ, ಜಾಗದ ಬಳಕೆ ಹಾಗೂ ದೇವಸ್ಥಾನಕ್ಕೆ ನೀಡಿರುವ ಜಾಗದ ಕುರಿತು ಕೂಡ ಸ್ಥಳೀಯರು ಸ್ಪಷ್ಟನೆ ನೀಡಿದ್ದಾರೆ. ಮೂಲ ಮಾಲೀಕರ ಅನುಮತಿಯ ಮೇರೆಗೆ ದೇವಸ್ಥಾನಕ್ಕೆ ಅಗತ್ಯವಿರುವ ಜಾಗವನ್ನು ಬಳಸಿಕೊಳ್ಳಲಾಗುತ್ತಿದೆ. ಗಣೇಶ್ ಮಂಡಳಿಯ ಸಾಮಗ್ರಿಗಳನ್ನು ಇಡಲು ಕೂಡ ಜಾಗದ ಮಾಲೀಕರು ಅವಕಾಶ ಮಾಡಿಕೊಟ್ಟಿದ್ದಾರೆ ಎಂದು ಸ್ಥಳೀಯರು ತಿಳಿಸಿದ್ದಾರೆ.
ಆದ್ರೆ ವಿವಾದಕ್ಕೆ ಕಾರಣವಾಗಿರುವುದು ಸಾರ್ವಜನಿಕ ರಸ್ತೆ ಹಾಗೂ ಖಾಸಗಿ ಜಾಗದ ನಡುವಿನ ಗೊಂದಲ. ಜಾಗ ಯಾರಿಗೆ ಸೇರಿದೆ, ರಸ್ತೆ ಎಲ್ಲಿಯವರೆಗೆ ಇದೆ ಎಂಬುದು ದಾಖಲೆ ಹಾಗೂ ಪಾಲಿಕೆ ನಕ್ಷೆಯಲ್ಲಿ ಸ್ಪಷ್ಟವಾಗಬೇಕಿದೆ. ಹೀಗಾಗಿ ಸಂಬಂಧಪಟ್ಟ ಅಧಿಕಾರಿಗಳು ಸ್ಥಳ ಪರಿಶೀಲನೆ ನಡೆಸಿ ವಾಸ್ತವಾಂಶವನ್ನು ಬಹಿರಂಗಪಡಿಸಬೇಕಿದೆ.
ಒಟ್ಟಿನಲ್ಲಿ ಪ್ರಿಯದರ್ಶಿನಿ ಕಾಲೋನಿಯ ಜಾಗದ ವಿಚಾರದಲ್ಲಿ ಆರೋಪ–ಪ್ರತ್ಯಾರೋಪಗಳು ಕೇಳಿಬರುತ್ತಿವೆ. ಸಾರ್ವಜನಿಕ ರಸ್ತೆ ಅತಿಕ್ರಮಣ ಮಾಡಿ ಕಚೇರಿ ನಿರ್ಮಾಣಕ್ಕೆ ಮುಂದಾಗಿದ್ದಾರೆ ಎಂಬ ಆರೋಪವನ್ನು ಕಾರ್ಪೊರೇಟರ್ ಹಾಗೂ ಸ್ಥಳೀಯ ನಿವಾಸಿಗಳು ತಳ್ಳಿಹಾಕಿದ್ದಾರೆ. ಇದು ಮೂಲ ಮಾಲೀಕರ ಜಾಗವಾಗಿದ್ದು, ದಾಖಲೆಗಳ ಪರಿಶೀಲನೆಯಿಂದಲೇ ಜಾಗದ ವಿಚಾರಕ್ಕೆ ಸಂಪೂರ್ಣ ಸ್ಪಷ್ಟತೆ ಸಿಗಬೇಕಿದೆ.

