Amaravati: ಸಾರ್ವಜನಿಕ ಗಣೇಶೋತ್ಸವದಲ್ಲಿ ಅನ್ನ ಪ್ರಸಾದ ವಿತರಣೆ ನಿಮಿತ್ತ ತಯಾರಿಸಲಾಗಿದ್ದ ಸಾಂಬಾರ್ ಪಾತ್ರೆಗೆ ಬಿದ್ದು ಓರ್ವ ಮಹಿಳೆ ಸಾವನ್ನಪ್ಪಿದ ಘಟನೆ ಆಂಧ್ರಪ್ರದೇಶದ ವಿಜಯವಾಡದಲ್ಲಿ ನಡೆದಿದೆ.
46 ವರ್ಷದ ಸುಜಾಾತಾ ಎಂಬಾಕೆ ಸಾವನ್ನಪ್ಪಿದ್ದು, ಈಕೆ ಗಣೇಶೋತ್ಸವದ ಅನ್ನಸಂತರ್ಪಣೆ ಅಡುಗೆ ಕಾರ್ಯಕ್ಕೆ ಸಹಾಯಕ್ಕೆಂದು ಬಂದಿದ್ದಳು ಎಂದು ಪೋಲೀಸರು ಮತ್ತು ಸ್ಥಳೀಯರು ಮಾಹಿತಿ ನೀಡಿದ್ದಾರೆ.
ಈಕೆ ಸಾಂಬಾರ್ ತೆಗೆದುಕ“ಂಡು ಹೋಗುತ್ತಿದ್ದಾಗ, ಆಯತಪ್ಪಿ ಕುದಿಯುವ ಸಾಂಬಾರ್ನಲ್ಲಿ ಬಿದ್ದಿದ್ದು, ದೇಹ ಸುಟ್ಟು ಹೋಗಿದೆ. ತಕ್ಷಣವೇ ಆಕೆಯನ್ನು ಆಸ್ಪತ್ರೆಗೆ ಕರೆದ“ಯ್ಯಲಾಗಿದ್ದರೂ, ಚಿಕಿತ್ಸೆ ನೀಡುವ ಪ್ರಯತ್ನ ನಡೆಸಲಾಯಿತಾದರೂ, ಚಿಕಿತ್ಸೆ ಫಲಿಸದೇ ಸುಜಾತಾ ಸಾವನ್ನಪ್ಪಿದ್ದಾರೆ.
ಪೋಲೀಸರು ಈ ಬಗ್ಗೆ ದೂರು ದಾಖಲಿಸಿ ತನಿಖೆ ಆರಂಭಿಸಿದ್ದಾರೆ. ಸುಜಾತಾ ಹೇಗೆ ಪಾತ್ರೆಗೆ ಬಿದ್ದರೂ ಎಂಬ ದೃಶ್ಯ ಇಲ್ಲಿನ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಇದರ ಆಧಾರದ ಮೇಲೆ ತನಿಖೆ ಮುಂದುವರಿದಿದೆ.




