Koppala News: ಕೊಪ್ಪಳ: ಆ.29ರಂದು ನಡೆದ ತಾಲೂಕು ಪಂಚಾಯಿತಿ ವಾಣಿಜ್ಯ ಮಳಿಗೆಗಳ ಹರಾಜು ಪ್ರಕ್ರಿಯೆಯಲ್ಲಿ ನಿಯಮ ಉಲ್ಲಂಘನೆ ನಡೆದಿದೆ ಎಂದು ಕರವೇ ಸ್ವಾಭಿಮಾನಿ ಸೇನೆ ಆರೋಪಿಸಿದೆ.
ಹರಾಜಿನ ಕುರಿತು ವ್ಯಾಪಕ ಪ್ರಚಾರ ಕೈಗೊಂಡಿಲ್ಲ, ಮಳಿಗೆಗಳ ಸಂಖ್ಯೆ, ಮೀಸಲಾತಿ ಹಾಗೂ ಹರಾಜಿನ ನಿಯಮಗಳನ್ನು ಸಮರ್ಪಕವಾಗಿ ಪ್ರಕಟಿಸಿಲ್ಲ ಎಂದು ಆರೋಪಿಸಿದೆ.
ಒಂದೇ ವಿಸ್ತೀರ್ಣದ ಮಳಿಗೆಗಳಿಗೆ ಬಾಡಿಗೆಯಲ್ಲಿ ಭಾರಿ ವ್ಯತ್ಯಾಸ
ಕೆಲ ಮಳಿಗೆಗಳಿಗೆ ₹8 ಸಾವಿರ, ಇನ್ನು ಕೆಲವಕ್ಕೆ ₹40–50 ಸಾವಿರದವರೆಗೆ ಬಾಡಿಗೆ ನಿಗದಿ ಮಾಡಿರುವುದನ್ನು ಸಂಘಟನೆ ಪ್ರಶ್ನಿಸಿದೆ . ಹರಾಜಿನಲ್ಲಿ ಒಳಒಪ್ಪಂದ ಹಾಗೂ ‘ರಿಂಗ್’ ನಡೆದಿರುವ ಆರೋಪ ಕೆಲವರು ಬಿಡ್‌ನಿಂದ ಹಿಂದೆ ಸರಿದಿದ್ದಾರೆ ಎಂಬ ಗಂಭೀರ ಆರೋಪವನ್ನೂ ಮಾಡಲಾಗಿದೆ.
ಸರ್ಕಾರದ ಆದಾಯಕ್ಕೆ ನಷ್ಟವಾಗಿರುವ ಸಾಧ್ಯತೆ
ಹರಾಜು ಪ್ರಕ್ರಿಯೆಯನ್ನು ಸಂಪೂರ್ಣವಾಗಿ ಪರಿಶೀಲಿಸಿ ಸತ್ಯಾಸತ್ಯತೆ ಬಹಿರಂಗಪಡಿಸುವಂತೆ ಕರ್ನಾಟಕ ಪ್ರಜಾಶಕ್ತಿ ಸಮಿತಿ ತಾಲೂಕು ಅಧ್ಯಕ್ಷ ವಿಜಯಕುಮಾರ ಹಕ್ಕಲ್, ಕರ್ನಾಟಕ ದಲಿತ ಪ್ರಜಾ ಸೇನೆ ತಾಲೂಕು ಅಧ್ಯಕ್ಷ ಸಂಜಯಕುಮಾರ ಸೇರಿದಂತೆ ಮರಿಯಪ್ಪ ಹೆಚ್. ಹಕ್ಕಲ್ ಆಗ್ರಹಿಸಿದ್ದಾರೆ.




