ಹಬ್ಬದ ಪ್ರಯಾಣಕ್ಕೆ ಜೇಬಿಗೆ ಹೊರೆ? ಪೆಟ್ರೋಲ್-ಡೀಸೆಲ್ ದರ ಹೀಗಿದೆ!

ಹಬ್ಬದ ಸಂಭ್ರಮದ ಈ ವಾರದಲ್ಲಿ ನೀವು ಪ್ರಯಾಣ ಬೆಳೆಸಲು ಪ್ಲಾನ್ ಮಾಡಿದ್ದೀರಾ? ಹಾಗಾದರೆ ಹೊರಡುವ ಮುನ್ನ ಇಂಧನ ದರವನ್ನು ಪರಿಶೀಲಿಸುವುದು ಅತ್ಯಂತ ಮುಖ್ಯ. ಮಂಗಳವಾರ, ಆಗಸ್ಟ್ 25ರಂದು ಬೆಂಗಳೂರು, ದೆಹಲಿ, ಮುಂಬೈ ಹಾಗೂ ಚೆನ್ನೈ ನಗರಗಳಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ದರಗಳು ಸ್ಥಿರವಾಗಿವೆ ಎಂದು ತೈಲ ಮಾರಾಟ ಕಂಪನಿಗಳು ತಿಳಿಸಿವೆ.

ಓಣಂ ಹಾಗೂ ರಕ್ಷಾ ಬಂಧನದ ಹಬ್ಬದ ಪ್ರಯಾಣಕ್ಕೂ ಮುನ್ನ ವಾಹನಗಳಿಗೆ ಇಂಧನ ತುಂಬಿಸಿಕೊಳ್ಳಲು ಅನುಕೂಲವಾಗುವಂತೆ ಇಂದಿನ ಬೆಲೆ ವಿವರ ಹೀಗಿದೆ ನೋಡಿ – ಎಸ್ ‘ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ದರದಲ್ಲಿ ಏರಿಳಿತವಿದ್ದರೂ, ದೇಶೀಯ ಚಿಲ್ಲರೆ ದರವನ್ನು ಸರ್ಕಾರಿ ತೈಲ ಮಾರಾಟ ಕಂಪನಿಗಳು ಯಥಾಸ್ಥಿತಿಯಲ್ಲಿರಿಸಿವೆ. ವಿವಿಧ ರಾಜ್ಯಗಳ ಮೌಲ್ಯವರ್ಧಿತ ತೆರಿಗೆ ಹಾಗೂ ಸ್ಥಳೀಯ ಶುಲ್ಕಗಳ ಕಾರಣದಿಂದ ನಗರದಿಂದ ನಗರಕ್ಕೆ ಇಂಧನ ದರದಲ್ಲಿ ವ್ಯತ್ಯಾಸವಿರುತ್ತದೆ.

ಇಂದಿನ ಪ್ರಮುಖ ನಗರಗಳ ಇಂಧನ ಬೆಲೆ ನೋಡುವುದಾದರೆ – ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಪ್ರತಿ ಲೀಟರ್ ಪೆಟ್ರೋಲ್ ಬೆಲೆ 110 ರೂಪಾಯಿ 89 ಪೈಸೆ ಇದ್ದರೆ, ಡೀಸೆಲ್ ಬೆಲೆ 98 ರೂಪಾಯಿ 80 ಪೈಸೆಯಷ್ಟಿದೆ. ಇನ್ನು ದೇಶ ರಾಜಧಾನಿ ದೆಹಲಿಯಲ್ಲಿ ಪೆಟ್ರೋಲ್ ಬೆಲೆ 102 ರೂಪಾಯಿ 12 ಪೈಸೆ ಹಾಗೂ ಡೀಸೆಲ್ ಬೆಲೆ 95 ರೂಪಾಯಿ 20 ಪೈಸೆ ಇದೆ. ಮುಂಬೈನಲ್ಲಿ ಪೆಟ್ರೋಲ್ ಪ್ರತಿ ಲೀಟರ್‌ಗೆ 111 ರೂಪಾಯಿ 21 ಪೈಸೆ ಹಾಗೂ ಚೆನ್ನೈನಲ್ಲಿ 108 ರೂಪಾಯಿ 1 ಪೈಸೆ ಇದೆ. ಇಂದಿನ ದರದಲ್ಲಿ ಯಾವುದೇ ಬದಲಾವಣೆಯಾಗಿಲ್ಲದಿರುವುದು ಪ್ರಯಾಣಿಕರಿಗೆ ಕೊಂಚ ರಿಲೀಫ್ ನೀಡಿದೆ ಅಂತಾನೆ ಹೇಳಬಹುದು.

ನೀವು ರಾಜ್ಯದ ಗಡಿಗಳನ್ನು ದಾಟಿ ದೂರದ ಪ್ರಯಾಣ ಬೆಳೆಸುವಾಗ ತೆರಿಗೆಯ ವ್ಯತ್ಯಾಸದಿಂದಾಗಿ ಇಂಧನ ಬೆಲೆಯಲ್ಲಿ ಏರಿಳಿತವಿರಬಹುದು. ಇಂದಿನ ನಿಖರವಾದ ದರವನ್ನು ತಿಳಿಯಲು ಇಂಡಿಯನ್ ಆಯಿಲ್ ಒನ್ ಆಪ್ ಅಥವಾ ಎಸ್‌ಎಂಎಸ್ ಸೌಲಭ್ಯವನ್ನು ಬಳಸಿಕೊಳ್ಳಬಹುದು. ಹಣ ಪಾವತಿಸುವ ಮುನ್ನ ದರವನ್ನು ಖಚಿತಪಡಿಸಿಕೊಳ್ಳಿ.

About The Author