Health Tips: ಸೋಂಪಿನ ಕಶಾಯ ಕುಡಿಯುವುದರಿಂದ ಆರೋಗ್ಯಕ್ಕಾಗುವ ಲಾಭಗಳೇನು..?

Health Tips: ಸೋಂಪು ತಿನ್ನಲು ಎಷ್ಟು ರುಚಿಕರವೋ, ಆರೋಗ್ಯಕ್ಕೂ ಅಷ್ಟೇ ಉತ್ತಮ. ಅದೇ ರೀತಿ ಸೋಂಪಿನಿಂದ ಮಾಡಿದ ಕಶಾಯ ಕುಡಿದರೂ ಆರೋಗ್ಯಕ್ಕೆ ಅತ್ಯುತ್ತಮ ಲಾಭವಿದೆ. ಹಾಗಾದ್ರೆ ಆ ಆರೋಗ್ಯ ಲಾಭವೇನು ಅಂತಾ ತಿಳಿಯೋಣ ಬನ್ನಿ.

ಸೋಂಪಿನ ಕಶಾಯ ಕುಡಿಯುವುದರಿಂದ ಜೀರ್ಣಕ್ರಿಯೆಗೆ ಸಂಬಂಧಿಸಿದ ಯಾವುದೇ ಸಮಸ್ಯೆ ಇದ್ದರೂ ಅದು ಪರಿಹಾರವಾಗುತ್ತದೆ. ಅಲ್ಲದೇ, ತೂಕ ಇಳಿಸಲು ಪ್ರಯತ್ನಿಸುವವರು ಇದನ್ನು ಅಲ್ಪ ಪ್ರಮಾಣದಲ್ಲಿ ಕುಡಿಯಬಹುದು.

ಅಲ್ಲದೇ ತಿಂಗಳ ನೋವಿನ ಸಂದರ್ಭದಲ್ಲಿ ಸೋಂಪಿನ ಕಶಾಯ ಮಾಡಿ ಕುಡಿದರೆ, ನೋವಿನ ಪ್ರಮಾಣ ಕಡಿಮೆಯಾಗುತ್ತದೆ. ಅಲ್ಲದೇ ಪ್ರತಿದಿನ ಸೋಂಪಿನ ಕಶಾಯ ಕುಡಿದರೂ ತಿಂಗಳ ನೋವಿನ ಸಂದರ್ಭದಲ್ಲಿ ನೋವು ಹೆಚ್ಚಾಗುವುದಿಲ್ಲ. ದೇಹದಲ್ಲಿ ಶಕ್ತಿ ಇರುತ್ತದೆ.

ಅಲ್ಲದೇ ನಿಮಗೆ ಮಲಬದ್ಧತೆ ಸಮಸ್ಯೆ ಇದ್ದಲ್ಲಿ ಸೋಂಪಿನ ಕಶಾಯ ಮಾಡಿ ಕುಡಿಯಬಹುದು. ಇದರಿಂದ ಮಲಬದ್ಧತೆ ಸಮಸ್ಯೆ ಪರಿಹಾರವಾಗುತ್ತದೆ. ಶಿಶುಗಳು ವಾರಗಳವರೆಗೆ ಮಲ ವಿಸರ್ಜನೆ ಮಾಡುವುದಿಲ್ಲ. ಅಂಥ ಸಂದರ್ಭದಲ್ಲಿ 1ರಿಂದ 2 ಸ್ಪೂನ್ ಸೋಂಪಿನ ಕಶಾಯ ಮಾಡಿ ಕುಡಿಸಿದ್ದಲ್ಲಿ, ಮಕ್ಕಳು ಮಲ ವಿಸರ್ಜನೆ ಮಾಡುತ್ತಾರೆ.

ಇನ್ನು ಸೋಂಪಿನ ಕಶಾಯ ಸೇವನೆಯಿಂದ ನಿಮ್ಮ ಸ್ಕಿನ್ ಕೂಡ ಸುಂದರವಾಗುತ್ತದೆ. ಗುಳ್ಳೆಗಳು ಬರುವುದಿಲ್ಲ. ಸ್ಕಿನ್ ಕ್ಲೀನ್ ಆಗಿರುತ್ತದೆ. ಕಶಾಯದ ಸೇವನೆಯಿಂದ ನೀರು ದೇಹಕ್ಕೆ ಹೋಗುವ ಮೂಲಕ ದೇಹದಲ್ಲಿರುವ ಟಾಕ್ಸಿಕ್ ಅಂಶವನ್ನು ತೆಗೆದು ಹಾಕುತ್ತದೆ. ಇದರಿಂದ ನಿಮ್ಮ ಸ್ಕಿನ್ ಗ್ಲೋ ಆಗುತ್ತದೆ.

ನಿಮಗೆ ಉರಿಮೂತ್ರ ಹೋಗುತ್ತಿದ್ದರೆ, ನೀವು ಸೋಂಪಿನ ಕಶಾಯ ಮಾಡಿ ಸೇವಿಸಿ ನೋಡಬಹುದು. ಕಣ್ಣಿನ ಆರೋಗ್ಯ, ಹೃದಯದ ಆರೋಗ್ಯ ಸೇರಿ ಎಲ್ಲ ರೀತಿಯ ಸಮಸ್ಯೆಯಿಂದ ಮುಕ್ತಿ ನೀಡುವಲ್ಲಿ ಸೋಂಪಿನ ಕಶಾಯ ನಿಮಗೆ ಸಹಾಯ ಮಾಡುತ್ತದೆ.

ಇನ್ನು ನಿಮಗೆ ಸೋಂಪು ಸೇವಿಸಿದ್ದಲ್ಲಿ ಅಲರ್ಜಿ ಎಂದಾದಲ್ಲಿ ವೈದ್ಯರ ಬಳಿ ಸಲಹೆ ಪಡೆದು ಬಳಿಕ ಕಶಾಯ ಸೇವಿಸುವುದು ಉತ್ತಮ.

About The Author