Dehradun News: ಹಿಂದೂ ಧರ್ಮ ಸ್ವಕರಿಸಿದ 6 ಮಂದಿ ಮುಸ್ಲಿಂಮರು

Dehradun News: ಉತ್ತರಪ್ರದೇಶದ ಮುಸ್ಲಿಂ ಧರ್ಮದ 6 ಮಂದಿ ಹಿಂದೂ ಧರ್ಮ ಸ್ವಕರಿಸಿದ್ದಾರೆ. ಗಂಗಾ ನದಿಯಲ್ಲಿ ಸ್ನಾನ ಮಾಡಿ, ಪದ್ಧತಿ ಪ್ರಕಾರವಾಗಿ ಹಿಂದೂ ಧರ್ಮಕ್ಕೆ ಬಂದಿದ್ದಾರೆ.

ಹರಿದ್ವಾರದ ಚಂಡಿಘಾಟ್‌ನಲ್ಲಿ ಗಂಗಾ ಸ್ನಾನ, ಗಂಗಾ ಪೂಜೆ, ಹವನ ಎಲ್ಲವನ್ನೂ ಮಾಡಿ, 6 ಮಂದಿ ಹಿಂದೂ ಧರ್ಮ ಸ್ವೀಕರಿಸಿದ್ದಾರೆ. ಉತ್ತರಪ್ರದೇಶದ ಫಿಲಿಬಿತ್ ಜಿಲ್ಲೆಯ ಮಹೀದ್ ಎಂಬಾತ ಈಗ ಮೋಹಿತ್ ಆಗಿದ್ದಾನೆ. ಆತನ ಪತ್ನಿ ಸಬೀನಾ ಬಿಬಿ ಖುಷಿ ಆಗಿ ಹೆಸರು ಬದಲಾಯಿಸಿದ್ದಾರೆ. ಇನ್ನು ಇವರಿಬ್ಬರ ಗಂಡು ಮಕ್ಕಳು ರೋಷನ್ ಮತ್ತು ರೋಹನ್ ಆಗಿ ಬದಲಾಗಿದ್ದಾರೆ. ಹೆಣ್ಣು ಮಗುವಿಗೆ ಅನನ್ಯಾ ಎಂದು ಹೆಸರಿರಿಸಿದ್ದಾರೆ.  ಇನ್ನೋರ್ವ ವ್ಯಕ್ತಿ ಇಬ್ರಾಹಿಂ ವಿರಾಟ್ ಎಂದು ಹೆಸರು ಮತ್ತು ಧರ್ಮ ಬದಲಾಯಿಸಿದ್ದಾರೆ.

ತಮ್ಮ ನಿರ್ಧಾರ ಸ್ವಇಚ್ಛೆಯಿಂದ ತೆಗೆದುಕೊಂಡಿರುವುದಾಗಿ ಮೋಹಿತ್ ತಿಳಿಸಿದ್ದಾರೆ ಎಂದು ವರದಿಯಾಗಿದೆ. ಸನಾತನ ಧರ್ಮದ ಬಗ್ಗೆ ಗೌರವ, ಕರುಣೆ ಮತ್ತು ಶಾಂತಿಯ ಭಾವನೆ ಮೂಡಿದ್ದರಿಂದ ಈ ನಿರ್ಧಾರ ಕೈಗೊಂಡಿರುವುದಾಗಿ ಅವರು ಹೇಳಿದ್ದಾರೆ. ತೀರ್ಥ ಸೇವಾ ನ್ಯಾಯಾಸ್ ಸಂಸ್ಥೆಯ ಅಧ್ಯಕ್ಷ ಸಂತ ರಾಮ್ ವಿಶಾಲ್ ದಾಸ್ ಮಹಾರಾಜ್ ಅವರ ಮಾರ್ಗದರ್ಶನದಲ್ಲಿ ಈ ಕಾರ್ಯಕ್ರಮ ನಡೆದಿದೆ.

About The Author