Political News: ಸಚಿವರಾದ ಸತೀಶ್ ಜಾರಕಿಹ`ಳಿ ಮನೆ ಮತ್ತು ಕಚೇರಿ ಮೇಲೆ ಇಡಿ ದಾಳಿ ನಡೆದಿದ್ದು, ಇದನ್ನು ಖಂಡಿಸಿ ಕಾಂಗ್ರೆಸ್ ಬೆಂಗಳೂರಿನಲ್ಲಿ ಪ್ರತಿಭಟನೆ ನಡೆಸಿತ್ತು.
ಈ ವೇಳೆ ಮಾತನಾಡಿದ ಕೆಪಿಸಿಸಿ ಅಧ್ಯಕ್ಷ ಬಿ.ಕೆ.ಹರಿಪ್ರಸಾದ್ ಬಿಜೆಪಿ ಮತ್ತು ಕೇಂದ್ರ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸಚಿವರಾದ ಸತೀಶ್ ಜಾರಕಿಹ“ಳಿ ವಿರುದ್ಧ ಇಡಿ ದಾಳಿ ಕೇವಲ ವಯಕ್ತಿಕ ದಾಳಿಯಲ್ಲ. ಇದು ಸಂವಿಧಾನದ ಮೇಲೆ ನಡೆದ ದಾಳಿ, ಹಾಗೂ ಕಾಂಗ್ರೆಸ್ ಪಕ್ಷದ ಮೇಲೆ ನಡೆದ ದಾಳಿ ಎಂದು ಹರಿಪ್ರಸಾದ್ ಹೇಳಿದ್ದಾರೆ.
ದಲಿತರು, ದುರ್ಬಲ ವರ್ಗದವರು ರಾಜಕೀಯವಾಗಿ, ಸಾರ್ವಜನಿಕ ಜೀವನದಲ್ಲಿ ಶಕ್ತಿಯುತವಾಗಿ ಬೆಳೆಯುತ್ತಿದ್ದರೆ ಅವರಿಗೆ ಕಷ್ಟ ತಪ್ಪಿದ್ದಲ್ಲ. ಬುದ್ದನಿಂದ ಬಸವಣ್ಣ, ಏಸು ಕ್ರಿಸ್ತ ಸೇರಿದಂತೆ ಯಾರೇ ಸುಧಾರಣೆ ಮಾಡಲು ಬಂದರು ಇದೇ ರೀತಿಯ ತೊಂದರೆಗಳು ಆಗುತ್ತಲೇ ಇದೆ. ಅದರಲ್ಲೂ ಬಿಜೆಪಿ ಅಧಿಕಾರಕ್ಕೆ ಬಂದ ನಂತರ ಕಾಂಗ್ರೆಸ್ ಹಾಗೂ ವಿಪಕ್ಷ ನಾಯಕರನ್ನು ಇಡಿ,ಐಟಿ,ಸಿಬಿಐ ಮೂಲಕ ಬೆದರಿಸಿ ಬಿಜೆಪಿ ಪಕ್ಷಕ್ಕೆ ಸೇರಿಸುವ ಸಂಪ್ರದಾಯ ಮುಂದುವರೆಸಿದ್ದಾರೆ ಎಂದು ಹರಿಪ್ರಸಾದ್ ಬಿಜೆಪಿ ವಿರುದ್ಧ ಕಿಡಿಕಾರಿದ್ದಾರೆ.
ಮಹಾರಾಷ್ಟ್ರದ ಅಜಿತ್ ಪವಾರ್ ಮೇಲೆ ಇದೇ ಸುಳ್ಳಿನ ಸರದಾರ ನರೇಂದ್ರ ಮೋದಿ ಹಾಗೂ ತಡಿಪಾರ್ ಅಮಿತ್ ಶಾ 70 ಸಾವಿರ ಕೋಟಿಯ ಆರೋಪ ಮಾಡಿ ಸ್ವಲ್ಪ ದಿನದಲ್ಲೇ ಬಿಜೆಪಿಗೆ ಸೇರಿಸಿಕೊಂಡರು. ಅಮಿತ್ ಶಾ ಮಗ ಉದ್ಯಮ ಶುರು ಮಾಡಿದಾಗ ಕೇವಲ 40 ಸಾವಿರ ಇತ್ತು, ಈಗ 40 ಸಾವಿರ ಕೋಟಿ ಆಗಿದೆ. ದೇಶ ಕಂಡ ಖ್ಯಾತ ಕ್ರಿಕೇಟರ್ ಪಾಪ, ಆಲ್ ರೌಂಮಡರ್ ಅಂತಾ ಬಿಸಿಸಿಐ, ಐಸಿಸಿ ಅಧ್ಯಕ್ಷ ಮಾಡಿದ್ದಾರೆ. ಇವರ ಮೇಲೆ ಯಾಕೆ ಇಡಿ ತನಿಖೆ ಮಾಡಲ್ಲ.ಇವರೆಲ್ಲ ಸತ್ಯ ಹರಿಶ್ಚಂದ್ರನ ಮಕ್ಕಳಾ? ಎಂದು ಹರಿಪ್ರಸಾದ್ ಪ್ರಶ್ನಿಸುವ ಮೂಲಕ ಕೇಂದ್ರ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇಡಿ,ಐಟಿ ಕೇವಲ ಕಾಂಗ್ರೆಸ್ ಪಕ್ಷದವರನ್ನ ಮಾತ್ರ ಟಾರ್ಗೆಟ್ ಮಾಡಿ ತನಿಖೆ ಮಾಡುತ್ತೆ. ನಾವು ಇದಕ್ಕೆಲ್ಲಾ ಭಯ ಬೀಳುವವರಲ್ಲ. ನಮ್ಮ ನಾಯಕರಾದ ರಾಹುಲ್ ಗಾಂಧಿ ಮೇಲೆ 52 ಗಂಟೆಗೂ ಹೆಚ್ಚು ಕಾಲ ತನಿಖೆ ಮಾಡಿದ್ರು ಆದ್ರೆ ಏನೂ ಮಾಡೋಕೆ ಆಗ್ಲಿಲ್ಲ. ಸತೀಶ್ ಜಾರಕಿಹೊಳಿ ಜೊತೆಗೆ ನಮ್ಮ ಹೈಕಮಾಂಡ್ ನಿಂತಿದೆ. ಪಕ್ಷ ಗಟ್ಟಿಯಾಗಿ ನಿಂತಿದೆ. ಯಾವ ಕಾರಣಕ್ಕೂ ಸತೀಶ್ ಜಾರಕಿಹೊಳಿಯವರು ಒಂಟಿಯಲ್ಲ. ಅವರ ಶಕ್ತಿ ಏನೂ ಅಂತಾ ಬಿಜೆಪಿಗೆ ಗೊತ್ತಿದೆ ಅದಕ್ಕಾಗಿ ಈ ದಾಳಿ ನಡೆದಿದೆ. ಈ ದಾಳಿಯ ವಿರುದ್ಧ ನಾವೆಲ್ಲ ಹೋರಾಡೋಣ ನಿಮ‌್ಮ ಜೊತೆಗೆ ನಾವು ಇದ್ದೇವೆ ಎಂದು ಭರವಸೆ ನೀಡಿದೆ ಎಂದು ಹರಿಪ್ರಸಾದ್ ಹೇಳಿದ್ದಾರೆ.




