Health Tips: ಹಿಂದಿನ ಕಾಲದಲ್ಲಿ ಹಿರಿಯರ ಆಹಾರ ಪದ್ಧತಿ ಮತ್ತು ಜೀವನ ಪದ್ಧತಿ ವಿಶೇಷವಾಗಿತ್ತು. ಸರಳ ಆಹಾರ, ವ್ಯಾಯಾಮವಾಗುವಂಥ ಮನೆಗೆಲಸ ಈ ರೀತಿಯ ಪದ್ಧತಿಯನ್ನು ಪೂರ್ವಜರು ಅನುಸರಿಸುತ್ತಿದ್ದರು. ಹಾಗಾಗಿ ಅವರು ಆರೋಗ್ಯವಾಗಿ ಇರುವುದರ ಜತೆಗೆ, ಸೌಂದರ್ಯ ಮತ್ತು ಆಕರ್ಷಕ ದೇಹದವರಾಗಿರುತ್ತಿದ್ದರು. ಆದರೆ ಇಂದಿನ ಜೀವನ ಶೈಲಿ ಬದಲಾಗಿದೆ.
ಬೀದಿ ಬದಿ ಆಹಾರ ಸೇವನೆ, ಕುಳಿತಲ್ಲೇ ಕೆಲಸ ಮಾಡುದು, ಮಿಷನ್ ಸಹಾಯದಿಂದ ಕೆಲಸ ಮಾಡುವುದು ಇದೆಲ್ಲ ಆಗಿರುವ ಕಾರಣಕ್ಕೆ, ಸೌಂದರ್ಯ, ಆರೋಗ್ಯ, ಆಕರ್ಷಕ ದೇಹ ಇದೆಲ್ಲವೂ ಗಗನ ಕುಸುಮವಾಗಿದೆ. ಉದಾಸೀನ ಮಾಡದೇ, ವ್ಯಾಯಾಮ ಮಾಡಿದರೆ, ಆರೋಗ್ಯಕರ ಆಹಾರ ಸೇವಿಸಿದರೆ, ಉತ್ತಮ ಸೌಂದರ್ಯ ನಮ್ಮದಾಗಬಹುದು. ಆದರೆ ಅದೆಲ್ಲದಕ್ಕೂ ಇಂದಿನ ಕಾಲದಲ್ಲಿ ಜನರಿಗೆ ಸಮಯವಿಲ್ಲ.
ಆದರೆ ನಮ್ಮ ಪೂರ್ವಜರು ಅನುಸರಿಸುತ್ತಿದ್ದ 1 ಕೆಲಸವನ್ನು ನೀವು ಮಾಡಿದರೆ, ನಿಮ್ಮ ಆರೋಗ್ಯ-ಸೌಂದರ್ಯ ಎಲ್ಲವೂ ಉತ್ತಮವಾಗಿರುತ್ತದೆ. ಅದೇ ಅಭ್ಯಂಗ.
ಅಭ್ಯಂಗ ಎಂದರೆ ಎಣ್ಣೆ ಮಸಾಜ್ ಮಾಡುವುದು. ದೇಹದ ಕೆಲವು ಭಾಗಗಳಲ್ಲಿ ವಾರದಲ್ಲಿ 1 ಬಾರಿಯಾದರೂ ಚೆನ್ನಾಗಿ ಮಸಾಜ್ ಮಾಡುವುದರಿಂದ ನಮ್ಮ ಆರೋಗ್ಯ ಚೆನ್ನಾಗಿರುತ್ತದೆ. ದೇಹ ರಿಲ್ಯಾಕ್ಸ್ ಆಗುತ್ತದೆ.
ಕಿವಿಯ ಹಿಂದಿನ ಭಾಗದಲ್ಲಿ ಲೈಟ್ ಆಗಿ ಮಸಾಜ್ ಮಾಡಬೇಕು. ಇದರಿಂದ ಕಿವಿ ನೋವು, ತಲೆನೋವು ಬರುವುದಿಲ್ಲ. ಏಕಾಗೃತೆ ಹೆಚ್ಚುತ್ತದೆ. ವಾತದೋಷ ಕಡಿಮೆ ಮಾಡುತ್ತದೆ.
ಪಾದಗಳಿಗೆ ಪ್ರತಿ ದಿನ ರಾತ್ರಿ ಮಲಗುವ ಮುನ್ನ ಮಸಾಜ್ ಮಾಡಿದ್ರೆ, ಚೆನ್ನಾಗಿ ನಿದ್ರೆ ಬರುತ್ತದೆ. ಅಲ್ಲದೇ, ದೇಹದಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಾಗುತ್ತದೆ. ರಕ್ತಪರಿಚಲನೆ ಚೆನ್ನಾಗಿ ಆಗುತ್ತದೆ. ಆರೋಗ್ಯಕ್ಕೆ ತುಂಬಾ ಉತ್ತಮ ಮಸಾಜ್ ಅಂದ್ರೆ ಅದು ಪಾದಕ್ಕೆ ಎಣ್ಣೆ ಮಸಾಜ್. ಪಾದಕ್ಕೆ ತೆಂಗಿನ ಎಣ್ಣೆ ಮಸಾಜ್ ಮಾಡಬೇಕು.
ನಾಭಿಗೆ ಮಸಾಜ್ : ನಾಭಿಗೆ ಸ್ವಲ್ಪ ಎಣ್ಮೆ ಹಾಕಿ ಪ್ರತಿದಿನ ಮಸಾಜ್ ಮಾಡಿದ್ರೆ, ಆರೋಗ್ಯ ಸುಧಾರಿಸುವುದಲ್ಲದೇ, ಸೌಂದರ್ಯವೂ ಹೆಚ್ಚಾಗುತ್ತದೆ.
ನೆತ್ತಿಗೆ ಮಸಾಜ್ ಮಾಡುವುದರಿಂದ ನೆತ್ತಿಯ ಮೂಲಕ ಎಣ್ಮೆ ನಮ್ಮ ದೇಹ ಸೇರುತ್ತದೆ. ಇದರಿಂದ ಕೂದಲು ಉದುರುವ ಸಮಸ್ಯೆ ಕಡಿಮೆಯಾಗುವುದಲ್ಲದೇ, ದೇಹ ತಂಪಾಗಿರುತ್ತದೆ.




