Bigg Boss Kannada Season 13: ಬಿಗ್ಬಾಸ್ ಕನ್ನಡ ಸೀಸನ್ 13 ಶುರುವಾಗಿದ್ದು, ಸೆಲೆಬ್ರಿಟಿಗಳಿಂದ ಹೆಚ್ಚು ಹವಾ ಎಬ್ಬಿಸ್ತಾ ಇರೋದು ಕಾಮನ್ ಮ್ಯಾನ್. ಕಿರಣ್ ಶಾಸ್ತ್ರಿ, ಮಾಡರ್ನ್ ಮಂಜಾ ಹೆಚ್ಚು ಸದ್ದು ಮಾಡುತ್ತಿದ್ದು, ಮನೆ ಮಂದಿ ಎಲ್ಲ ಇವರಿಂದ ರೋಸಿ ಹೋಗಿರುವ ಹಾಗೆ ಕಾಣುತ್ತಿದೆ. ಏಕೆಂದರೆ ಪ್ರತಿ ದಿನ ಇವರಿಬ್ಬರ ವಿಚಾರದಲ್ಲಿ ಜಗಳ ತಪ್ಪುತ್ತಲೇ ಇಲ್ಲ. ಯಾವುದಾದರೂ ವಿಷಯಕ್ಕೆ ಇವರಿಬ್ಬರೂ ಕಿರಿಕ್ ಮಾಡುತ್ತಲೇ ಇದ್ದಾರೆ.
ಇದೀಗ ಕಿರಣ್ ಶಾಸ್ತ್ರಿ ಮತ್ತು ಆಸಿಯಾ ನಡುವೆ ಜಗಳ ನಡೆದಿದ್ದು, ಆಸಿಯಾಳ ಕೋಪ ನೆತ್ತಿಗೇರಿ ಮನೆ ಮಂದಿ ಎಲ್ಲ ಶಾಕ್ ಆಗೋ ರೇಂಜಿಗೆ ಆಸಿಯಾ ಕಿರಣ್ಗೆ ಆವಾಜ್ ಹಾಕಿದ್ದಾರೆ.
ಟಾಸ್ಕ್ ವಿಚಾರವಾಗಿ ಆಸಿಯಾ ಮತ್ತು ಕಿರಣ್ ಮಾತನಾಡುತ್ತಿರುವಾಗ, ಆಸಿಯಾ ತೆಗೆದುಕೋಳ್ಳುವ ನಿರ್ಣಯ ಸರಿಯಾಗಿಲ್ಲ ಎಂದು ಕಿರಣ್ ಕಿರಿಕ್ ಮಾಡಿದ್ದಾರೆ. ಅಲ್ಲದೇ ಆಸಿಯಾ ಅವಿನಾಶ್ ಅವರ ಬಳಿ ಮಾತನಾಡುವಾಗ, ಎಲ್ಲ ವಿಷಯದಲ್ಲೂ ಕ್ಯಾಪ್ಟನ್ ಆದವರು ಉತ್ತಮ ನಿರ್ಧಾರ ತೆಗೆದುಕ“ಳ್ಳಬೇಕು ಎಂದು ಕಿರಣ್ ಹೇಳಿದ್ದಾರೆ.
ಈ ವೇಳೆ ಪಿತ್ತ ನೆತ್ತಿಗೇರಿ ಕೋಪಗ“ಂಡ ಆಸಿಯಾ, ಏ ಮುಚ್ಚೋ ಬಾಯಿ, ನಿನ್ನ ಹತ್ರ ಮಾತಾಡ್ತಿಲ್ಲಾ ನಾನು. ಎಲ್ಲಾದಕ್ಕೂ ಮೂಗು ತೂರಿಸ್ಕೋಂಡು ಬಂದ್ ಬಿಡ್ತಾನೆ ಎಂದು ಬೈದಿದ್ದಾರೆ. ಎಲ್ಲಾದಕ್ಕೂ ನಾನು ನಾನು ನಾನು ನಾನು ಅಂತಾ, ಸುಮ್ನೇ ಇರ್ಬೇಕು ಎಂದು ಆಸಿಯಾ ಕಿರಣ್ಗೆ ಜೋರು ಮಾಡಿದ್ದಾರೆ. ಜಗಳ ಆಗಿದ್ದಕ್ಕೆ ಪ್ರಮುಖ ಕಾರಣವೇನು ಅಂತಾ ಇಂದಿನ ಬಿಗ್ಬಾಸ್ ಸಂಚಿಕೆಯಲ್ಲಿ ನೋಡಬೇಕಿದೆ.




