Bigg boss Kannada Season 13: ನಾಮಿನೇಟ್ ಬಗ್ಗೆ ಮಾತನಾಡಿ ಪೇಚಿಗೆ ಸಿಲುಕಿದ ತಾಂಡವ್ ಮತ್ತು ಗಗನ್

Bigg Boss Kannada: ಬಿಗ್‌ಬಾಸ್ ಕನ್ನಡ ಸೀಸನ್ 13 ಶುರುವಾಗಿದ್ದು, ಪ್ಲೇನ್‌ನಲ್ಲಿದ್ದ ಸ್ಪರ್ಧಿಗಳೆಲ್ಲರೂ ಬಿಗ್‌ಬಾಸ್ ಮನೆಗೆ ಬಂದಿದ್ದಾರೆ. ಈ ಮಧ್ಯೆ ಗಗನ್ ಮತ್ತು ಮಂಜನ ಮಧ್ಯ ಜಟಾಪಟಿ ಜೋರಾಗಿದೆ. ಮಂಜನ ಮಾತು ಗಗನ್‌ಗೆ ಇರಿಟೇಟ್ ಆಗುತ್ತಿದ್ದು, ಆತನನ್ನು ಈ ಬಾರಿ ನಾಮಿನೇಟ್ ಮಾಡಬೇಕು ಎಂದು ಗಗನ್ ಮತ್ತು ತಾಂಡವ್ ಪ್ಲಾನ್ ಮಾಡಿದ್ದಾರೆ.

ಇನ್ನು ಕೆಲ ದಿನಗಳಲ್ಲೇ ನಾಮಿನೇಷನ್ ಪ್ರಕ್ರಿಯೆ ಶುರುವಾಗಲಿದೆ ಎಂದು ಗಗನ್ ಹೇಳಿದಾಗ, ಯಾರನ್ನ ನಾಮಿನೇಟ್ ಮಾಡೋದು ಎಂದು ತಾಂಡವ್ ಕೇಳಿದ್ದಾರೆ. ಅದಕ್ಕೆ ಗಗನ್ ನೀನು ಯಾರನ್ನು ನಾಮಿನೇಟ್ ಮಾಡ್ಬೇಕು ಅಂದ್ಕೋಂಡಿದಿಯಾ ಅಂತಾ ಕೇಳ್ತಾರೆ. ಅದಕ್ಕೆ ತಾಂಡವ್ ಮಂಜಾ ಎಂದು ಹೇಳುತ್ತಾರೆ. ಆ ಬಗ್ಗೆ ಮಾತು ಮುಂದುವರೆದು ಇಬ್ಬರೂ ಮಂಜನನ್ನು ಗೇಲಿ ಮಾಡಿದ್ದಾರೆ. ಅಲ್ಲದೇ ತಮಟೆ, ಖಾಲಿ ಡಬ್ಬ ಎಂದು ತಮಾಷೆ ಮಾಡಿದ್ದಾರೆ.

ಅಲ್ಲದೇ ಇನ್ನು ಕೆಲವರಿಗೆ ಮಂಜನನ್ನೇ ನಾಮಿನೇಟ್ ಮಾಡಿ ಎಂದು ಹೇಳಬೇಕು ಎಂದು ಗಗನ್ ಮತ್ತು ತಾಂಡವ್ ಪ್ಲಾನ್ ಮಾಡಿದ್ದು, ಸಂಗೀತಾನನ್ನು ಕನ್ವಿನ್ಸ್ ಮಾಡ್ಬಹುದು. ಜಗ್ಗಿ ನಮ್ಕಡೆ ಇದ್ದಾನೆ. ಅವ್ನು ಚಿಕ್ ಹುಡ್ಗಾ(ಯಶಸ್ ಕೃಷ್ಣಾ) ಲಾಯಲ್ ಆಗಿ ಆಡ್ಬೇಕು ಅಂತಾನೆ. ಅವನನ್ನ ಚಾಕ್ಲೇಟ್ ಕ“ಟ್ಟು ದಾರಿಗ್ ತರಣಾ ಎಂದು ಗಗನ್ ಮತ್ತು ತಾಂಡವ್ ಮಾತನಾಡಿದ್ದಾರೆ.

ಆದರೆ ಇವರಿಬ್ಬರೂ ಈ ರೀತಿ ಮಾತನಾಡಿ, ತಾವೇ ನಾಮಿನೇಟ್ ಆಗುವ ಪರಿಸ್ಥಿತಿಗೆ ಬಂದಿದ್ದಾರೆ. ಬಿಗ್‌ಬಾಸ್ ನಿಯಮದ ಪ್ರಕಾರ, ನಾಮಿನೇಷನ್ ಪ್ರಕ್ರಿಯೆ ಬಗ್ಗೆ ಯಾರೂ ಮಾತನಾಡುವ ಹಾಗಿಲ್ಲ. ಯಾರ್ಯಾರನ್ನ ನಾಮಿನೇಟ್ ಮಾಡ್ಬೇಕು ಎಂದು ಪರಸ್ಪರ ಮಾತನಾಡುವ ಹಾಗಿಲ್ಲ. ಆದರೂ ಗಗನ್ ಮತ್ತು ತಾಂಡವ್ ಈ ರೀತಿಯಾಗಿ ಮಾತನಾಡಿದ್ದು, ಈ ವಾರ ಇವರಿಬ್ಬರೂ ಎಲಿಮಿನೇಟ್ ಆಗುವ ಸಾಧ್ಯತೆ ಹೆಚ್ಚಿದೆ.

ಇನ್ನು ಈ ವೀಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದಂತೆ, ನೆಟ್ಟಿಗರು ಹಿಗ್ಗಾಮುಗ್ಗಾ ವಾಗ್ದಾಳಿ ನಡೆಸಿದ್ದಾರೆ. ಬಿಗ್‌ಬಾಸ್ ಸೀಸನ್ 13ಕ್ಕೆ ಬಂದಿದ್ದೀರಿ. ಇಲ್ಲಿಯವರೆಗೂ ನೀವು ಬಿಗ್‌ಬಾಸ್ ನೋಡೇ ಇಲ್ವಾ ಅಂತಾ. ಇನ್ನು ತನಕಾ ನಾಮಿನೇಷನ್ ಬಗ್ಗೆ ಮಾತಾಡ್ಬಾರದು ಅನನೋ ರೂಲ್ಸ್ ಬಗ್ಗೆನೇ ಗ“ತ್ತಿಲ್ಲಾ ಅಂತಾ ನೆಟ್ಟಿಗರು ವ್ಯಂಗ್ಯವಾಡಿದ್ದಾರೆ.

About The Author