ಚಿನ್ನ ಖರೀದಿಗೆ ಗುಡ್ ನ್ಯೂಸ್ – ಇಂದು ಮತ್ತೆ ಇಳಿಕೆಯಾದ ಬಂಗಾರ!

ಚಿನ್ನ ಖರೀದಿಸುವ ಯೋಚನೆ ಇದ್ದರೆ ಇಂದಿನ ಗೋಲ್ಡ್ ರೇಟ್ ಮೇಲೊಂದು ಕಣ್ಣು ಹಾಕಿ. ಎಸ್ ‘ದೇಶದ ಚಿಲ್ಲರೆ ಮಾರುಕಟ್ಟೆಯಲ್ಲಿ ಇಂದಿನ ಚಿನ್ನ ಮತ್ತು ಬೆಳ್ಳಿಯ ಬೆಲೆ ಎಷ್ಟಿದೆ? ಆಭರಣ ಖರೀದಿ ಮಾಡುವಾಗ ಮೇಕಿಂಗ್ ಚಾರ್ಜ್ ಹಾಗೂ ಜಿಎಸ್‌ಟಿ ಸೇರಿಸಿ ಒಟ್ಟು ಎಷ್ಟು ಹಣ ನೀಡಬೇಕಾಗುತ್ತದೆ ಎಂಬುದರ ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ.

ಸೆಪ್ಟೆಂಬರ್ 9, 2026ರ ಇಂದಿನ ಮಾರುಕಟ್ಟೆ ದರದಂತೆ, ಚಿನ್ನದ ಬೆಲೆಯಲ್ಲಿ ಅಲ್ಪ ಇಳಿಕೆ ಕಂಡುಬಂದಿದೆ. ಹೌದು ’24 ಕ್ಯಾರೆಟ್ ಶುದ್ಧ ಚಿನ್ನದ ಬೆಲೆ ಪ್ರತಿ ಗ್ರಾಂಗೆ 15,431 ರೂಪಾಯಿಗಳಿದ್ದು, 104 ರೂಪಾಯಿ ಇಳಿಕೆಯಾಗಿದೆ. 22 ಕ್ಯಾರೆಟ್ ಆಭರಣ ಚಿನ್ನದ ಬೆಲೆ ಪ್ರತಿ ಗ್ರಾಂಗೆ 14,145 ರೂಪಾಯಿಗಳಿದ್ದು, 95 ರೂಪಾಯಿ ತಗ್ಗಿದೆ. ಇನ್ನು 18 ಕ್ಯಾರೆಟ್ ಚಿನ್ನದ ಬೆಲೆ ಪ್ರತಿ ಗ್ರಾಂಗೆ 11,573 ರೂಪಾಯಿಗಳಿದ್ದು, 78 ರೂಪಾಯಿ ಕಡಿಮೆಯಾಗಿದೆ ಅಂತ ತಿಳಿದುಬಂದಿದೆ.

ನೀವೇನಾದರೂ 10 ಗ್ರಾಂ ಅಥವಾ ನಿಗದಿತ ತೂಕದ 22 ಕ್ಯಾರೆಟ್ ಆಭರಣವನ್ನು ಖರೀದಿಸಲು ಮುಂದಾದರೆ, ಮೂಲ ಬೆಲೆ ಜೊತೆಗೆ ಮೇಕಿಂಗ್ ಚಾರ್ಜ್ ಮತ್ತು ಶೇಕಡಾ 3ರಷ್ಟು ಜಿಎಸ್‌ಟಿ ಸೇರಿ ಒಟ್ಟು ಮೊತ್ತದ ಲೆಕ್ಕಾಚಾರ ಬರುತ್ತದೆ. ಉದಾಹರಣೆಗೆ, ನಿರ್ದಿಷ್ಟ ತೂಕದ ಲೆಕ್ಕಾಚಾರದಲ್ಲಿ ಮೂಲ ಬೆಲೆ 1,41,450 ರೂಪಾಯಿಗಳಿದ್ದರೆ, ಮೇಕಿಂಗ್ ಚಾರ್ಜ್ 16,974 ರೂಪಾಯಿ ಹಾಗೂ ಜಿಎಸ್‌ಟಿ 4,753 ರೂಪಾಯಿ ಸೇರಿ ಒಟ್ಟು ಮೊತ್ತ 1,63,177 ರೂಪಾಯಿಗಳಾಗಲಿದೆ.

ಹಣದುಬ್ಬರ ಹೆಚ್ಚಿರುವ ಈ ಕಾಲದಲ್ಲಿ ಬಂಡವಾಳ ಹೂಡಿಕೆಗೆ ಚಿನ್ನ ಯಾವಾಗಲೂ ಉತ್ತಮ ಆಯ್ಕೆಯಾಗಿದೆ. ನೀವು ಚಿನ್ನ ಖರೀದಿಸುವ ಮುನ್ನ ಅಂದಿನ ದರ ಮತ್ತು ಮೇಕಿಂಗ್ ಚಾರ್ಜ್‌ಗಳನ್ನು ಸರಿಯಾಗಿ ಪರಿಶೀಲಿಸಿ ಮುಂದುವರಿಯುವುದು ಒಳ್ಳೆಯದು.

About The Author