ಬೆಂಗಳೂರು: HIV ಸೋಂಕಿತರಲ್ಲಿ ಹೃದಯ ಸಂಬಂಧಿತ ಸಮಸ್ಯೆಗಳು ಹಾಗೂ ಅವುಗಳ ನಿರ್ವಹಣೆ ಕುರಿತು ಚರ್ಚಿಸುವ ‘HIV & HEART Symposium 2026’ ಕಾರ್ಯಕ್ರಮ ಇಂದು ಬೆಂಗಳೂರಿನ ಶ್ರೀ ಜಯದೇವ ಹೃದಯ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆಯಲ್ಲಿ ನಡೆಯಿತು.
HIV & Heart: ಆರೋಗ್ಯದ ಹೊಸ ಆಯಾಮ
‘Evidence. Research. Innovation’ ಎಂಬ ಆಶಯದೊಂದಿಗೆ ನಡೆದ ಈ ವಿಚಾರ ಸಂಕಿರಣದಲ್ಲಿ ವೈದ್ಯಕೀಯ ಕ್ಷೇತ್ರದ ಹಲವು ತಜ್ಞರು ಹಾಗೂ ಗಣ್ಯರು ಭಾಗವಹಿಸಿದ್ದರು. HIV ಸೋಂಕಿತರಲ್ಲಿ ಹೃದಯ ಆರೋಗ್ಯದ ಮಹತ್ವ, ಚಿಕಿತ್ಸಾ ವಿಧಾನಗಳು ಹಾಗೂ ಹೃದಯ ಸಂಬಂಧಿತ ಸಮಸ್ಯೆಗಳ ನಿರ್ವಹಣೆ ಕುರಿತು ತಜ್ಞರು ವಿಚಾರ ವಿನಿಮಯ ನಡೆಸಿದರು.
ಕಾರ್ಯಕ್ರಮದಲ್ಲಿ ನಾರಾಯಣ ಹೆಲ್ತ್‌ನ ಸಂಸ್ಥಾಪಕ ಹಾಗೂ ಅಧ್ಯಕ್ಷರಾದ ಡಾ. ದೇವಿ ಪ್ರಸಾದ್ ಶೆಟ್ಟಿ, KSAPSನ PD ಪದ್ಮ ಬಸವನ್ತಪ್ಪ IAS, AIDS Society of Indiaಯ President Emeritus ಡಾ. ಈಶ್ವರ ಗಿಲಾಡಾ, AIDS Society of Indiaಯ ಅಧ್ಯಕ್ಷೆ ಡಾ. ಗ್ಲೋರಿ ಅಲೆಕ್ಸಾಂಡರ್ ಸೇರಿದಂತೆ ಹಲವು ಗಣ್ಯರ ಹೆಸರುಗಳು ಆಹ್ವಾನ ಪತ್ರಿಕೆಯಲ್ಲಿ ಉಲ್ಲೇಖವಾಗಿವೆ.
ಕಾರ್ಯಕ್ರಮಕ್ಕೆ ಸಚಿವರು ಆಗಮಿಸುವ ನಿರೀಕ್ಷೆ ಇತ್ತಾದರೂ, ಸಚಿವರು ಕಾರ್ಯಕ್ರಮಕ್ಕೆ ಹಾಜರಾಗಲಿಲ್ಲ. ಸಚಿವರ ಅನುಪಸ್ಥಿತಿಯ ನಡುವೆಯೂ ವೈದ್ಯರು ಮತ್ತು ಆರೋಗ್ಯ ಕ್ಷೇತ್ರದ ತಜ್ಞರ ಉಪಸ್ಥಿತಿಯಲ್ಲಿ ವಿಚಾರ ಸಂಕಿರಣ ಮುಂದುವರಿಯಿತು.
ಕಾರ್ಯಕ್ರಮದಲ್ಲಿ ಗಣ್ಯರು ಭಾಗವಹಿಸಿದ ಸಂದರ್ಭ
ಕಾರ್ಯಕ್ರಮದ ಭಾಗವಾಗಿ HIV ಸೋಂಕಿತರಲ್ಲಿ ಹೃದಯ ಸಂಬಂಧಿತ ತೊಂದರೆಗಳು, Acute Coronary Syndrome ಸೇರಿದಂತೆ ವಿವಿಧ ವೈದ್ಯಕೀಯ ವಿಚಾರಗಳ ಕುರಿತು ಚರ್ಚೆ ನಡೆಯಿತು. ಡಾ. ನವೀನಾ ಜೆ. ಎಂ. ಅವರು ‘No Reflow Phenomenon in ACS in PLHIV’ ಹಾಗೂ ನಿರ್ವಹಣಾ ತಂತ್ರಗಳ ಕುರಿತು ವಿಷಯ ಮಂಡನೆ ನಡೆಸಿದರು.
HIV ಮತ್ತು ಹೃದಯ ಆರೋಗ್ಯದ ನಡುವಿನ ಸಂಬಂಧದ ಕುರಿತು ವೈದ್ಯಕೀಯ ಕ್ಷೇತ್ರದಲ್ಲಿ ಸಂಶೋಧನೆ, ಹೊಸ ಚಿಕಿತ್ಸಾ ವಿಧಾನಗಳು ಹಾಗೂ ಪರಿಣಾಮಕಾರಿ ನಿರ್ವಹಣಾ ಕ್ರಮಗಳ ಬಗ್ಗೆ ಅರಿವು ಮೂಡಿಸುವ ನಿಟ್ಟಿನಲ್ಲಿ ಈ ವಿಚಾರ ಸಂಕಿರಣ ಮಹತ್ವ ಪಡೆದುಕೊಂಡಿದೆ.
ಆಗಸ್ಟ್ 29, 2026ರಂದು ನಡೆದ ಈ ಕಾರ್ಯಕ್ರಮದಲ್ಲಿ ವೈದ್ಯಕೀಯ ಕ್ಷೇತ್ರದ ತಜ್ಞರು ತಮ್ಮ ಅನುಭವ ಮತ್ತು ಸಂಶೋಧನಾ ಮಾಹಿತಿಯನ್ನು ಹಂಚಿಕೊಂಡರು.
