ಸಿಎಂ ಮನಸ್ಸು ಮಾಡಿದ್ರೆ ಸ್ವಂತ ಹಣದಿಂದಲೇ ರೈತರ ಸಾಲಮನ್ನಾ ಮಾಡಬಹುದು: ಹೆಚ್.ಡಿ.ಕುಮಾರಸ್ವಾಮಿ

Bengaluru: ಬೆಂಗಳೂರಿನಲ್ಲಿಂದು ಪ್ರೆಸ್‌ಮೀಟ್ ನಡೆಸಿ ಮಾತನಾಡಿದ ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ, ರಾಜ್ಯ ಸರ್ಕಾರ ಮತ್ತು ಸಿಎಂ ಡಿ.ಕೆ.ಶಿವಕುಮಾರ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ಅಲ್ಲದೇ, ರೈತರ ಸಾಲಾ ಮನ್ನಾ ಮಾಡಲು ನೀವು 2028ರ ಚುನಾವಣೆವರೆಗೆ ಕಾಯಬೇಕಾಗಿಲ್ಲ. ಬದಲಾಗಿ ಸಿಎಂ ಬಳಿ ಇರುವ ಸ್ವಂತ ಹಣವನ್ನು ಖರ್ಚು ಮಾಡಿ, ಈಗಲೇ ರೈತರ ಸಾಲ ಮನ್ನಾ ಮಾಡಬಹುದು ಎಂದು ಕುಮಾರಸ್ವಾಮಿ ವ್ಯಂಗ್ಯವಾಡಿದ್ದಾರೆ.

ನೈಸ್ ರಸ್ತೆ ಕಾಮಗಾರಿಯ ಹೆಸರಿನಲ್ಲಿ ಮಾಡಿರುವ ಹಣವನ್ನು ರೈತರ ಸಾಲ ಮನ್ನಾ ಮಾಡಲು ಬಳಸಿದರೆ, ಮುಂದೆ ಚುನಾವಣೆಯಲ್ಲಿ ನೀವೇ ಗೆಲುವು ಸಾಧಿಸುತ್ತೀರಿ ಎಂದು ಕುಮಾರಸ್ವಾಮಿ, ಸಿಎಂ ಡಿ.ಕೆ.ಶಿವಕುಮಾರ್ ವಿರುದ್ಧ ವ್ಯಂಗ್ಯವಾಡಿದ್ದಾರೆ.

ಅಲ್ಲದೇ ನಾನು ಸಿಎಂ ಆಗಿದ್ದ ಸಂದರ್ಭದಲ್ಲಿ ಕೇಂದ್ರ ಸರ್ಕಾರದ ನೆವು ಪಡೆಯದೇ, ರಾಜ್ಯ ಸರ್ಕಾರದಲ್ಲಿದ್ದ ಹಣದಿಂದಲೇ ರೈತರ ಸಾಲ ಮನ್ನಾ ಮಾಡಿದ್ದೆ. 2 ಬಾರಿ ಸಿಎಂ ಆಗಿದ್ದಾಗ ಅಂದು ಪ್ರಧಾನಮಂತ್ರಿಯಾಗಿದ್ದ ಮನಮೋಹನ್ ಸಿಂಗ್ ಬಳಿಯಾಗಲಿ ಅಥವಾ ಪ್ರಧಾನಿ ಮೋದಿಯವರ ಬಳಿ ಸಾಲ ಮನ್ನಾ ಮಾಡಲು ಸಹಾಯ ಮಾಡಿ ಎಂದು ಕೇಳಿದ್ನಾ? ನಮ್ಮ ತೆರಿಗೆ ಹಣದಿಂದಲೇ ನಾನು ರೈತರ ಸಾಲ ಮನ್ನಾ ಮಾಡಿದ್ದೆ ಎಂದು ಕುಮಾರಸ್ವಾಮಿ ಹೇಳಿದ್ದಾರೆ.

About The Author