Shivamogga News: ಶಿವಮೊಗ್ಗದ ಪ್ರಸಿದ್ಧ ಜ್ಯೂಸ್ ಅಂಗಡಿ ತನು ಜ್ಯೂಸ್ ಸೆಂಟರ್ ಮೇಲೆ ದಾಳಿ

Shivamogga News: ಶಿವಮೊಗ್ಗದ ಪ್ರಸಿದ್ಧ ಜ್ಯೂಸ್ ಅಂಗಡಿ ತನು ಜ್ಯೂಸ್ ಸೆಂಟರ್ ಮೇಲೆ ಆರೋಗ್ಯ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಅಂಗಡಿಯಲ್ಲಿ ಕೊಳೆತ ಹಣ್ಣುಗಳು ಪತ್ತೆಯಾಗಿದೆ.

ನಗರದ ದುರ್ಗಿ ಗುಡಿ ಬಳಿ ಈ ಜ್ಯೂಸ್ ಅಂಗಡಿ ಇದ್ದು, ಇಲ್ಲಿ ಅತೀ ಹೆಚ್ಚು ದಿನ ಫ್ರೋಜನ್ ಮಾಡಿದ ಹಣ್ಣು, ಹಾಳಾದ ಹಣ್ಣುಗಳು ಪತ್ತೆಯಾಗಿದ್ದು, ಅಂಗಡಿಯನ್ನು ಸೀಜ್ ಮಾಡಲಾಗಿದೆ.

ಸಾರ್ವಜನಿಕರಿಂದ ಈ ಅಂಗಡಿ ವಿರುದ್ಧ ದೂರು ಬಂದ ಹಿನ್ನೆಲೆಯಲ್ಲಿ ಈ ರೇಡ್ ಮಾಡಲಾಗಿದೆ ಎಂದು ಅಧಿಕಾರಿ ಡಾ.ಮೈತ್ರಿ ಹೇಳಿಕೆ ನೀಡಿದ್ದಾರೆ. ಅಲ್ಲದೇ ಈ ಬಗ್ಗೆ ಸೋಶಿಯಲ್ ಮೀಡಿಯಾದಲ್ಲೂ ಹಲವರು ಅಭಿಪ್ರಾಯ ವ್ಯಕ್ತಪಡಿಸಿದ್ದು, ಈ ಅಂಗಡಿಯಲ್ಲಿ ಜ್ಯೂಸ್ ಸೇವಿಸಿದ ಬಳಿಕ, ಆರೋಗ್ಯ ಹಾಳಾಗಿರುವುದಾಗಿ ಹೇಳಿದ್ದಾರೆ.

ಹೀಗಾಗಿ ಜ್ಯೂಸ್ ಅಂಗಡಿಯ ಮೇಲೆ ದಾಳಿ ನಡೆಸಲಾಗಿದೆ. ಈ ಜ್ಯೂಸ್ ಅಂಗಡಿ ಸೇರಿ ಇನ್ನೂ 15ಕ್ಕೂ ಹೆಚ್ಚು ಅಂಗಡಿಗಳ ಮೇಲೆ ದಾಳಿ ನಡೆಸಲಾಗಿದ್ದು, ಹಲವು ಅಂಗಡಿಗಳಲ್ಲಿ ಜಿರಳೆ, ಗಲೀಜು, ಎಕ್ಸ್‌ಪೈರ್ ಆದ ವಸ್ತುಗಳೆಲ್ಲವೂ ಸಿಕ್ಕಿದೆ. ಈ ಅಂಗಡಿಗಳಿಗೆ ತಪ್ಪು ಸರಿಪಡಿಸಿಕ“ಳ್ಳಲು 15 ದಿನಗಳ ಗಡುವು ನೀಡಲಾಗಿದೆ. ಇಲ್ಲದಿದ್ದಲ್ಲಿ ಅಂಗಡಿಯನ್ನು ಸೀಜ್ ಮಾಡುವ ಎಚ್ಚರಿಕೆ ನೀಡಲಾಗಿದೆ.

About The Author