Viral Video: ಈ ಬಾರಿ ಎಲ್ಲಾ ಭಾಷೆಯಲ್ಲೂ 1 ಸಲ ಬಿಗ್‌ಬಾಸ್ ಶುರುವಾಗಿದೆ. ಹಿಂದಿ, ಕನ್ನಡ, ತೆಲುಗು, ತಮಿಳು, ಮಲಯಾಳಂ ಎಲ್ಲ ಭಾಷೆಯಲ್ಲೂ ಸೇಮ್ ದಿನ, ಸೇಮ್ ಸಮಯಕ್ಕೆ ಸ್ಪರ್ಧೆ ಶುರುವಾಗಿದೆ. ಹೀಗಿರುವಾಗ ಬಿಗ್‌ಬಾಸ್ ಮನೆಗೆ ಹೋಗಿ ಸರಿಯಾಗಿ 3 ದಿನವೂ ಪೂರೈಸಿಲ್ಲ. ಆಗಲೇ ಓರ್ವ ಸ್ಪರ್ಧಿ ಬಿಗ್‌ಬಾಸ್ ಮನೆಯ ಗೋಡಿ ಏರಿ, ಆಚೆ ಹೋಗಲು ಯತ್ನಿಸಿದ್ದಾನೆ.
ತಮಿಳಿನಲ್ಲಿ ಬಿಗ್‌ಬಾಸ್ ಸೀಸನ್ 10 ಶುರುವಾಗಿದೆ. ಇದನ್ನು ನಟ ವಿಜಯ್ ಸೇತುಪತಿ ನಿರೂಪಣೆ ಮಾಡುತ್ತಿದ್ದಾರೆ. ಈ ಸೀಸನ್‌ನಲ್ಲಿ ಕುಕ್ ವಿತ್ ಕೋಮಲಿ ಕಾರ್ಯಕ್ರಮದ ಮೂಲಕ ಜನಪ್ರಿಯರಾಗಿದ್ದ ಅನ್ಸಾರ್ ಸ್ಪರ್ಧಿಯಾಗಿ ಭಾಗವಹಿಸಿದ್ದಾರೆ. ಆದರೆ ಅದೇನಾಯ್ತೋ ತಿಳಿದಿಲ್ಲ. ಅನ್ಸರ್ ಗೋಡೆ ಹಾಕಿ ಆಚೆ ಹಾರಲು ಪ್ರಯತ್ನಿಸಿದ್ದಾರೆ. ಅವರು ಗೋಡೆ ಹಾರುವುದರಲ್ಲಿ ಸಕ್ಸಸ್ ಆಗಿದ್ದರೂ, ಅವರು ಆಚೆ ಹೋಗಿದ್ದಾರೋ ಇಲ್ಲವೋ ತಿಳಿದಿಲ್ಲ. ಅದನ್ನು ಇಂದಿನ ಎಪಿಸೋಡ್‌ನಲ್ಲಿ ತೋರಿಸಲಾಗುತ್ತದೆ.
Day 2 dhaana da aachu 🤣😆🤣😆🤣#Biggbosstamil10 #biggbosstamil pic.twitter.com/1UjzTr8neK
— MsTom Prem (@Mstomprem) September 8, 2026




